ಮಾಗಡಿ: ಜಗುಲಿ ಮೇಲೆ ಮಲಗಿದ್ದ ವೃದ್ಧೆಯನ್ನು ಹೊತ್ತೊಯ್ದ ಚಿರತೆ!
ರಾಮನಗರ: ಮನೆಯ ಮುಂದೆ ಜಗುಲಿ ಮೇಲೆ ಮಲಗಿದ್ದ ವೃದ್ಧೆಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಮಾಗಡಿ ತಾಲೂಕಿನ ಕೊತ್ತಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಚಿರತೆ ದಾಳಿಗೆ ಕೊತ್ತಗಾನಹಳ್ಳಿ ಗ್ರಾಮದ ನಿವಾಸಿ ಗಂಗಮ್ಮ(72) ಬಲಿಯಾಗಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಮನೆ ಮುಂದೆ ಇರುವ ಜಗುಲಿ ಮೇಲೆ ವೃದ್ಧೆ ಮಲಗಿದ್ದರು. ಮಧ್ಯರಾತ್ರಿ ದಾಳಿ ನಡೆಸಿ ವೃದ್ಧೆಯನ್ನು ಹೊತ್ತೊಯ್ದಿದೆ. ವಾರದ ಹಿಂದೆಯೂ ಇದೇ ಗ್ರಾಮದ ಸಮೀಪ 3 ವರ್ಷದ ಮಗುವನ್ನ ಚಿರತೆ ಬಲಿ ಪಡೆದಿತ್ತು. ನರಭಕ್ಷಕ ಚಿರತೆ ಹಾವಳಿಯಿಂದ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ತಾವರೆಕೆರೆ […]
ರಾಮನಗರ: ಮನೆಯ ಮುಂದೆ ಜಗುಲಿ ಮೇಲೆ ಮಲಗಿದ್ದ ವೃದ್ಧೆಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಮಾಗಡಿ ತಾಲೂಕಿನ ಕೊತ್ತಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಚಿರತೆ ದಾಳಿಗೆ ಕೊತ್ತಗಾನಹಳ್ಳಿ ಗ್ರಾಮದ ನಿವಾಸಿ ಗಂಗಮ್ಮ(72) ಬಲಿಯಾಗಿದ್ದಾರೆ.
ಬೇಸಿಗೆ ಹಿನ್ನೆಲೆಯಲ್ಲಿ ಮನೆ ಮುಂದೆ ಇರುವ ಜಗುಲಿ ಮೇಲೆ ವೃದ್ಧೆ ಮಲಗಿದ್ದರು. ಮಧ್ಯರಾತ್ರಿ ದಾಳಿ ನಡೆಸಿ ವೃದ್ಧೆಯನ್ನು ಹೊತ್ತೊಯ್ದಿದೆ. ವಾರದ ಹಿಂದೆಯೂ ಇದೇ ಗ್ರಾಮದ ಸಮೀಪ 3 ವರ್ಷದ ಮಗುವನ್ನ ಚಿರತೆ ಬಲಿ ಪಡೆದಿತ್ತು. ನರಭಕ್ಷಕ ಚಿರತೆ ಹಾವಳಿಯಿಂದ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 9:05 am, Sat, 16 May 20