ಕೊಲೆಯಲ್ಲ, ಆತ್ಮಹತ್ಯೆ ಅಲ್ಲ: ಕುಡಿದು, ಕುಡಿದೇ ಸತ್ತಳಾ ನಟಿ ಆರ್ಯ ಬ್ಯಾನರ್ಜಿ?

|

Updated on: Dec 14, 2020 | 9:43 AM

ದಿ ಡರ್ಟಿ ಪಿಕ್ಚರ್, ಲವ್ ಸೆಕ್ಸ್ ಔರ್ ಧೋಖಾ ಸೇರಿದಂತೆ ಅನೇಕ ಬಾಲಿವುಡ್​ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ಬೆಂಗಾಲಿ ಮೂಲದ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ಶುಕ್ರವಾರ (ಡಿಸೆಂಬರ್ 12)ರಂದು ಶವವಾಗಿ ಪತ್ತೆಯಾಗಿದ್ದರು. ಈಗ ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿದೆ.

ಕೊಲೆಯಲ್ಲ, ಆತ್ಮಹತ್ಯೆ ಅಲ್ಲ: ಕುಡಿದು, ಕುಡಿದೇ ಸತ್ತಳಾ ನಟಿ ಆರ್ಯ ಬ್ಯಾನರ್ಜಿ?
ನಟಿ ಆರ್ಯ ಬ್ಯಾನರ್ಜಿ
Follow us on

ದಿ ಡರ್ಟಿ ಪಿಕ್ಚರ್, ಲವ್ ಸೆಕ್ಸ್ ಔರ್ ಧೋಖಾ ಸೇರಿದಂತೆ ಅನೇಕ ಬಾಲಿವುಡ್​ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದ ಬೆಂಗಾಲಿ ಮೂಲದ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ಶುಕ್ರವಾರ (ಡಿಸೆಂಬರ್ 12) ರಂದು ಶವವಾಗಿ ಪತ್ತೆಯಾಗಿದ್ದರು. ಇವರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಸಾವಿಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ.

ಸದ್ಯ ತನಿಖೆ ನಡೆಸಿದ ಪೊಲೀಸರು ಸಾವಿನ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ. 33 ವರ್ಷಸ ನಟಿ ಆರ್ಯ ತನ್ನ ಅಪಾರ್ಟ್ಮೆಂಟ್ ಬೆಡ್ ರೂಮ್​ನಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮನೆ ಕೆಲಸದವರು ಬಂದು ಮನೆ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಪೊಲೀಸರು ಬಾಗಿಲು ಒಡೆದು ಮನೆಯನ್ನು ಪ್ರವೇಶಿಸಿದಾಗ ನಟಿ ಶವವಾಗಿ ಬಿದ್ದಿದ್ದು ಕಂಡು ಬಂದಿತ್ತು. ಈ ಸಾವಿನ ಸುತ್ತ ಕೊಲೆನಾ.. ಅಥವಾ ಆತ್ಮಹತ್ಯೆಯಾ ಎಂಬ ಹಲವು ಅನುಮಾನಗಳು ವ್ಯಕ್ತವಾಗಿದ್ದವು.

ವಿಪರೀತವಾಗಿ ಆಲ್ಕೋಹಾಲ್ ಸೇವನೆ ಸಾವಿಗೆ ಕಾರಣ:
ಈಗ ನಟಿಯ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ನಟಿ ಆರ್ಯ ಅವರದ್ದು ಕೊಲೆ ಅಥವಾ ಆತ್ಮಹತ್ಯೆ ಅಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಯಕೃತ್ತಿನ ಸಿರೋಸಿಸ್​ನೀಮದಿಂದ ಬಳಲುತ್ತಿದ್ದ ಆರ್ಯ, ವಿಪರೀತವಾಗಿ ಆಲ್ಕೋಹಾಲ್ ಸೇವನೆ ಮಾಡಿದ್ದರಿಂದ ಸಾವು ಸಂಭವಿಸಿದೆ ಎಂದು ಕೋಲ್ಕತ್ತಾ ಪೊಲೀಸ್ ಜಂಟಿ ಆಯುಕ್ತ ಮುರಳೀಧ ಶರ್ಮಾ ತಿಳಿಸಿದ್ದಾರೆ.

ಅಲ್ಲದೆ ಆರ್ಯ ರೂಮಿನಲ್ಲಿ ಸಾಕಷ್ಟು ಮದ್ಯದ ಬಾಟಲಿಗಳು ಪತ್ತೆಯಾಗಿವೆ. ನಟಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗುತ್ತಿದೆ. ತನ್ನ ಅಪಾರ್ಟ್ಮೆಂಟ್ ಸಾಕು ನಾಯಿಯ ಜೊತೆ ಏಕಾಂಗಿಯಾಗಿದ್ದ ನಟಿ ಯಾರ ಜೊತೆಯೂ ಬೆರೆಯುವುದನ್ನು ಇಷ್ಟ ಪಡುತ್ತಿರಲಿಲ್ಲವಂತೆ. ಯಾವಾಗಲೂ ಆಚೆಯಿಂದ ಊಟ ಆರ್ಡರ್ ಮಾಡಿ ಸೇವಿಸುತ್ತಿದ್ದರಂತೆ.

ಸಾವಿನ ದಿನವೂ ಆಚೆಯಿಂದ ತರಿಸಿದ ಊಟವನ್ನು ಸೇವಿಸಿ ಮೃತಪಟ್ಟಿದ್ದಾರೆ. ಆರ್ಯ 2010ರಲ್ಲಿ ಲವ್ ಸೆಕ್ಸ್ ಔರ್ ಧೋಖಾ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ವಿದ್ಯಾಬಾಲನ್ ನಟನೆಯ ದಿ ಡರ್ಟಿ ಪಿಕ್ಚರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲೂ ಹೆಚ್ಚು ಗುರುತಿಸಿಕೊಂಡಿದ್ದರು.

ಡರ್ಟಿ ಪಿಕ್ಚರ್​ ನಟಿ ಸಾವು.. ಬೆಡ್​ ರೂಂನಲ್ಲಿ ಶವ ಪತ್ತೆ.. ನೆಲದ ಮೇಲೆ ರಕ್ತದ ಹನಿಗಳು!

Published On - 9:37 am, Mon, 14 December 20