
ಬೆಂಗಳೂರು: ಕತ್ರಿಗುಪ್ಪೆಯ ಭುವನೇಶ್ವರಿ ನಗರದ ಕೊರೊನಾ ಸೋಂಕಿತ ವೃದ್ಧನ ಮನೆಯಲ್ಲಿ 7 ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ನಿನ್ನೆ ಬೆಳಗ್ಗೆಯಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರು ಏನೂ ಪ್ರಯೋಜನವಾಗಿಲ್ಲ.
ಕತ್ರಿಗುಪ್ಪೆಯ ಭುವನೇಶ್ವರಿ ನಗರದ ನಿವಾಸಿಯಾಗಿರುವ ವೃದ್ಧನಿಗೆ ಕೊರೊನಾ ಧೃಡಪಟ್ಟಿದ್ದು ವೃದ್ಧನನ್ನು ಕುಟುಂಬದವರೆ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ. ಆದರೆ ಆದೇ ಕುಟುಂಬದ ಏಳು ಜನ ಜ್ವರ ಸೇರಿದಂತೆ ಕೆಲವು ಲಕ್ಷಣಗಳಿಂದ ಬಳಲುತ್ತಿದ್ದು, ನಿನ್ನೆ ಬೆಳಿಗ್ಗೆಯಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಸೋಂಕಿತರ ಮನೆ ಇನ್ನೂ ಸ್ಯಾನಿಟೈಸ್ ಆಗಿಲ್ಲ, ಸೀಲ್ ಡೌನ್ ಮಾಡಿಲ್ಲ, ಕುಟುಂಬದವರ ಸ್ವಾಬ್ ಟೆಸ್ಟ್ ಪಡೆದಿಲ್ಲ, ಸೋಂಕಿನ ಲಕ್ಷಣಗಳಿಂದ ಬಳಲುತ್ತಿರುವ ಕುಟುಂಬಸ್ಥರು ತಮ್ಮಿಂದ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಹರಡುವ ಆತಂಕದಲ್ಲೇ ಜೀವನ ನೆಡೆಸುವಂತಾಗಿದೆ.