ಎಫ್ ಎಸ್ ಎಲ್ ವರದಿಗಳು ಸಿಕ್ಕ ನಂತರವೇ ಚಂದ್ರಶೇಖರ್ ಸಾವು ಹೇಗೆ ಸಂಭವಿಸಿದೆ ಅಂತ ಹೇಳಬಹುದು: ಅಲೋಕ್ ಕುಮಾರ್, ಎಡಿಜಿಪಿ
ಫಿಸಿಕಲ್ ಎವಿಡೆನ್ಸ್, ಟಾಕ್ಸಿಕಾಲಾಜಿಕಲ್ ಸಾಕ್ಷ್ಯ ಮತ್ತು ಬಯಲಾಜಿಕಲ್ ಎವಿಡೆನ್ಸ್ ಮೊದಲಾದವುಗಳ ಬಗ್ಗೆ ವರದಿಗಳು ದೊರೆತ ನಂತರವೇ ಸಾವು ಹೇಗೆ ಸಂಭವಿಸಿದೆ ಅಂತ ಹೇಳಬಹುದು ಎಂದು ಅಲೋಕ್ ಕುಮಾರ್ ಹೇಳಿದರು.
ದಾವಣಗೆರೆ: ಎಮ್ ಪಿ ರೇಣುಕಾಚಾರ್ಯರ (MP Renukacharya) ಸಹೋದರ ಮಗನ ನಿಗೂಢ ಸಾವಿನ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದರು. ಚಂದ್ರಶೇಖರ್ ದೇಹದ ಮರಣೋತ್ತರ ಪರೀಕ್ಷೆ ವರದಿ 2-3 ದಿನಗಳ ಬಳಿಕ ಪೊಲೀಸರಿಗೆ ಸಿಗಲಿದೆ. ಫೋರೆನ್ಸಿಕ್ ತಜ್ಞರು (Forensic experts) ಸಹ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಅವರು ಫಿಸಿಕಲ್ ಎವಿಡೆನ್ಸ್, ಟಾಕ್ಸಿಕಾಲಾಜಿಕಲ್ ಸಾಕ್ಷ್ಯ ಮತ್ತು ಬಯಲಾಜಿಕಲ್ ಎವಿಡೆನ್ಸ್ ಮೊದಲಾದವುಗಳ ಬಗ್ಗೆ ವರದಿ ನೀಡಿದ ನಂತರವೇ ಸಾವು ಹೇಗೆ ಸಂಭವಿಸಿದೆ ಅನ್ನೋದರ ಬಗ್ಗೆ ಕಾಮೆಂಟ್ ಮಾಡಬಹುದು ಎಂದು ಅಲೋಕ್ ಕುಮಾರ್ ಹೇಳಿದರು.