ಏಳಂತಸ್ತಿನ ಕಟ್ಟಡ ಅನಾಮತ್ತಾಗಿ ಕುಸಿದರೂ ಪ್ರಾಣಹಾನಿ ಸಂಭವಿಸದಿರುವುದು ಪವಾಡವೇ ಸರಿ

ಏಳಂತಸ್ತಿನ ಕಟ್ಟಡ ಅನಾಮತ್ತಾಗಿ ಕುಸಿದರೂ ಪ್ರಾಣಹಾನಿ ಸಂಭವಿಸದಿರುವುದು ಪವಾಡವೇ ಸರಿ

TV9 Web
| Updated By: Vinay Bhat

Updated on: Oct 02, 2021 | 6:49 AM

ಕಟ್ಟಡ ಕುಸಿಯುವಾಗ ಅದರ ಕೆಲ ಭಾಗಗಳು ಅಕ್ಕಪಕ್ಕದ ಎರಡು ಕಟ್ಟಡಗಳಿಗೆ ತಾಕಿದ್ದರಿಂದ ಅವುಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಕಟ್ಟಡಗಳಲ್ಲಿ ಒಂದು ಹೋಟೆಲ್ ಎನ್ನುವುದು ಗೊತ್ತಾಗಿದೆ.

ಈ ವಿಡಿಯೋ ನೋಡಿ. 7-ಮಹಡಿ ಕಟ್ಟಡವೊಂದು ಅನಾಮತ್ತಾಗಿ ಕುಸಿದು ಬೀಳುತ್ತಿರುವ ದೃಶ್ಯವಿದು. ಅಂದಹಾಗೆ ಇದು ಸಂಭವಿಸಿದ್ದು ಹಿಮಾಚಲ ಪ್ರದೇಶದ ಶಿಮ್ಲಾನಲ್ಲಿ. ರಾಜ್ಯ ವಿಪತ್ತು ನಿರ್ವಹಣೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಭೂ ಕೊರೆತವವುಂಟಾದ ಪರಿಣಾಮ ವಸತಿ ಸಮುಚ್ಛಯದ ಕಟ್ಟಡ ಕುಸಿದು ಬಿದ್ದಿದೆ. ಅದು ಕುಸಿದು ಬೀಳುವಾಗ ಪಕ್ಕದ ಎರಡು ಕಟ್ಟಡಗಳಿಗೆ ಹಾನಿಯುಂಟಾಗಿದೆ. ಸೋಜಿಗದ ಸಂಗತಿಯೆಂದರೆ, ಈ ದುರಂತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾ ಅವರು ನೀಡಿರುವ ಹೇಳಿಕೆಯ ಪ್ರಕಾರ ಇತ್ತೀಚಿಗೆ ಸುರಿದ ಭಾರಿ ಮಳೆ ಮತ್ತು ಅದರಿಂದ ಉಂಟಾದ ಭೂ ಕೊರೆತದಿಂದ ಶಿಮ್ಲಾದ ಹಲಿ ಅರಮನೆಗೆ ಹತ್ತಿರದ ಘೋಡಾ ಚೌಕಿಯಲ್ಲಿನ 7-ಅಂತಸ್ತಿನ ಕಟ್ಟಡ ಗುರುವಾರ ಮಧ್ಯಾಹ್ನ ಕುಸಿಯಿತು.

ಕಟ್ಟಡ ಕುಸಿಯುವಾಗ ಅದರ ಕೆಲ ಭಾಗಗಳು ಅಕ್ಕಪಕ್ಕದ ಎರಡು ಕಟ್ಟಡಗಳಿಗೆ ತಾಕಿದ್ದರಿಂದ ಅವುಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಕಟ್ಟಡಗಳಲ್ಲಿ ಒಂದು ಹೋಟೆಲ್ ಎನ್ನುವುದು ಗೊತ್ತಾಗಿದೆ.

ಕುಸಿದ ಕಟ್ಟಡದಲ್ಲಿ ವಾಸವಾಗಿದ್ದವರಿಗೆ ತಕ್ಷಣದ ಪರಿಹಾರವಾಗಿ ತಲಾ 10,000 ರೂಪಾಯಿಗಳ ಪರಿಹಾರವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ ಎಂದು ಮೊಕ್ತಾ ಹೇಳಿದ್ದಾರೆ.

ಇದನ್ನೂ ಓದಿ:  ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್