ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ಲಂಚ ಕೇಳಿದ ಅಧಿಕಾರಿ ACB‌ ಬಲೆಗೆ

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ತೋಟಗಾರಿಕೆ ಸಹಾಯಕ ಅಧಿಕಾರಿ ಸುರೇಶ್ ಹನುಮಂತಪ್ಪ ಬಾರಕೇರ್ ACB ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಮ್ಮ ತೋಟಗಾರಿಕೆ ಕಚೇರಿಯಲ್ಲಿ 14 ಸಾವಿರ ರೂಪಾಯಿ ಲಂಚ‌ ಪಡೆಯುತ್ತಿದ್ದ ವೇಳೆ ಹನುಮಂತಪ್ಪ ಸಿಕ್ಕಿಬಿದ್ದಿದ್ದಾರೆ. ಹನುಮಂತಪ್ಪ, ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ರೈತರ ಬಳಿ ಲಂಚದ ಬೇಡಿಕೆಯಿಟ್ಟಿದ್ದಾರೆ. ಪ್ರತಿ ಹೆಕ್ಟೆರ್ ಪಪ್ಪಾಯಿಗೆ 1.75 ಲಕ್ಷ ರೂ ಸಹಾಯ ಧನ ಸರ್ಕಾರದ ವತಿಯಿಂದ ಸಿಗುತ್ತದೆ. 2 ಹೆಕ್ಟೆರ್ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆಯಲು‌ ಸಹಾಯಧನ ಮಂಜೂರಾತಿಗೆ ಲಂಚ ಕೇಳಿದ್ದರಂತೆ. […]

ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ಲಂಚ ಕೇಳಿದ ಅಧಿಕಾರಿ ACB‌ ಬಲೆಗೆ
Edited By:

Updated on: Sep 08, 2020 | 7:13 PM

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ತೋಟಗಾರಿಕೆ ಸಹಾಯಕ ಅಧಿಕಾರಿ ಸುರೇಶ್ ಹನುಮಂತಪ್ಪ ಬಾರಕೇರ್ ACB ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಮ್ಮ ತೋಟಗಾರಿಕೆ ಕಚೇರಿಯಲ್ಲಿ 14 ಸಾವಿರ ರೂಪಾಯಿ ಲಂಚ‌ ಪಡೆಯುತ್ತಿದ್ದ ವೇಳೆ ಹನುಮಂತಪ್ಪ ಸಿಕ್ಕಿಬಿದ್ದಿದ್ದಾರೆ.

ಹನುಮಂತಪ್ಪ, ಪಪ್ಪಾಯಿ ಬೆಳೆ ಸಹಾಯಧನ ಮಂಜೂರು‌ ಮಾಡಲು ರೈತರ ಬಳಿ ಲಂಚದ ಬೇಡಿಕೆಯಿಟ್ಟಿದ್ದಾರೆ. ಪ್ರತಿ ಹೆಕ್ಟೆರ್ ಪಪ್ಪಾಯಿಗೆ 1.75 ಲಕ್ಷ ರೂ ಸಹಾಯ ಧನ ಸರ್ಕಾರದ ವತಿಯಿಂದ ಸಿಗುತ್ತದೆ. 2 ಹೆಕ್ಟೆರ್ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆಯಲು‌ ಸಹಾಯಧನ ಮಂಜೂರಾತಿಗೆ ಲಂಚ ಕೇಳಿದ್ದರಂತೆ. ಖಚಿತ ಮಾಹಿತಿಯ ಮೇರೆಗೆ ACB ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.