AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

50-70 ಸೋಂಕಿತರು ಸಾವು, ಬೆಂಗಳೂರಿನ ವಿದ್ಯುತ್ ಚಿತಾಗಾರಗಳು ಹೌಸ್ ಫುಲ್!

ಬೆಂಗಳೂರು:ಬೆಂಗಳೂರಿನಲ್ಲಿ ಪ್ರತಿ ನಿತ್ಯ ಕೊರೊನಾ ಸೋಂಕಿನಿಂದ 50 ರಿಂದ 70 ಜನ ಸಾವನ್ನಪ್ಪುತ್ತಿದ್ದು, ಅಂತ್ಯಸಂಸ್ಕಾರಕ್ಕೆ‌ ವಿದ್ಯುತ್ ಚಿತಾಗಾರಗಳ ಸಮಸ್ಯೆ ಎದುರಾಗಿದೆ. ಬೆರಳೆಣಿಕೆಯಷ್ಟಿರುವ ಚಿತಾಗಾರಗಳ ಮುಂದೆ ಸೋಂಕಿತರ ಮೃತದೇಹ ಹಾಗೂ ಬೇರೆ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವ ಸ್ಥಿತಿ‌ ನಿರ್ಮಾಣವಾಗಿದೆ. ಓರ್ವ ಸೋಂಕಿತನ ಮೃತದೇಹವನ್ನು ಬರ್ನ್ ಮಾಡಲು ಒಂದು ಗಂಟೆ ಸಮಯ ಬೇಕಾಗಿದ್ದು, ನಿತ್ಯ 50-70 ಕೋವಿಡ್ ಮೃತದೇಹಗಳು ಬರುತ್ತಿವೆ. ಇದರಿಂದ ವಿಲ್ಸನ್ ಗಾರ್ಡನ್, ಬನಶಂಕರಿ ಚಿತಾಗಾರ, ಸುಮ್ಮನಹಳ್ಳಿ, ಹೆಬ್ಬಾಳ ಚಿತಾಗಾರಗಳ ಮುಂದೆ ಕೋವಿಡ್ ಮೃತ ದೇಹ […]

50-70 ಸೋಂಕಿತರು ಸಾವು, ಬೆಂಗಳೂರಿನ ವಿದ್ಯುತ್ ಚಿತಾಗಾರಗಳು ಹೌಸ್ ಫುಲ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jul 18, 2020 | 12:25 PM

Share

ಬೆಂಗಳೂರು:ಬೆಂಗಳೂರಿನಲ್ಲಿ ಪ್ರತಿ ನಿತ್ಯ ಕೊರೊನಾ ಸೋಂಕಿನಿಂದ 50 ರಿಂದ 70 ಜನ ಸಾವನ್ನಪ್ಪುತ್ತಿದ್ದು, ಅಂತ್ಯಸಂಸ್ಕಾರಕ್ಕೆ‌ ವಿದ್ಯುತ್ ಚಿತಾಗಾರಗಳ ಸಮಸ್ಯೆ ಎದುರಾಗಿದೆ. ಬೆರಳೆಣಿಕೆಯಷ್ಟಿರುವ ಚಿತಾಗಾರಗಳ ಮುಂದೆ ಸೋಂಕಿತರ ಮೃತದೇಹ ಹಾಗೂ ಬೇರೆ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವ ಸ್ಥಿತಿ‌ ನಿರ್ಮಾಣವಾಗಿದೆ.

ಓರ್ವ ಸೋಂಕಿತನ ಮೃತದೇಹವನ್ನು ಬರ್ನ್ ಮಾಡಲು ಒಂದು ಗಂಟೆ ಸಮಯ ಬೇಕಾಗಿದ್ದು, ನಿತ್ಯ 50-70 ಕೋವಿಡ್ ಮೃತದೇಹಗಳು ಬರುತ್ತಿವೆ. ಇದರಿಂದ ವಿಲ್ಸನ್ ಗಾರ್ಡನ್, ಬನಶಂಕರಿ ಚಿತಾಗಾರ, ಸುಮ್ಮನಹಳ್ಳಿ, ಹೆಬ್ಬಾಳ ಚಿತಾಗಾರಗಳ ಮುಂದೆ ಕೋವಿಡ್ ಮೃತ ದೇಹ ಹೊತ್ತ ಆಂಬುಲೆನ್ಸ್ ಗಳ ಸಾಲು ದಿನೇ ದಿನೇ ಹೆಚ್ಚುತ್ತಲೆ ಇದೆ. ಜೊತೆಗೆ ಕೊರೊನಾ ಸೋಂಕಿಲ್ಲದೆ ಮೃತಪಟ್ಟ ಮೃತ ದೇಹಗಳನ್ನ ತಂದ ಕುಟುಂಬಸ್ಥರು ಗಂಟೆಗಟ್ಟಲೆ ಆತಂಕದಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು