ಮ್ಯೂಸಿಕಲ್ ಚೇರ್‌ನಂತಾದ ದೇವನಹಳ್ಳಿ ತಹಶೀಲ್ದಾರ್ ಹುದ್ದೆ.. ನೇಮಕ ವಿಚಾರದಲ್ಲಿ ಬರೀ ಗೊಂದಲ

|

Updated on: Dec 16, 2020 | 5:32 PM

ಅಜಿತ್ ಕುಮಾರ್ ರೈ ವರ್ಗಾವಣೆ ನಂತರ ಅವರ ಸ್ಥಾನಕ್ಕೆ ಡಿಸೆಂಬರ್​ 11ರಂದು ದೇವನಹಳ್ಳಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಅನಿಲ್ ಕುಮಾರ್ ಅವರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಅದೇ ದಿನ, ಅದೇ ಸ್ಥಾನಕ್ಕೆ ಯಲಹಂಕ ತಾಲೂಕು ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಕೆ.ಮಂಜುನಾಥ್ ಅವರನ್ನು ಗ್ರೇಡ್​ 1 ತಹಶೀಲ್ದಾರ್​ ಆಗಿ ವರ್ಗಾವಣೆ ಮಾಡಲಾಗಿದೆ.

ಮ್ಯೂಸಿಕಲ್ ಚೇರ್‌ನಂತಾದ ದೇವನಹಳ್ಳಿ ತಹಶೀಲ್ದಾರ್ ಹುದ್ದೆ.. ನೇಮಕ ವಿಚಾರದಲ್ಲಿ ಬರೀ ಗೊಂದಲ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಕುರ್ಚಿ ಮ್ಯೂಸಿಕಲ್​ ಚೇರ್​ನಂತಾಗಿದೆ. ದೇವನಹಳ್ಳಿ ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈ ಡಿಸೆಂಬರ್ 10ರಂದು ಕೆ.ಆರ್.ಪುರಂ ತಹಶೀಲ್ದಾರ್ ಸ್ಥಾನಕ್ಕೆ ವರ್ಗಾವಣೆ ಆಗಿದ್ದಾರೆ. ಆ ನಂತರ ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಗೊಂದಲದ ಗೂಡನ್ನೇ ಮೈಮೇಲೆ ಎಳೆದುಕೊಂಡಂತೆ ಕಾಣುತ್ತಿದೆ.

ಅಜಿತ್ ಕುಮಾರ್ ರೈ ವರ್ಗಾವಣೆ ನಂತರ ಅವರ ಸ್ಥಾನಕ್ಕೆ ಡಿಸೆಂಬರ್​ 11ರಂದು ದೇವನಹಳ್ಳಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಅನಿಲ್ ಕುಮಾರ್ ಅವರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಅನಿಲ್ ವರ್ಗಾವಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅನುಮೋದನೆಯನ್ನೂ ನೀಡಿದ್ದರು. ಆದರೆ, ಅದೇ ದಿನ, ಅದೇ ಸ್ಥಾನಕ್ಕೆ ಯಲಹಂಕ ತಾಲೂಕು ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಕೆ.ಮಂಜುನಾಥ್ ಅವರನ್ನು ಗ್ರೇಡ್​ 1 ತಹಶೀಲ್ದಾರ್​ ಆಗಿ ವರ್ಗಾವಣೆ ಮಾಡಲಾಗಿದೆ.

ಆದರೆ, ಒಂದೇ ಸ್ಥಾನಕ್ಕೆ ಇಬ್ಬರನ್ನು ವರ್ಗಾವಣೆ ಮಾಡಿದ್ದು ಗೊಂದಲಕ್ಕೆ ಕಾರಣವಾಗಿದೆ. ಅದಾಗಿ ಎರಡು ದಿನಕ್ಕೆ ಅಂದರೆ ಡಿಸೆಂಬರ್​ 14 ರಂದು ಸರ್ಕಾರ ಕೆ.ಮಂಜುನಾಥ್ ಅವರ ವರ್ಗಾವಣೆಯನ್ನು ಹಿಂಪಡೆದಿದೆ. ಬಳಿಕ ಆ ಜಾಗಕ್ಕೆ ಪುನಃ ಅನಿಲ್ ಕುಮಾರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಅದೇನೇ ಆದರೂ ತಹಶೀಲ್ದಾರ್ ಹುದ್ದೆಯ ವಿಚಾರದಲ್ಲಿಯೇ ಈ ಪರಿ ಗೊಂದಲಗಳು ಹುಟ್ಟಿದ್ದು ಮಾತ್ರ ವಿಪರ್ಯಾಸ.

ಅಧಿಕಾರ ಬಿಟ್ಟುಕೊಟ್ರೂ SIM ಬಿಡೆನು: ಖಾಕಿಗಳ ಕಿತ್ತಾಟದಲ್ಲಿ ಜನರ ಕಷ್ಟ ಕೇಳೋರು ಯಾರು?

ಕಚೇರಿಯಲ್ಲಿಯೇ ಸಹೋದ್ಯೋಗಿಗೆ ಕಿಸ್‌ ಕೊಟ್ಟು ವೈರಲ್‌ ಆಗಿದ್ದ ತಹಶೀಲ್ದಾರ್ ಗುರುಬಸವರಾಜ್‌ ಸಸ್ಪೆಂಡ್‌