ಪ್ರತಿಷ್ಠಿತ ಕಂಪನಿಯ 85 ಕಾರ್ಮಿಕರಿಗೆ ವಕ್ಕರಿಸಿದ ಕೊರೊನಾ, ಮಿಕ್ಕವರಿಗೆ ಢವಢವ..

ಬೆಂಗಳೂರು: ನಗರದ ಹೊರವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಖಾಸಗಿ ಕಂಪನಿಯ 85 ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕಂಪನಿಯ ಉಳಿದ ನೌಕರರಲ್ಲಿ ಆತಂಕ ಶುರುವಾಗಿದೆ. ಬಾಗಲೂರಿನ ಕಣ್ಣೂರು ಬಳಿಯಿರುವ ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ಕಂಪನಿ, ತನ್ನ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಸಾಮೂಹಿಕವಾಗಿ ಸ್ವ್ಯಾಬ್ ಟೆಸ್ಟ್ ನೆಡೆಸಿದ್ದು, 85 ಕಾರ್ಮಿಕರಿಗೆ‌ ಸೋಂಕು ದೃಢಪಟ್ಟಿದೆ. ಸೊಂಕಿತರನ್ನು ಜಿಕೆವಿಕೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಸೊಂಕಿತರ ಸಂಪರ್ಕದಲ್ಲಿದ್ದವರ ಪತ್ತೆ […]

ಪ್ರತಿಷ್ಠಿತ ಕಂಪನಿಯ 85 ಕಾರ್ಮಿಕರಿಗೆ ವಕ್ಕರಿಸಿದ ಕೊರೊನಾ, ಮಿಕ್ಕವರಿಗೆ ಢವಢವ..
Edited By:

Updated on: Jul 11, 2020 | 2:44 PM

ಬೆಂಗಳೂರು: ನಗರದ ಹೊರವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಖಾಸಗಿ ಕಂಪನಿಯ 85 ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕಂಪನಿಯ ಉಳಿದ ನೌಕರರಲ್ಲಿ ಆತಂಕ ಶುರುವಾಗಿದೆ.

ಬಾಗಲೂರಿನ ಕಣ್ಣೂರು ಬಳಿಯಿರುವ ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ಕಂಪನಿ, ತನ್ನ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಸಾಮೂಹಿಕವಾಗಿ ಸ್ವ್ಯಾಬ್ ಟೆಸ್ಟ್ ನೆಡೆಸಿದ್ದು, 85 ಕಾರ್ಮಿಕರಿಗೆ‌ ಸೋಂಕು ದೃಢಪಟ್ಟಿದೆ.

ಸೊಂಕಿತರನ್ನು ಜಿಕೆವಿಕೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಸೊಂಕಿತರ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚುವ ಕೆಲಸ ಆರಂಭವಾಗಿದೆ. ಸದ್ಯಕ್ಕೆ  ಎಲ್ ಅಂಡ್ ಟಿ ಕಂಪನಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು. ಉಳಿದ ಕಾರ್ಮಿಕರು ಕೆಲ ದಿನಗಳವರೆಗೆ ಸೆಲ್ಪ್ ಕ್ವಾರಂಟೈನಲ್ಲಿರಬೇಕೆಂದು ಕಂಪನಿಯು ಕಾರ್ಮಿಕರಲ್ಲಿ ಮನವಿ ಮಾಡಿಕೊಂಡಿದೆ.

Published On - 1:18 pm, Sat, 11 July 20