ಅಪಘಾತ: ಭೀಕರವಾಗಿ ಗಾಯಗೊಂಡ ಗಿರ್ ಹಸುವಿಗೆ ಪುನರ್ಜನ್ಮ ನೀಡಿದ ವೈದ್ಯ ತಂಡ

|

Updated on: Aug 07, 2020 | 11:44 AM

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿದ್ದ ಗಿರ್ ತಳಿ ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಚಿಕ್ಕಲಕಿ ಗ್ರಾಮದ ರೈತ ಪರಮಾನಂದ ತೇಲಿ ಅವರ ಹಸು ಇದಾಗಿದ್ದು, ಸತತವಾಗಿ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ವೈದ್ಯರು ಮೂಕ ಪ್ರಾಣಿಯ ಜೀವ ಉಳಿಸಿ, ಧನ್ಯತೆ ಮೆರೆದಿದ್ದಾರೆ. ಅಪಘಾತ ಏನು: ಹೊಲದಿಂದ ಮನೆಗೆ ಬರುತ್ತಿದ್ದ ಗಿರ್ ಹಸುವಿನ ಮೇಲೆ ವಿಜಯಪುರ ಜಮಖಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದಿತ್ತು. ಹಸುವಿನ ಮೂರು ಪಕ್ಕೆಲುಬುಗಳು ಮುರಿದುಹೋಗಿದ್ದವು. ತಲೆ ಮತ್ತು ಹೊಟ್ಟೆಗೆ […]

ಅಪಘಾತ: ಭೀಕರವಾಗಿ ಗಾಯಗೊಂಡ ಗಿರ್ ಹಸುವಿಗೆ ಪುನರ್ಜನ್ಮ ನೀಡಿದ ವೈದ್ಯ ತಂಡ
Follow us on

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿದ್ದ ಗಿರ್ ತಳಿ ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಚಿಕ್ಕಲಕಿ ಗ್ರಾಮದ ರೈತ ಪರಮಾನಂದ ತೇಲಿ ಅವರ ಹಸು ಇದಾಗಿದ್ದು, ಸತತವಾಗಿ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ವೈದ್ಯರು ಮೂಕ ಪ್ರಾಣಿಯ ಜೀವ ಉಳಿಸಿ, ಧನ್ಯತೆ ಮೆರೆದಿದ್ದಾರೆ.

ಅಪಘಾತ ಏನು: ಹೊಲದಿಂದ ಮನೆಗೆ ಬರುತ್ತಿದ್ದ ಗಿರ್ ಹಸುವಿನ ಮೇಲೆ ವಿಜಯಪುರ ಜಮಖಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹರಿದಿತ್ತು. ಹಸುವಿನ ಮೂರು ಪಕ್ಕೆಲುಬುಗಳು ಮುರಿದುಹೋಗಿದ್ದವು. ತಲೆ ಮತ್ತು ಹೊಟ್ಟೆಗೆ ಭಾರಿ ಗಾಯಗಳಾಗಿದ್ದವು. ವೈದ್ಯರ ತಂಡವೊಂದು ವಿಷಯ ತಿಳಿದು, ತಕ್ಷಣ ಸ್ಥಳಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿತ್ತು. ತೊದಲಬಾಗಿ ಗ್ರಾಮದ ಪಶು ವೈದ್ಯಾಧಿಕಾರಿ ಡಾ. ಅನೀಲ ಸಿಂಧೂರ, ರಮೇಶ ಗಾರವಾಡ ಹಾಗೂ ಸಿಬ್ಬಂದಿಯೇ ಆ ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಪುನರ್ಜನ್ಮ ನೀಡಿದ ತಂಡ.