3 ತಿಂಗಳಿಂದ ಜಿಮ್ ಬಂದ್: ಮಂಡ್ಯದಲ್ಲಿ ಗೆಳೆಯನ ಮನೆಯಲ್ಲಿ ನಟ ಕಂ Gym Trainer ಆತ್ಮಹತ್ಯೆ

3 ತಿಂಗಳಿಂದ ಜಿಮ್ ಬಂದ್: ಮಂಡ್ಯದಲ್ಲಿ ಗೆಳೆಯನ ಮನೆಯಲ್ಲಿ ನಟ ಕಂ Gym Trainer ಆತ್ಮಹತ್ಯೆ

ಮಂಡ್ಯ: ಜೀವನದ ಮೇಲೆ ಜುಗುಪ್ಸೆ ಹುಟ್ಟಿ ಸಿನಿಮಾ ನಟನೊಬ್ಬ ಜಿಲ್ಲೆಯ ಇಂಡುವಾಳು ಗ್ರಾಮದ ಬಳಿ ನೇಣಿಗೆ ಶರಣಾಗಿದ್ದಾರೆ. ಮೃತ ನಟ 30 ವರ್ಷದ ಸುಶೀಲ್​ ಕುಮಾರ್​ ಎಂದು ತಿಳಿದುಬಂದಿದೆ. ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದ ಸುಶೀಲ್​ ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದರು. ಜೊತೆಗೆ ದುನಿಯಾ ವಿಜಿ ನಟನೆಯ ಸಲಗ ಹಾಗೂ ಕಮರೊಟ್ಟು ಚೆಕ್​ಪೋಸ್ಟ್ ಸಿನಿಮಾಗಳಲ್ಲಿಯೂ ನಟಿಸಿದ್ದರು. ಲಾಕ್​ಡೌನ್​ನಿಂದ ಕಳೆದ‌ ಮೂರು ತಿಂಗಳಿನಿಂದ‌ ಸುಶೀಲ್​ಗೆ ಜಿಮ್ ನಡೆಸಲು ಆಗಿರಲಿಲ್ಲ. ಹೀಗಾಗಿ ಮೂರು ತಿಂಗಳಿಂದ ಮಂಡ್ಯಕ್ಕೆ […]

KUSHAL V

| Edited By:

Jul 08, 2020 | 7:15 PM

ಮಂಡ್ಯ: ಜೀವನದ ಮೇಲೆ ಜುಗುಪ್ಸೆ ಹುಟ್ಟಿ ಸಿನಿಮಾ ನಟನೊಬ್ಬ ಜಿಲ್ಲೆಯ ಇಂಡುವಾಳು ಗ್ರಾಮದ ಬಳಿ ನೇಣಿಗೆ ಶರಣಾಗಿದ್ದಾರೆ. ಮೃತ ನಟ 30 ವರ್ಷದ ಸುಶೀಲ್​ ಕುಮಾರ್​ ಎಂದು ತಿಳಿದುಬಂದಿದೆ.

ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದ ಸುಶೀಲ್​ ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದರು. ಜೊತೆಗೆ ದುನಿಯಾ ವಿಜಿ ನಟನೆಯ ಸಲಗ ಹಾಗೂ ಕಮರೊಟ್ಟು ಚೆಕ್​ಪೋಸ್ಟ್ ಸಿನಿಮಾಗಳಲ್ಲಿಯೂ ನಟಿಸಿದ್ದರು.

ಲಾಕ್​ಡೌನ್​ನಿಂದ ಕಳೆದ‌ ಮೂರು ತಿಂಗಳಿನಿಂದ‌ ಸುಶೀಲ್​ಗೆ ಜಿಮ್ ನಡೆಸಲು ಆಗಿರಲಿಲ್ಲ. ಹೀಗಾಗಿ ಮೂರು ತಿಂಗಳಿಂದ ಮಂಡ್ಯಕ್ಕೆ ಹಿಂತಿರುಗಿ ಅಲ್ಲೇ ನೆಲೆಸಿದ್ದರು. ಆದರೆ, ಇತ್ತೀಚೆಗೆ ಜೀವನದಲ್ಲಿ ಜುಗುಪ್ಸೆಗೊಂಡಿದ್ದರು ಎಂದು ತಿಳಿದುಬಂದಿದೆ.

ಈ ಮಧ್ಯೆ ಇಂಡುವಾಳು ಗ್ರಾಮದಲ್ಲಿರೊ ತನ್ನ ಸ್ನೇಹಿತನ ಮನೆಗೆ ತೆರಳಿ ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada