ಬೆಂಗಳೂರು: ಚಾರ್ಟೆಡ್ ಅಕೌಂಟೆಂಟ್ (Chartered Accountant) ಅಂದ್ರೆ ನಮಗೆಲ್ಲಾ ಟ್ಯಾಕ್ಸ್ ಆಫೀಸರ್ ಇದ್ದಂತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಅವರು ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ KSCAA 34ನೇ ವಾರ್ಷಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾರ್ಟೆಡ್ ಅಕೌಂಟೆಂಟ್ ಅಂದರೆ ನಮಗೆಲ್ಲಾ ಟ್ಯಾಕ್ಸ್ ಆಫೀಸರ್ ಇದ್ದಂತೆ. ಚಾರ್ಟೆಡ್ ಅಕೌಂಟೆಂಟ್ ಅಂದರೆ ಸೆಕೆಂಡ್ ವೈಫ್ ಇದ್ದಂತೆ. ಚಾರ್ಟೆಡ್ ಅಕೌಂಟೆಂಟ್ಸ್ ಇದ್ದಿದ್ದರಿಂದಲೇ ದೇಶಕ್ಕೆ ಅಕೌಂಟಬಿಲಿಟಿ ಬಂದಿದೆ ಎಂದು ಹೇಳಿದರು.
ಈ ದೇಶದ ಆರ್ಥಿಕತೆ ಸುಸ್ಥಿರವಾಗಿರಲು ಕಾರಣಗಳಿವೆ. ನಮ್ಮದು ಸೇವಿಂಗ್ ಸೊಸೈಟಿ. ವಿದೇಶಗಳಲ್ಲಿ ಸ್ಪೆಂಡಿಂಗ್ ಸೊಸೈಟಿ ಹೆಚ್ಚು ಇದೆ. ಬಂಡವಾಳಶಾಯಿಗಳಿಂದಲೇ ಆರ್ಥಿಕತೆ ಮುಂದಕ್ಕೆ ಹೋಗುತ್ತಿದೆ ಅನ್ನೋದು ತಪ್ಪು. ರೈತರು, ಕಾರ್ಮಿಕರು ದೇಶದ ಆರ್ಥಿಕತೆಯನ್ನ ಕೊಂಡೊಯ್ಯಲು ಹೆಚ್ಚು ಸಹಾಯಕಾರಿ. ರೈತರು, ಕಾರ್ಮಿಕ ವರ್ಗ ಆರ್ಥಿಕತೆಯ ಪ್ರಮುಖ ಭಾಗ. ಬ್ಯುಸಿನೆಸ್ನಲ್ಲಿ ಮಾನವೀಯತೆ, ಮನುಷ್ಯತ್ವ ಬೆಳೆಸಿಕೊಳ್ಳಿ. ಹಸಿರಿದಿರುವ ಮನುಷ್ಯನಿಂದ ಮಾತ್ರ ಆರ್ಥಿಕತೆ ಮೇಲೆತ್ತಲು ಸಾಧ್ಯ ಎಂದರು.
ಇದನ್ನೂ ಓದಿ: ಬೆಂಗಳೂರು ನಗರವನ್ನು ರೀ ಸ್ಟ್ರಕ್ಚರ್ ಮಾಡಬೇಕಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ
ಮನುಷ್ಯ ಬೆಳೆಯಬೇಕು ಎಂಬ ಹಸವಿದ್ದವನು ಮಾತ್ರ ದೇಶಕ್ಕೆ ಕೊಡುಗೆ ನೀಡಬಲ್ಲ. ಚಾರ್ಟೆಡ್ ಅಕೌಂಟೆಡ್‌ಗಳು ಜನರ ಕೆಲಸದ ಪ್ರಮಾಣವನ್ನು ಪರಿಗಣಿಸಬೇಕು. ಸಮಾಜಕ್ಕೆ ಕೊಡುಗೆ ನೀಡಿ ಎಂದು ನೀವು ಇಂಡಸ್ಟ್ರಿಯಲ್ಸ್‌ಗಳಿಗೆ ಹೇಳಬೇಕು. ಪ್ರತಿಯೊಂದರಲ್ಲೂ ಮಾನವಸಂಬಂಧಗಳನ್ನು ನೋಡಬೇಕು ಎಂದರು.
ನಾವು ಚಾರ್ಟೆಡ್ ಅಕೌಂಟೆಂಟ್ ಬಳಿ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಿದ್ದೆವು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಎಲ್ಲವೂ ವೇಗಗತಿಯಲ್ಲಿದೆ. ಕರ್ನಾಟಕ ಚಾರ್ಟೆಡ್ ಅಕೌಂಟೆಂಟ್ ದೇಶದಲ್ಲೆ ದೊಡ್ಡ ಹೆಸರು ಗಳಿಸಿದೆ. ತೆರೆಗೆ ಪಾವತಿಸುವುದು ನೈಜವಾಗಿರಬೇಕು. 70% ಜನ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಾರೆ. ಉಳಿದ 25% ಜನ ರಂಗೋಲಿ ಕೆಳಗೆ ನುಗ್ಗಿ ತೆರಿಗೆ ತಪ್ಪಿಸಿಕೊಳ್ಳುತ್ತಾರೆ. ಅಂತವರನ್ನು ಕಂಡುಹಿಡಿಯುವುದು ನಮ್ಮ ಕೆಲಸ ಕೂಡ ಎಂದರು.
ಇದನ್ನೂ ಓದಿ: ಬಿಡಿಎ ವಸತಿ ನಿರ್ಮಾಣ ಅಧಿಸೂಚನೆ ರದ್ದುಗೊಳಿಸಿ ಸರ್ಕಾರದಿಂದ ಆದೇಶ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ನಾನು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಇದ್ದೇನೆ ಮತ್ತು ಜಿಎಸ್‌ಟಿ ಕಮಿಟಿಯ ಅಧ್ಯಕ್ಷ ಸ್ಥಾನ ವಹಿಸಿದ್ದೇನೆ. ದೇಶದ ಮೂಲ ಬಂಡವಾಳವಾಗಿರುವ ತೆರಿಗೆಯಲ್ಲಿ ಬದಲಾವಣೆಗಳು ಆಗುತ್ತಲೇ ಇದೆ. ನಾನು ಸಿಎಂ ಆದಾಗ 5 ಸಾವಿರ ಕೋಟಿ ಕೊರತೆ ಇತ್ತು. ನಾನು ಅಧಿಕಾರಿಗಳಿಗೆ ಕೆಲ ಬಿಸಿನೆಸ್ ಮಾನಿಟರ್ ಮಾಡಲು ಸೂಚಿಸಿದ್ದೆ. ಅದರಂತೆ ನಾವು 16 ಸಾವಿರ ಕೋಟಿಯನ್ನು ಗಳಿಸಿದೆವು. ನನ್ನ ಅಕೌಂಟ್ಸ್ ನೋಡೊದಕ್ಕೆ ನನಗೆ ಕಷ್ಟ ಆಗುತ್ತೆ, ಹೀಗಿದ್ದಾಗ ನೀವು ಬೇರೆಯವರಿಗಾಗಿ ತಲೆ ಕೆಡಿಸಿಕೊಳ್ಳುತ್ತೀರಿ. ನಿಮ್ಮ ಜೊತೆ ನಾನಿದ್ದೇನೆ. ಯಾವುದೇ ಸೌಲಭ್ಯ ಬೇಕಾದರೂ ಪೂರೈಸುವ ಕೆಲಸ ಮಾಡುವ ಜವಾಬ್ದಾರಿ ನನ್ನದು ಎಂದರು.
ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆಗೆ ಅನುಮೋದನೆ
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎಸ್ಸಿ, ಟಿಎಸ್ಸಿ ಅಭಿವೃದ್ಧಿ ಪರಿಷತ್ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆಗೆ ಅನುಮೋದನೆ ಸಿಕ್ಕಿದೆ. 28 ಸಾವಿರ ಕೋಟಿ ಅನುದಾನ ಬಳಕೆಗೆ ಅನುಮೋದನೆ ಸಿಕ್ಕಿದೆ. ಸಮಾಜ ಕಲ್ಯಾಣ ಇಲಾಖೆಗೆ 500 ಕೋಟಿ ಹೆಚ್ಚುವರಿ ಅನುದಾನ, ಅಂಬೇಡ್ಕರ್ ಭೇಟಿ ನೀಡಿದ್ದ ಸ್ಥಳಗಳ ಅಭಿವೃದ್ಧಿಗೆ 20 ಕೋಟಿ ಹಣ, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಿದ್ದೇವೆ. ಕೌಶಲ್ಯಾಭಿವೃದ್ಧಿ ತರಬೇತಿ ಹೆಚ್ಚಿನ ಆದ್ಯತೆ ನೀಡುತ್ತೇವೆ. ಮಲೆನಾಡು, ಬಯಲುಸೀಮೆ, ಕರಾವಳಿ ಭಾಗದ ಅಭಿವೃದ್ಧಿಗಾಗಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದೇವೆ ಎಂದರು.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಬಿ.ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ದುರ್ಯೋಧನ ಐಹೊಳೆ, ಎನ್.ಮಹೇಶ್ ಸೇರಿದಂತೆ ಹಲವರಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 2:31 pm, Fri, 20 May 22