ಅಸಂತುಷ್ಟ ರಮೇಶ್ ಚೆನ್ನಿತಾಲರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ: ಮೂಲಗಳು

ಮೂಲಗಳ ಪ್ರಕಾರ ಚೆನ್ನಿತಾಲ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ದೆಹಲಿಗೆ ಕರೆಸಿಕೊಂಡು ಮುಂದಿನ ವರ್ಷ ವಿಧಾನ ಸಭೆ ಚುನಾವಣೆಗೆ ಹೋಗಲಿರುವ ಪಂಜಾಬ್ ಇಲ್ಲವೇ ಗುಜರಾತಿನ ಉಸ್ತುವಾರಿ ವಹಿಸಿಕೊಡಲಾಗುವುದು.

ಅಸಂತುಷ್ಟ ರಮೇಶ್ ಚೆನ್ನಿತಾಲರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆ: ಮೂಲಗಳು
ರಮೇಶ್ ಚೆನ್ನಿತಾಲ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jun 19, 2021 | 6:52 PM

ಕೇರಳ ವಿಧಾನ ಸಭೆ ಚುನಾವಣೆಯಲ್ಲಿ ಎದುರಾದ ಸೋಲು ರಾಜ್ಯದ ಪ್ರಮುಖ ಸಮುದಾಯಗಳ ನಡುವೆ ಉಂಟುಮಾಡಿರುವ ಅಸಮಾಧಾನದಿಂದ ವಿಚಲಿತಗೊಂಡಂತೆ ಕಾಣುತ್ತಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯದಲ್ಲಿ ಪಕ್ಷವನ್ನು ಪುನರ್​ ಸಂಘಟಿಸಲು ಮುಂದಾಗಿದೆ. ಇದರ ಮೊದಲ ಭಾಗವಾಗಿ ಹಿರಿಯ ನಾಯಕ ರಮೇಶ್ ಚೆನ್ನಿತಾಲ ಅವರನ್ನು ದೆಹಲಿಗೆ ಕರೆಸಿ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿಯ ಹೊಣೆಗಾರಿಕೆ ನೀಡಿ ಚುನಾವಣೆ ಎದುರಿಸಲಿರುವ ರಾಜ್ಯವೊಂದರ ಉಸ್ತವಾರಿ ವಹಿಸಿಕೊಡಲಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಶುಕ್ರವಾರದಂದು ಪಕ್ಷದ ಹಿರಿಯ ನಾಯಕ ಮತ್ತು ವಯನಾಡ್​ ಸಂಸದರಾಗಿರುವ ರಾಹುಲ್ ಗಾಂಧಿಯರವರನ್ನು ಭೇಟಿ ಮಾಡಿದ ಚೆನ್ನಿತಾಲ ಅವರು ಪಕ್ಷದ ಕೇರಳ ಘಟಕದಲ್ಲಿ ಹೈಕಮಾಂಡ್​ ಮಾಡುತ್ತಿರುವ ಬದಲಾವಣೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆನ್ನಲಾಗಿದೆ. ಚುನಾವಣೆಯಲ್ಲಿ ಸೋಲು ಅನುಭವಿಸಿದ ಕೂಡಲೇ ಹೈಕಮಾಂಡ್ ಹಿಂದಿನ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಚೆನ್ನಿತಾಲ ಅವರ ಬದಲಿಗೆ ವಿ ಡಿ ಸತೀಶನ್ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿತ್ತು.

ಇದರಿಂದ ಅಸಂತಷ್ಟರಾಗಿದ್ದ ಚೆನ್ನಿತಾಲ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪ್ರತವೊಂದನ್ನು ಬರೆದು, ಕೇಂದ್ರೀಯ ನಾಯಕತ್ವ ತನ್ನನ್ನು ಅವಮಾನಿಸಿದೆ, ಒಬ್ಬ ಹಿರಿಯ ನಾಯಕನನನ್ನು ಹೀಗೆ ನಡೆಸಿಕೊಳ್ಳುವುದು ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದರು. ತಮ್ಮನ್ನು ಕೀಳಾಗಿ ನಡೆಸಿಕೊಂಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಊಮನ್ ಚಾಂದಿ ಮತ್ತು ಪಿಸಿಸಿ ಮಾಜಿ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರಿಗೂ ಬೇಸರವಾಗಿದೆ ಎಂದು ತಮ್ಮ ಪತ್ರದಲ್ಲಿ ಅವರು ಸೋನಿಯಾಗೆ ತಿಳಿಸಿದ್ದರು.

ರಾಹುಲ್ ಗಾಂಧಿಯವರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಚೆನ್ನಿತಾಲ, ‘ನಾನೀಗ ನಿರಾಳವಾಗಿದ್ದೇನೆ,’ ಎಂದರು

ಮೂಲಗಳ ಪ್ರಕಾರ ಚೆನ್ನಿತಾಲ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ದೆಹಲಿಗೆ ಕರೆಸಿಕೊಂಡು ಮುಂದಿನ ವರ್ಷ ವಿಧಾನ ಸಭೆ ಚುನಾವಣೆಗೆ ಹೋಗಲಿರುವ ಪಂಜಾಬ್ ಇಲ್ಲವೇ ಗುಜರಾತಿನ ಉಸ್ತುವಾರಿ ವಹಿಸಿಕೊಡಲಾಗುವುದು. ಪಂಜಾಬಿನ ಎಐಸಿಸಿ ಉಸ್ತುವಾರಿಯಾಗಿರುವ ಹರೀಶ್ ರಾವತ್ ಅವರು ತಮ್ಮ ತವರು ರಾಜ್ಯ ಉತ್ತರಾಖಂಡ್​ ಸಹ ಮುಂದಿನ ವರ್ಷದ ಅರ್ಧಭಾಗ ಗತಿಸಿದ ನಂತರ ಚುನಾವಣೆ ಎದುರಿಸಲಿರುವ ಹಿನ್ನೆಲೆಯಲ್ಲಿ ತಮ್ಮನ್ನು ಪ್ರಸ್ತುತ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕೆಂದು ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ. ಹಾಗೆಯೇ, ರಾಜೀವ್ ಸತವ್ ಅವರ ನಿಧನದ ನಂತರ ಗುಜರಾತ್ ಎಐಸಿಸಿ ಉಸ್ತುವಾರಿ ಸ್ಥಾನ ಖಾಲಿ ಬಿದ್ದಿದೆ.

ಮೂಲಗಳ ಪ್ರಕಾರ ರಾಹುಲ್ ಗಾಂಧಿ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ ಮತ್ತು ಚಾಂದಿ ಹಾಗೂ ರಾಮಚಂದ್ರನ್ ಇಬ್ಬರನ್ನೂ ಭೇಟಿಮಾಡಲಿದ್ದಾರೆ. ಚಾಂದಿ ಈಗಾಗಲೇ ಆಂಧ್ರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ (ಸಿಡಬ್ಲ್ಯೂಸಿ) ಸದಸ್ಯರೂ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಕೆ ಅಂತೋಣಿ ಸಹ ಸಿಡಬ್ಲ್ಯೂಸಿ ಸದಸ್ಯರಾಗಿದ್ದಾರೆ.

ಹಾಗೆಯೇ, ರಾಜ್ಯದ ಮತ್ತೊಬ್ಬ ಪ್ರಮುಖ ನಾಯಕ ಕೆ ಸಿ ವೇಣುಗೋಪಾಲ್ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿದ್ದಾರೆ.

ಚೆನ್ನಿತಾಲ ಅವರಿಗೆ ದೆಹಲಿಯಲ್ಲಿ ಪ್ರಮುಖ ಹುದ್ದೆಯೊಂದನ್ನು ನೀಡಿದರೆ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಸತೀಶನ್ ಮತ್ತು ಪಿಸಿಸಿ ಅಧ್ಯಕ್ಷರಾಗಿ ಇತ್ತೀಚಿಗೆ ನೇಮಕಗೊಂಡಿರುವ ಕೆ ಸುಧಾಕರನ್​ ಅವರಿಗೆ ಮುಕ್ತವಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬ ಯೋಚನೆ ಹೈಕಮಾಂಡ್​ಗಿದೆ. ಒಂದು ಪಕ್ಷ ಚೆನ್ನಿತಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದರೆ, ಆ ಹುದ್ದೆಯ ಬಲದಿಂದಾಗಿ ಅವರು ಸಿಡಬ್ಲ್ಯೂಸಿ ಯ ಸದಸ್ಯರೂ ಆಗುತ್ತಾರೆ, ಹಾಗಾದಲ್ಲಿ, ಸಿಡಬ್ಲ್ಯೂಸಿಯಲ್ಲಿ ಕೇರಳದ ನಾಲ್ವರಿಗೆ ಸ್ಥಾನ ಸಿಕ್ಕಂತಾಗುತ್ತದೆ.

2005ರಲ್ಲಿ ಕೇರಳ ಪಿಸಿಸಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಚೆನ್ನಿತಾಲ ಅವರು ಎಐಸಿಸಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ‘ಸ್ವಾಭಾವಿಕವಾಗಿ ನನ್ನ ಪ್ರಥಮ ಆದ್ಯತೆ ಕೇರಳವಾಗಿದೆ. ಆದರೆ ಕೇಂದ್ರೀಯ ನಾಯಕತ್ವ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ,’ ಎಂದು ಚೆನ್ನಿತಾಲ ಹೇಳಿದ್ದಾರೆ.

ಇದನ್ನೂ ಓದಿ:Kerala budget: ಕೇರಳ ಬಜೆಟ್​ನಲ್ಲಿ ₹20,000 ಕೋಟಿ ಕೊವಿಡ್ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವ ಬಾಲಗೋಪಾಲ್

Published On - 6:32 pm, Sat, 19 June 21

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್