‘ದೇವರಿಗಾಗಿ ಹಾಲನ್ನು ಏಕೆ ವ್ಯರ್ಥ ಮಾಡುತ್ತೀರಿ?’; ‘OMG 2’ ಟೀಸರ್ ಬಳಿಕ ಅಕ್ಷಯ್ ಹಳೆಯ ವಿಡಿಯೋ ವೈರಲ್

|

Updated on: Jul 12, 2023 | 11:05 AM

ಅಕ್ಷಯ್ ಕುಮಾರ್ ಅವರು ಹಲವು ವಿಚಾರಗಳಲ್ಲಿ ವಿವಾದ ಮಾಡಿಕೊಂಡಿದ್ದಾರೆ. ಅವರು ನೀಡಿದ್ದ ಹೇಳಿಕೆಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಿದೆ. ಈ ಮೊದಲು ಅವರು ನೀಡಿದ್ದ ಹೇಳಿಕೆಗೆ ಸಾಕಷ್ಟು ಟೀಕೆಗಳು ಬಂದಿದ್ದವು.

‘ದೇವರಿಗಾಗಿ ಹಾಲನ್ನು ಏಕೆ ವ್ಯರ್ಥ ಮಾಡುತ್ತೀರಿ?’; ‘OMG 2’ ಟೀಸರ್ ಬಳಿಕ ಅಕ್ಷಯ್ ಹಳೆಯ ವಿಡಿಯೋ ವೈರಲ್
ಅಕ್ಷಯ್
Follow us on

ಅಕ್ಷಯ್ ಕುಮಾರ್ (Akshay Kumar) ಅವರು ‘ಓಎಂಜಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗಲಿದ್ದು, ಅದಕ್ಕೂ ಮೊದಲು ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗಲೇ ಅಕ್ಷಯ್ ಕುಮಾರ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ಇಟ್ಟುಕೊಂಡು ಅಕ್ಷಯ್ ಅವರನ್ನು ಟೀಕೆ ಮಾಡಲಾಗುತ್ತಿದೆ.

ಅಕ್ಷಯ್ ಕುಮಾರ್ ಅವರು ಹಲವು ವಿಚಾರಗಳಲ್ಲಿ ವಿವಾದ ಮಾಡಿಕೊಂಡಿದ್ದಾರೆ. ಅವರು ನೀಡಿದ್ದ ಹೇಳಿಕೆಗಳಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಿದೆ. ಈ ಮೊದಲು ಅವರು ನೀಡಿದ್ದ ಹೇಳಿಕೆಗೆ ಸಾಕಷ್ಟು ಟೀಕೆಗಳು ಬಂದಿದ್ದವು. ‘ದೇವರ ಮೇಲೆ ಹಾಲು ಹಾಗೂ ಎಣ್ಣೆಯನ್ನು ಏಕೆ ವ್ಯರ್ಥ ಮಾಡುತ್ತೀರೀ? ದೇವರು ಯಾವಾಗಲಾದರೂ ಬಂದು ನನಗೆ ಹಾಲನ್ನು ಕೊಡಿ ಎಂದು ಕೇಳಿದ್ದಾನೆಯೇ? ಹನುಮಂತ ಬಂದು ನನಗೆ ಎಣ್ಣೆ ಕೊಡಿ ಎಂದು ತಾಕೀತು ಮಾಡಿದ್ದಾನಾ? ಯಾಕೆ ಇಷ್ಟೊಂದು ವೇಸ್ಟ್ ಮಾಡುತ್ತಿದ್ದೀರಿ ತಿಳಿಯುತ್ತಿಲ್ಲ’ ಎಂದಿದ್ದರು ಅಕ್ಷಯ್ ಕುಮಾರ್.

ಈ ಹೇಳಿಕೆ ನೀಡಿದ್ದು ಅವರು 2012ರಲ್ಲಿ. ಆ ಸಂದರ್ಭದಲ್ಲಿ ಅವರ ಹೇಳಿಕೆಯಿಂದ ಸಾಕಷ್ಟು ಟೀಕೆ ಎದುರಿಸಿದ್ದರು. ಈಗ 11 ವರ್ಷಗಳ ಬಳಿಕ ಈ ಹೇಳಿಕೆ ಮತ್ತೆ ವೈರಲ್ ಆಗಿದೆ. ‘ಓಎಂಜಿ 2’ ಟೀಸರ್​ನಲ್ಲಿ ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡಿದ್ದಾರೆ. ಈ ಕಾರಣದಿಂದಲೇ ಅವರು ನೀಡಿದ್ದ ಹೇಳಿಕೆ ವೈರಲ್ ಮಾಡಲಾಗಿದೆ. (ಅಕ್ಷಯ್ ನೀಡಿದ ಹೇಳಿಕೆ ನೋಡಲು ಇಲ್ಲಿ ಕ್ಲಿಕ್ ಮಾಡಿ )

ಇದನ್ನೂ ಓದಿ: ಒಂದೇ ಒಂದು ದೃಶ್ಯದಿಂದ ಅಭಿಮಾನಿಗಳ ಮನಗೆದ್ದ ‘OMG 2’ ಸಿನಿಮಾ ಟೀಸರ್

‘ಓಎಂಜಿ 2’ ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಅವರು ಆಸ್ತಿಕನಾಗಿ ಕಾಣಿಸಿಕೊಂಡಿದ್ದಾರೆ. ದೇವರನ್ನು ನಂಬುವ ವ್ಯಕ್ತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಗಮನ ಸೆಳೆಯುತ್ತಿದ್ದಾರೆ. ‘ಆಗ ಇಲ್ಲದ ನಂಬಿಕೆ ಈಗ ಏಕೆ ಬಂತು’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಸಾಲು ಸಾಲು ಸೋಲು ಕಾಣುತ್ತಿರುವುದರಿಂದ ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಅವರಿಗೆ ಗೆಲ್ಲಲೇಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ