KC General ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಸಾವು, ಸೋಂಕು ಶಂಕೆ: ಏನಾಯ್ತಲ್ಲಿ?

| Updated By: ಸಾಧು ಶ್ರೀನಾಥ್​

Updated on: Jun 26, 2020 | 1:27 PM

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಮೂಡಿದೆ. ಮೃತ ವ್ಯಕ್ತಿಯನ್ನು 45 ವರ್ಷದ ಪಾಲ್‌ ಎಂದು ಗುರುತಿಸಲಾಗಿದೆ. ಈತ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನ ಮಾಡುತ್ತಿದ್ದ ಎನ್ನಲಾಗಿದೆ. ಎಂದಿನಂತೆ ಇಂದು ಸಹ ಬೆಳಗ್ಗೆ ತಿಂಡಿ ತಿನ್ನಲು ಆಸ್ಪತೆ ಬಳಿಯ ಅಂಗಡಿಗೆ ಬಂದಿದ್ದ. ಆದ್ರೆ ತಿಂಡಿ ತಿಂದು ಕೂತಿದ್ದ ಕೆಲ ಹೊತ್ತಿನಲ್ಲಿ ಸಾವನ್ನಪ್ಪಿದ್ದಾನೆ. ಈತನಿಗೆ ಕೊರೊನಾ ಇರುವ ಶಂಕೆ ಇದ್ದು, ಸದ್ಯಕ್ಕೆ ಮೃತನ ದೇಹವನ್ನು ಕೋವಿಡ್‌-19 ಆಸ್ಪತ್ರೆಗೆ […]

KC General ಆಸ್ಪತ್ರೆ  ಆವರಣದಲ್ಲಿ ವ್ಯಕ್ತಿ ಸಾವು, ಸೋಂಕು ಶಂಕೆ: ಏನಾಯ್ತಲ್ಲಿ?
Follow us on

ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಮೂಡಿದೆ.

ಮೃತ ವ್ಯಕ್ತಿಯನ್ನು 45 ವರ್ಷದ ಪಾಲ್‌ ಎಂದು ಗುರುತಿಸಲಾಗಿದೆ. ಈತ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನ ಮಾಡುತ್ತಿದ್ದ ಎನ್ನಲಾಗಿದೆ. ಎಂದಿನಂತೆ ಇಂದು ಸಹ ಬೆಳಗ್ಗೆ ತಿಂಡಿ ತಿನ್ನಲು ಆಸ್ಪತೆ ಬಳಿಯ ಅಂಗಡಿಗೆ ಬಂದಿದ್ದ. ಆದ್ರೆ ತಿಂಡಿ ತಿಂದು ಕೂತಿದ್ದ ಕೆಲ ಹೊತ್ತಿನಲ್ಲಿ ಸಾವನ್ನಪ್ಪಿದ್ದಾನೆ. ಈತನಿಗೆ ಕೊರೊನಾ ಇರುವ ಶಂಕೆ ಇದ್ದು, ಸದ್ಯಕ್ಕೆ ಮೃತನ ದೇಹವನ್ನು ಕೋವಿಡ್‌-19 ಆಸ್ಪತ್ರೆಗೆ ರವಾನಿಸಲಾಗಿದೆ.