AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshay Kumar: ಒಂದೇ ಒಂದು ದೃಶ್ಯದಿಂದ ಅಭಿಮಾನಿಗಳ ಮನಗೆದ್ದ ‘OMG 2’ ಸಿನಿಮಾ ಟೀಸರ್

‘ಸೆಲ್ಫಿ’ ಸೋತ ಬಳಿಕ ಅಕ್ಷಯ್ ಕುಮಾರ್ ಅವರ ನಟನೆಯ ‘ಓಎಂಜಿ 2’ ರಿಲೀಸ್ ಆಗುತ್ತಿದೆ. ಈ ಚಿತ್ರದ ಟೀಸರ್ ಮೂಲಕ ಗಮನ ಸೆಳೆಯಲಾಗಿದೆ.

Akshay Kumar: ಒಂದೇ ಒಂದು ದೃಶ್ಯದಿಂದ ಅಭಿಮಾನಿಗಳ ಮನಗೆದ್ದ ‘OMG 2’ ಸಿನಿಮಾ ಟೀಸರ್
ಅಕ್ಷಯ್
Follow us
ರಾಜೇಶ್ ದುಗ್ಗುಮನೆ
|

Updated on:Jul 11, 2023 | 1:05 PM

ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ ಸಿನಿಮಾದ ಟೀಸರ್ ಇಂದು (ಜುಲೈ 11) ರಿಲೀಸ್ ಆಗಿದೆ. ಅಕ್ಷಯ್ ಕುಮಾರ್ ಅವರು ಈ ಚಿತ್ರದಲ್ಲಿ ಶಿವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ‘ಓಎಂಜಿ 2’ ಚಿತ್ರದ (OMG 2 Movie) ಟೀಸರ್ ಮೂಡಿ ಬಂದಿದೆ. ಟೀಸರ್​ನಲ್ಲಿ ಬರುವ ಒಂದಷ್ಟು ದೃಶ್ಯಗಳು ಜನಮನ ಗೆದ್ದಿವೆ. ಎಲ್ಲರೂ ಅಕ್ಷಯ್ ಕುಮಾರ್ (Akshay Kumar) ಅವರನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಚಿತ್ರದಿಂದ ಅವರಿಗೆ ಗೆಲುವು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಅಕ್ಷಯ್ ಕುಮಾರ್ ಅವರು ಸಾಲು ಸಾಲು ಸೋಲು ಕಂಡರು. 2022ರಲ್ಲಿ ಅವರಿಗೆ ಗೆಲುವು ಸಿಕ್ಕಿದ್ದು ಕಡಿಮೆ. 2023ರಲ್ಲಿ ಅವರು ಗೆಲ್ಲಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ‘ಸೆಲ್ಫಿ’ ಸೋತ ಬಳಿಕ ಅವರ ನಟನೆಯ ‘ಓಎಂಜಿ 2’ ರಿಲೀಸ್ ಆಗುತ್ತಿದೆ. ಈ ಚಿತ್ರದ ಟೀಸರ್ ಮೂಲಕ ಗಮನ ಸೆಳೆಯಲಾಗಿದೆ.

ಪಂಕಜ್ ತ್ರಿಪಾಠಿ ಓರ್ವ ಆಸ್ತಿಕನ ಪಾತ್ರ ಮಾಡಿದ್ದಾರೆ. ದೇವರನ್ನು ನಂಬುವ ವ್ಯಕ್ತಿಯ ಪಾತ್ರದಲ್ಲಿ ಅವರು ಟೀಸರ್​​ನಲ್ಲಿ ಗಮನ ಸೆಳೆದಿದ್ದಾರೆ. ‘ನಂಬಿಕೆ ಇಡು, ನೀನು ಶಿವನ ದಾಸ’ ಎಂದು ಅಕ್ಷಯ್ ಕುಮಾರ್ ಅವರು ಪಂಕಜ್​ಗೆ ಹೇಳುವ ಡೈಲಾಗ್​ ಗಮನ ಸೆಳೆದಿದೆ. ರೈಲ್ವೆ ನಿಲ್ದಾಣದ ಬಳಿ ಶಿವನ ತಲೆಯ ಮೇಲೆ ನೀರು ಬೀಳುತ್ತಿರುತ್ತದೆ. ಹಿಂಭಾಗದಲ್ಲಿ ಚಂದಿರ ಕಾಣುತ್ತಿರುತ್ತಾನೆ. ಈ ದೃಶ್ಯ ಅನೇಕರಿಗೆ ಇಷ್ಟ ಆಗಿದೆ.

ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಈ ವಿಚಾರದಲ್ಲಿ ತಂಡದವರು ಎಚ್ಚರಿಕೆ ತೆಗೆದುಕೊಂಡಿರಬಹುದು ಎಂಬುದು ಅಭಿಮಾನಿಗಳ ಊಹೆ. ಈ ಸಿನಿಮಾ ಬಗ್ಗೆ ಯಾರೂ ತಕರಾರು ತೆಗೆಯದಿರಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಇದನ್ನೂ ಓದಿ: ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್; ‘OMG 2’ ರಿಲೀಸ್ ದಿನಾಂಕ ಘೋಷಣೆ ಹಿಂದೆ ದೊಡ್ಡ ಲೆಕ್ಕಾಚಾರ

‘ಓಎಂಜಿ 2’ ಚಿತ್ರವನ್ನು ಅಮಿತ್ ರಾಯ್ ಅವರು ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡುತ್ತಿದ್ದಾರೆ. ಪಂಕಜ್ ತ್ರಿಪಾಠಿ, ಅರುಣ್ ಗೋವಿಲ್ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 1987ರಲ್ಲಿ ಪ್ರಸಾರ ಕಂಡ ‘ರಾಮಾಯಣ’ದಲ್ಲಿ ಅರುಣ್ ಅವರು ರಾಮನ ಪಾತ್ರ ಮಾಡಿದ್ದರು. ‘ಓಎಂಜಿ 2’ ಚಿತ್ರದಲ್ಲೂ ರಾಮನ ಪಾತ್ರವನ್ನೇ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:28 pm, Tue, 11 July 23

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್