ಬೆಂಗಳೂರು: ಐ.ಎ.ಎಸ್, ಐಪಿಎಸ್ ಅಧಿಕಾರಿಗಳ ಹೆಸರು ಹೇಳಿ 59 ಲಕ್ಷ ರೂ. ವಂಚನೆ (Fraud) ಮಾಡಿದ್ದ ಆರೋಪಿ ಸಿದ್ದರಾಜು ಕಟ್ಟಿಮನಿ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಕೆಎಎಸ್ ಪಾಸ್ ಮಾಡಿಸುವುದಾಗಿ ಹೇಳಿ ವಂಚಕ ಹಣ ಪಡೆದಿದ್ದ. ವಂಚನೆಗೊಳಗಾದ ಸವಿತಾ ಶಾಂತಪ್ಪ ದೂರಿನ ಮೇರೆಗೆ ವಂಚಕನನ್ನು ಬಂಧನ ಮಾಡಲಾಗಿದೆ. ಸವಿತಾ ಮೂಲತಃಹ ಕಲಬುರಗಿ ಜಿಲ್ಲೆಯ ಅಫಜಲಪುರದವರು. ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸವಿತಾಗೆ ಆರೋಪಿ ಸಿದ್ದರಾಜ್ ಕಟ್ಟಿಮನಿ ಪರಿಚಿತನಾಗಿದ್ದ. ಆರೋಪಿಗೆ ಮೊದಲ ಹಂತದಲ್ಲಿ 15 ಲಕ್ಷ ಹಣ ನೀಡಿದ್ದ ಸವಿತಾ, ಬಳಿಕ ಹಂತ ಹಂತವಾಗಿ 59 ಲಕ್ಷ ಹಣ ಸಿದ್ದರಾಜ್ ಪೀಕಿದ್ದಾನೆ.
ಇದನ್ನೂ ಓದಿ: Shocking News: ಅಕ್ರಮ ಸಂಬಂಧಕ್ಕೆ ವಿರೋಧ; ಗಂಡನನ್ನೇ ಬೆಂಕಿ ಹಚ್ಚಿ ಕೊಂದ ಹೆಂಡತಿ
IAS ಅಧಿಕಾರಿ ಶಾಲಿನಿ ರಜನೀಶ್, ಪ್ರವೀಣ್ ಸೂದ್ ನನಗೆ ಪರಿಚಿತರೆಂದು ಸಿದ್ದರಾಜ್ ನಂಬಿಸಿದ್ದ. ಜಮೀನು ಅಡಮಾನವಿಟ್ಟು ಸವಿತಾ ತಂದೆ ಶಾಂತಪ್ಪ ಹಣ ನೀಡಿದ್ದರು. ಏನ್ ಮಾಡ್ತಿಯೋ ಮಾಡ್ಕೋ, ಹಣ ವಾಪಸ್ ಕೊಡಲ್ಲ ಅಂದಿದ್ದ. ಮತ್ತೆ ಮತ್ತೆ ಹಣ ಕೇಳಿದ್ರೆ ನಿಮ್ಮ ಮನೆಯಲ್ಲಿ ಯಾರನ್ನೂ ಉಳಿಸಲ್ಲವೆಂದು ಹಣ ಪಡೆದು ಸವಿತಾಗೆ ಬೆದರಿಕೆ ಹಾಕಿದ್ದ. ಕೆಲಸ ಸಿಗದೇ ಹಣವೂ ಕಳೆದುಕೊಂಡು ಸವಿತಾ ಕುಟುಂಬ ಕಣ್ಣೀರು ಹಾಕಿದೆ. ಸದ್ಯ ತನಗಾದ ಅನ್ಯಾಯದ ಬಗ್ಗೆ ವಿಜಯನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ದೂರಿನನ್ವಯ ಐಪಿಸಿ 420 ಅಡಿ ಪ್ರಕರಣ ದಾಖಲಿಸಿ ಸಿದ್ದರಾಜ್ ಕಟ್ಟಿಮನಿ ಬಂಧನ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ:
ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತವಾಗಿದ್ದು, 9ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮದ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಖಾಸಗಿ ಬಸ್ ಉರುಳಿದ್ದು, ಬೆಂಗಳೂರು ಕಡೆಯಿಂದ ಸಿಂದಗಿ ಕಡೆಗೆ ಖಾಸಗಿ ಬಸ್ ಹೋಗುತ್ತಿತ್ತು. ಒಬ್ಬ ಪ್ರಯಾಣಿಕನ ಕೈ ಕಟ್ ಆಗಿದೆ. ಗಾಯಗೊಂಡವರನ್ನು ಜಗಳೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಯಾವುದೇ ಜೀವಹಾನಿ ಆಗಿಲ್ಲ. ಜಗಳೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇನ್ನಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:39 pm, Wed, 10 August 22