ಬೆಂಗಳೂರಿನಲ್ಲಿ ಕೊರೊನಾ ಜ್ವಾಲಾಮುಖಿ, 3 ಸಾವಿರ ದಾಟಿದ ಸೋಂಕಿತರ ಸಂಖ್ಯೆ!
ಬೆಂಗಳೂರು: ಕೊರೊನಾ ಹೆಮ್ಮಾರಿ ಕೊಟ್ಟ ಸಂಡೇ ಶಾಕ್ಗೆ ರಾಜಧಾನಿಯ ನರನಾಡಿಗಳು ನಡುಗಿ ಹೋಗಿದೆ. ದಾಳಿ ಮಾಡದ ಏರಿಯಾಗಳಿಲ್ಲ. ನಂಜು ಹರಡದ ವಾರ್ಡ್‌ಗಳಿಲ್ಲ. ಬೆಂಗಳೂರಿನ ಗಲ್ಲಿಗಲ್ಲಿಗೂ ಕ್ರೂರಿ ಕಾಲಿಟ್ಟಿದೆ. ಸೋಂಕಿನ ಸುನಾಮಿಗೆ ಬೆಚ್ಚಿ ಬಿದ್ದ ಬೆಂಗಳೂರು! ಯೆಸ್.. ಸಿಲಿಕಾನ್ ಸಿಟಿ ಮೇಲೆ ಕೊರೊನಾ ಸೋಂಕಿನ ಕ್ಷಿಪಣಿಯೇ ಬಿದ್ದಿದೆ. ಅದು ನಿನ್ನೆ ಒಂದೇ ದಿನ 783 ಮಂದಿ ದೇಹ ಹೊಕ್ಕು ಅಟ್ಟಹಾಸ ಮೆರೆದಿದೆ. ಬೆಂಗಳೂರನ್ನೇ ಬಲಿಪೀಠ ಮಾಡ್ಕೊಂಡಿರೋ ಕ್ರೂರಿ ವೈರಸ್ ನಾಲ್ವರನ್ನ ಕೊಂದು ಹಾಕಿ ಕ್ರೌರ್ಯ ಮೆರೆದಿದೆ. ಸಿಟಿಗೆ ‘ಕಿಲ್ಲರ್’ […]

ಬೆಂಗಳೂರು: ಕೊರೊನಾ ಹೆಮ್ಮಾರಿ ಕೊಟ್ಟ ಸಂಡೇ ಶಾಕ್ಗೆ ರಾಜಧಾನಿಯ ನರನಾಡಿಗಳು ನಡುಗಿ ಹೋಗಿದೆ. ದಾಳಿ ಮಾಡದ ಏರಿಯಾಗಳಿಲ್ಲ. ನಂಜು ಹರಡದ ವಾರ್ಡ್‌ಗಳಿಲ್ಲ. ಬೆಂಗಳೂರಿನ ಗಲ್ಲಿಗಲ್ಲಿಗೂ ಕ್ರೂರಿ ಕಾಲಿಟ್ಟಿದೆ.
ಸೋಂಕಿನ ಸುನಾಮಿಗೆ ಬೆಚ್ಚಿ ಬಿದ್ದ ಬೆಂಗಳೂರು! ಯೆಸ್.. ಸಿಲಿಕಾನ್ ಸಿಟಿ ಮೇಲೆ ಕೊರೊನಾ ಸೋಂಕಿನ ಕ್ಷಿಪಣಿಯೇ ಬಿದ್ದಿದೆ. ಅದು ನಿನ್ನೆ ಒಂದೇ ದಿನ 783 ಮಂದಿ ದೇಹ ಹೊಕ್ಕು ಅಟ್ಟಹಾಸ ಮೆರೆದಿದೆ. ಬೆಂಗಳೂರನ್ನೇ ಬಲಿಪೀಠ ಮಾಡ್ಕೊಂಡಿರೋ ಕ್ರೂರಿ ವೈರಸ್ ನಾಲ್ವರನ್ನ ಕೊಂದು ಹಾಕಿ ಕ್ರೌರ್ಯ ಮೆರೆದಿದೆ.
ಸಿಟಿಗೆ ‘ಕಿಲ್ಲರ್’ ಶಾಕ್! ಅಂದಹಾಗೆ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 66 ವರ್ಷದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಉಸಿರು ಚೆಲ್ಲಿದ್ದಾರೆ. ಹಾಗೇ, 65 ವರ್ಷದ ವೃದ್ಧನನ್ನೂ ರಕ್ಕಸ ನುಂಗಿ ಹಾಕಿದ್ದಾನೆ. ಇಷ್ಟೇ ಅಲ್ಲ 62 ವರ್ಷದ ಮತ್ತೊಬ್ಬ ವೃದ್ಧ ಕೂಡ ಕೊರೊನಾ ಕುಲುಮೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ರೆ, 55 ವರ್ಷದ ಮತ್ತೊಬ್ಬ ಸೋಂಕಿತ ಕೂಡ ಸಾವಿನ ಮನೆ ಸೇರಿದ್ದಾನೆ. ಈ ಮೂಲಕ ಬೆಂಗಳೂರಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.
ಬೆಂಗಳೂರಲ್ಲಿ 3 ಸಾವಿರದ ಗಡಿ ದಾಟಿದ ಕೊರೊನಾ! ಇಡೀ ರಾಜ್ಯದ್ದೇ ಒಂದು ಲೆಕ್ಕವಾದ್ರೆ, ಬೆಂಗಳೂರಿನ ಪಾಲಿಗೆ ಕೊರೊನಾದ ಲೆಕ್ಕವೇ ಬೇರೆಯಾಗಿದೆ. ಯಾಕಂದ್ರೆ, ಕಳೆದೊಂದು ವಾರದಿಂದ ಸಿಟಿಯಲ್ಲಿ ನಿತ್ಯವೂ ಕೊರೊನಾ ಶತಕ ಬಾರಿಸ್ತಿದೆ. ಅದ್ರಲ್ಲೂ, ಐದು ದಿನದಿಂದ ಕೊರೊನಾ ಅಂಕಿ ಅಂಶ ಕೇಳ್ತಿದ್ರೆ, ಭಯ ಹುಟ್ಟಿಸ್ತಿದೆ.
ಕ್ರೂರಿ ಹೆಜ್ಜೆ ಗುರುತು! ಇದೇ ತಿಂಗಳ 24ನೇ ತಾರೀಖು ಅಂದ್ರೆ ಬುಧವಾರ ಬೆಂಗಳೂರಿಗೆ ಭಾರಿ ಶಾಕ್ ಬಿದ್ದಿತ್ತು. ಯಾಕಂದ್ರೆ, ಅಂದು ಒಂದೇ ದಿನ 173 ಜನರಲ್ಲಿ ಕೊರೊನಾ ಕನ್ಪರ್ಮ್ ಆಗಿತ್ತು. ನಂತರ, 25ನೇ ತಾರೀಖು ಬೆಂಗಳೂರಲ್ಲ 113 ಜನರಲ್ಲಿ ಸೋಂಕು ಧೃಡಪಟ್ಟಿತ್ತು. ಅದಾದ ಮಾರನೇ ದಿನ ಅಂದ್ರೆ, 26ನೇ ತಾರೀಖು 144 ಜನರ ಮೈಗೆ ರಕ್ಕಸ ಹೊಕ್ಕಿದ್ದ. ಇನ್ನು ಜೂನ್ 27ನೇ ತಾರೀಖು ಅಂದ್ರೆ ಶನಿವಾರ ಅನಾಮತ್ತು 596 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಇದನ್ನ ಅರಗಿಸಿಕೊಳ್ಳೋದ್ರೊಳಗೆ ನಿನ್ನೆ ಬರೋಬ್ಬರಿ 783 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಈ ಮೂಲಕ, ಬೆಂಗಳೂರಿನಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಅಳಿಸಿಹಾಕಿ ಕೊರೊನಾ ರಣಕೇಕೆ ಹಾಕಿದೆ.
ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ 10 ಜನರಿಗೆ ಸೋಂಕು! ರಾಜಧಾನಿ ಬೆಂಗಳೂರಿನ ಕೇರಿ ಕೇರಿಯಲ್ಲೂ ವೈರಿ ಬಾಂಬ್ ಸ್ಫೋಟವಾಗ್ತಿದ್ರೆ, ಟಿ.ದಾಸರಹಳ್ಳಿಯಲ್ಲಿ ನಿನ್ನೆ 10 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. ನಿನ್ನೆ ಒಂದೇ ದಿನ 10 ಮಂದಿ ಕೊರೊನಾ ಕೂಪಕ್ಕೆ ಬಿದ್ದಿರೋದ್ರಿಂದ ಸೋಂಕಿತರಿದ್ದ ವಾರ್ಡ್‌ಗಳಲ್ಲಿ ಔಷಧ ಸಿಂಪಡಣೆಗೆ ಸೂಚಿಸಲಾಗಿದೆ.
ಬೆಂಗಳೂರಲ್ಲಿ ಕೊರೊನಾ ಸ್ಫೋಟ ನಡುವೆ ಬಿಗ್ ಶಾಕ್! ಇನ್ನೊಂದೆಡೆ ಬೆಂಗಳೂರಿನಲ್ಲಿ ಕೊರೊನಾ ವಿಸ್ಫೋಟದ ನಡುವೆ ಬರಸಿಡಿಲು ಬಂದಪ್ಪಳಿಸದಂತಾಗಿದೆ. ರಾಜಧಾನಿಯಲ್ಲಿ ನಿನ್ನೆ ಕೊರೊನಾ ವಿಸ್ಫೋಟಗೊಂಡಿದ್ರೆ ನಿನ್ನೆ ಒಂದೇ ಒಂದು ಕೇಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೇ ಇಲ್ಲ. ಕ್ರೂರಿ ಕೊರೊನಾ ಕೂಪಕ್ಕೆ ಬಿದ್ದು ಆಸ್ಪತ್ರೆ ಸೇರಿದ್ದವರಲ್ಲಿ ಯಾರೊಬ್ಬರು ಕೂಡ ನಿನ್ನೆ ಗುಣಮುಖರಾಗಿ ಹೊರ ಬಾರದೆ ಇರೋದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಒಟ್ನಲ್ಲಿ, ಬೆಂಗಳೂರಿನ ಸದ್ಯದ ಸ್ಥಿತಿಯಂತೂ ಮಾಮೂಲಿಯಾಗಿಲ್ಲ. ರಾಜಧಾನಿಯ ಕಣ ಕಣದಲ್ಲೂ ಕೊರೊನಾ ವಕ್ಕರಿಸಿದಂತೆ ಕಾಣ್ತಿದೆ. ಸಿಕ್ಕ ಸಿಕ್ಕವ್ರಿಗೆಲ್ಲ ಸೋಂಕು ಪತ್ತೆಯಾಗ್ತಿದೆ. ಹೀಗಾಗಿ, ಸಿಲಿಕಾನ್ ಸಿಟಿ ಮಂದಿ ಎಚ್ಚರವಾಗಿ ಇರಲೇಬೇಕು. ಮನೆಯಿಂದ ಹೊರಗೆ ಕಾಲಿಟ್ಟ ಪ್ರತಿ ಕ್ಷಣವೂ ಎಚ್ಚರವಾಗಿರಬೇಕು. ಇಲ್ಲದಿದ್ರೆ ಆ ದೇವರು ಬಂದ್ರೂ ಎಲ್ಲರನ್ನ ಕಾಪಾಡೋದು ಕಷ್ಟ.




