ಮಂಗಳ ಗ್ರಹ ವಯಸ್ಸಿನಲ್ಲಿ ಶುಕ್ರಕ್ಕಿಂತ ದೊಡ್ಡದಲ್ಲ ಚಿಕ್ಕದು ಅಂತ ಅಧ್ಯಯನ ನಿರತ ವಿಜ್ಞಾನಿಗಳ ತಂಡ ಹೇಳುತ್ತಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 21, 2021 | 6:51 PM

ವಿಜ್ಞಾನಿಗಳು ಪ್ರಸ್ತುತವಾಗಿ ಶುಕ್ರನ ಯುವ ಜ್ವಾಲಾಮುಖಿ ತಾಣಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ಇದು ಭವಿಷ್ಯದ ಕಕ್ಷೀಯ ಮತ್ತು ಸ್ಥಳದ ಅಳತೆಗಳ ಅಧ್ಯಯನಕ್ಕೆ ವಸ್ತುವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನಮಗೆ ಅತ್ಯಂತ ಸಮೀಪದ ಮಂಗಳ ಗ್ರಹವು ಶುಕ್ರಗ್ರಹಕ್ಕಿಂತ ವಯಸ್ಸಿನಲ್ಲಿ ದೊಡ್ಡದು ಅಂತ ವಿಜ್ಞಾನಿಗಳು ನಮಗೆ ಹೇಳಿದ್ದರು ಮತ್ತು ಅವರೇ ಹೇಳಿದ ಮೇಲೆ ನಂಬದಿರೋದಿಕ್ಕೆ ಸಾಧ್ಯವೇ? ಆದರೆ ಅದೇ ವಿಜ್ಞಾನಿಗಳು ತಾವು ಮೊದಲು ಹೇಳಿದ್ದು ತಪ್ಪು ಅಸಲಿಗೆ ಮಂಗಳ ಗ್ರಹವೇ ಶುಕ್ರಕ್ಕಿಂತ ಚಿಕ್ಕದು ಹೇಳುತ್ತಿದ್ದಾರೆ. ರಷ್ಯ, ಸ್ಪೇನ್, ಫಿನ್ಲ್ಯಾಂಡ್, ಇಟಲಿ ಮತ್ತು ಸ್ಪೇನ್ ಮೊದಲಾದ ದೇಶಗಳ ವಿಜ್ಞಾನಿಗಳು ಮಂಗಳ ಗ್ರಹದ ಸಕ್ರಿಯ ಜ್ವಾಲಾಮುಖಿಗಳ ವಿಸ್ತೃತ ಅಧ್ಯಯನ ನಡೆಸಿದ ಬಳಿಕ ಈ ಅಂಶವನ್ನು ಮನಗಂಡಿದ್ದಾರೆ. ಸೋಲಾರ್ ಸಿಸ್ಟಮ್ ರೀಸರ್ಚ್ ವೈಜ್ಞಾನಿಕ ಪತ್ರಿಕೆಯಲ್ಲಿ ಈ ಕುರಿತು ಲೇಖನವೊಂದನ್ನು ಪ್ರಕಟಿಸಲಾಗಿದೆ.

ವಿಜ್ಞಾನಿಗಳು ಪ್ರಸ್ತುತವಾಗಿ ಶುಕ್ರನ ಯುವ ಜ್ವಾಲಾಮುಖಿ ತಾಣಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ಇದು ಭವಿಷ್ಯದ ಕಕ್ಷೀಯ ಮತ್ತು ಸ್ಥಳದ ಅಳತೆಗಳ ಅಧ್ಯಯನಕ್ಕೆ ವಸ್ತುವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ, ಸಂಶೋಧಕರ ಏಕಾಗ್ರತೆಯ ಕೇಂದ್ರ ಶುಕ್ರನ ಇಮ್‌ಡಿಆರ್ ಪ್ರದೇಶವಾಗಿತ್ತು. ಅಲ್ಲಿ 200 ಕಿಮೀ ವ್ಯಾಸವನ್ನು ಹೊಂದಿರುವ ‘ಇಡುನ್ ಮಾನ್ಸ್’ ಜ್ವಾಲಾಮುಖಿ ಇದೆ. ಪ್ರದೇಶವನ್ನು ಅಧ್ಯಯನ ಮಾಡಿದ ನಂತರ, ಈ ಪ್ರದೇಶದ ಮೇಲ್ಮೈ ವಯಸ್ಸು 2.5 ದಶಲಕ್ಷ ವರ್ಷ ಮತ್ತು ಕೇವಲ 2,50,000 ವರ್ಷಗಳ ರೇಂಜ್ನಲ್ಲಿರುತ್ತದೆ ಇರಬಹುದೆಂದು ವಿಜ್ಞಾನಿಗಳು ವಿಐಆರ್ ಟಿಐಎಸ್ ಸ್ಪೆಕ್ಟ್ರೋಮೀಟರ್ ಮೂಲಕ ಕಂಡುಕೊಂಡಿದ್ದಾರೆ.

ವಿಜ್ಞಾನಿಗಳು ತಮ್ಮ ತೀರ್ಮಾನಕ್ಕೆ ಮತ್ತೊಂದು ಬಲವಾದ ಆಧಾರವನ್ನು ಕಂಡುಕೊಂಡಿದ್ದಾರೆ. ಕಿರಿಯ ಪ್ರದೇಶಗಳಲ್ಲಿ ಜ್ವಾಲಾಮುಖಿ ಚಟುವಟಿಕೆಗಳಿಂದ ಉಂಟಾಗುವ ಶುಕ್ರನ ಮೋಡದ ಪದರದ ಕೆಳಗಿನ ಗಡಿಯಲ್ಲಿ ಗುರಿ ಹೊಂದಿದ ಪ್ರದೇಶವು ಕಡಿಮೆ ಗಾಳಿಯ ವೇಗವನ್ನು ಹೊಂದಿದೆ ಎಂಬ ಅಂಶವನ್ನು ಅವರು ಪತ್ತೆ ಮಾಡಿದ್ದಾರೆ.

ಅವರ ಒಟ್ಟಾರೆ ಅವಲೋಕನಗಳ ಆಧಾರದ ಮೇಲೆ, ವಿಜ್ಞಾನಿಗಳು ಶುಕ್ರ ಗ್ರಹ ಮಂಗಳಕ್ಕಿಂತ ಚಿಕ್ಕದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಕೆಂಪು ಗ್ರಹ ಮಂಗಳವು ಶತಕೋಟಿ ವರ್ಷಗಳಿಂದ ಸೌರಮಂಡಲದಲ್ಲಿ ಇದೆಯೆಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  ಸಾವಿಗೂ ಮುನ್ನ ವಿಡಿಯೋ ಮಾಡಿದ್ದ ಮಹಾಂತ ನರೇಂದ್ರ ಗಿರಿ; ಶಿಷ್ಯನನ್ನು ಹರಿದ್ವಾರದಲ್ಲಿ ವಶಕ್ಕೆ ಪಡೆದ ಪೊಲೀಸರು