AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತು 6 ತಿಂಗಳ ಬಳಿಕ ಮಲೇಷ್ಯಾದಿಂದ ಹುಟ್ಟೂರು ಪಿರಿಯಾಪಟ್ಟಣಕ್ಕೆ ಬಂತು ಮೃತದೇಹ!

ಮೈಸೂರು: ಆತ ಚೆನ್ನಾಗಿ ದುಡಿಬೇಕು ಅಂತ ಕೆಲಸಕ್ಕಾಗಿ ಮಲೇಷ್ಯಾಗೆ ಹೋಗಿದ್ದ. 35 ಸಾವಿರ ಸಂಬಳದ ಆಸೆ ಹುಸಿಯಾಗಿ 18 ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ನೊಂದ ಯುವಕ ವಾಪಸ್ ಮನೆಗೆ ಬರೋದಾಗಿ ತಾಯಿಗೆ ಕರೆ ಮಾಡಿ ಹೇಳಿದ್ದ ಆದ್ರೆ ಹುಟ್ಟೂರಿಗೆ ಬರುವ ಮೊದಲೆ ಅವನ ನಿಗೂಢ ಸಾವಾಗಿತ್ತು. ಡಿಸೆಂಬರ್‌ನಲ್ಲಿ ಮೃತಪಟ್ಟ ಯುವಕನ ಮೃತ ದೇಹ ಇಂದು ಹುಟ್ಟೂರಿಗೆ ತಲುಪಿದೆ. ಸುಮಂತ್(22) ಪಿರಿಯಾಪಟ್ಟಣದ ನಿವಾಸಿ. ಕೆಲಸಕ್ಕಾಗಿ ಮಲೇಷಿಯಾಗೆ ತೆರಳಿದ್ದ. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಯೊಬ್ಬ […]

ಸತ್ತು 6 ತಿಂಗಳ ಬಳಿಕ ಮಲೇಷ್ಯಾದಿಂದ ಹುಟ್ಟೂರು ಪಿರಿಯಾಪಟ್ಟಣಕ್ಕೆ ಬಂತು ಮೃತದೇಹ!
ಆಯೇಷಾ ಬಾನು
| Updated By: |

Updated on:Jul 08, 2020 | 1:09 PM

Share

ಮೈಸೂರು: ಆತ ಚೆನ್ನಾಗಿ ದುಡಿಬೇಕು ಅಂತ ಕೆಲಸಕ್ಕಾಗಿ ಮಲೇಷ್ಯಾಗೆ ಹೋಗಿದ್ದ. 35 ಸಾವಿರ ಸಂಬಳದ ಆಸೆ ಹುಸಿಯಾಗಿ 18 ಸಾವಿರ ಸಂಬಳದ ಕೆಲಸ ಸಿಕ್ಕಿತ್ತು. ನೊಂದ ಯುವಕ ವಾಪಸ್ ಮನೆಗೆ ಬರೋದಾಗಿ ತಾಯಿಗೆ ಕರೆ ಮಾಡಿ ಹೇಳಿದ್ದ ಆದ್ರೆ ಹುಟ್ಟೂರಿಗೆ ಬರುವ ಮೊದಲೆ ಅವನ ನಿಗೂಢ ಸಾವಾಗಿತ್ತು. ಡಿಸೆಂಬರ್‌ನಲ್ಲಿ ಮೃತಪಟ್ಟ ಯುವಕನ ಮೃತ ದೇಹ ಇಂದು ಹುಟ್ಟೂರಿಗೆ ತಲುಪಿದೆ.

ಸುಮಂತ್(22) ಪಿರಿಯಾಪಟ್ಟಣದ ನಿವಾಸಿ. ಕೆಲಸಕ್ಕಾಗಿ ಮಲೇಷಿಯಾಗೆ ತೆರಳಿದ್ದ. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಯೊಬ್ಬ ಆತನನ್ನು ಕರೆದೊಯ್ದಿದ್ದ. ಆದರೆ ಅಲ್ಲಿ ಅವನಿಗೆ ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ವಂಚನೆ ಮಾಡಿದ್ದಾನೆ. ಇದರಿಂದ ಮನನೊಂದ ಯುವಕ ವಾಪಸ್ಸು ಬರುವುದಾಗಿ ತಾಯಿಗೆ ಹೇಳಿಕೊಂಡಿದ್ದ.

ಅಷ್ಟರಲ್ಲೇ ಸುಮಂತ್ ಮಲೇಷಿಯಾದಲ್ಲಿ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ಮೃತಪಟ್ಟಿದ್ದ. ಈ ವಿಷಯವನ್ನು ಸುಮಂತ್ ಸಹೋದ್ಯೋಗಿಗಳು ಮನೆಯವರಿಗೆ ಮಾಹಿತಿ ತಿಳಿಸಿದ್ದರು. ಸಾವಿನ ತನಿಖೆ ಹಾಗೂ ಶವ ತರಿಸಿಕೊಳ್ಳಲು ಸಂಸದ ಪ್ರತಾಪ್‌ ಸಿಂಹ‌ಗೆ ಪೋಷಕರು ಮನವಿ ಮಾಡಿದ್ದರು.

ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿ ಶವ ತರಿಸುವುದಾಗಿ ಸಂಸದ ಪ್ರತಾಪ್‌ ಸಿಂಹ ಭರವಸೆ ನೀಡಿದ್ದರು. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ 6 ತಿಂಗಳ ಬಳಿಕ ತಡವಾಗಿ ಸುಮಂತ್ ಮೃತದೇಹ ಹುಟ್ಟೂರಿಗೆ ಆಗಮಿಸಿದೆ. ಕೊನೆಗೂ ಅಂತ್ಯಕ್ರಿಯೆ ನೆರವೇರಿಸಿ ಕುಟುಂಬಸ್ಥರು ಸಮಾಧಾನಪಟ್ಟಿದ್ದಾರೆ.

Published On - 9:06 am, Wed, 8 July 20

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ