ಕೊರೊನಾ 3ನೇ ಅಲೆ; ಮಕ್ಕಳಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ
ಮಕ್ಕಳಿಗಾಗಿಯೇ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಕೇಂದ್ರ, 5 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಪರಿಣಾಮ ಕಡಿಮೆ. 6-11 ವರ್ಷದ ಮಕ್ಕಳಿಗೆ ಮಾಸ್ಕ್ ಹಾಕಲು ಉತ್ತೇಜಿಸಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಹಾಕಲೇಬೇಕು. ರೆಮಿಡಿಸಿವರ್ ಔಷಧವನ್ನು ಮಕ್ಕಳಿಗೆ ಬಳಸುವಂತಿಲ್ಲ.
ದೆಹಲಿ: ಕೊರೊನಾ ಎರಡನೇ ಅಲೆಯ ಬೆನ್ನಲ್ಲೆ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಮೂರನೇ ಅಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಇದರಿಂದ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಮಕ್ಕಳಿಗಾಗಿಯೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಮಕ್ಕಳಿಗಾಗಿಯೇ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಕೇಂದ್ರ, 5 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಪರಿಣಾಮ ಕಡಿಮೆ. 6-11 ವರ್ಷದ ಮಕ್ಕಳಿಗೆ ಮಾಸ್ಕ್ ಹಾಕಲು ಉತ್ತೇಜಿಸಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಹಾಕಲೇಬೇಕು. ರೆಮಿಡಿಸಿವರ್ ಔಷಧವನ್ನು ಮಕ್ಕಳಿಗೆ ಬಳಸುವಂತಿಲ್ಲ. ಕಡಿಮೆ ತೀವ್ರತೆ ಸೋಂಕು ಇದ್ದಾಗ ಸ್ಟಿರಾಯ್ಡ್ ಬಳಸುವಂತಿಲ್ಲ ಎಂದು ತಿಳಿಸಿದೆ.
ಚಿಕಿತ್ಸೆ ವೇಳೆ ಮಕ್ಕಳಿಗೆ ಸ್ಟಿರಾಯ್ಡ್ ನೀಡುವಂತಿಲ್ಲ. ಲಕ್ಷಣ ರಹಿತ, ಸಾಧಾರಣ ಕೊರೊನಾ ಲಕ್ಷಣ ಇರುವ ಮಕ್ಕಳು ,ಅಲ್ಪ ಪ್ರಮಾಣದ ಕೊರೊನಾ ಲಕ್ಷಣವಿದ್ದರೆ ಆಕ್ಸಿಜನ್ ಥೆರಪಿ ನೀಡಬೇಕು. ಪ್ರತಿ ನಾಲ್ಕು ಗಂಟೆಗೊಮ್ಮೆ ಪ್ಯಾರಾಸಿಟಮಲ್ ನೀಡಬಹುದು. ಮಕ್ಕಳಿಗೆ 6 ನಿಮಿಷಗಳ ವಾಕಿಂಗ್ ಟೆಸ್ಟ್ ನೀಡಬೇಕು. ಮಕ್ಕಳ ರಕ್ತದ ಆಕ್ಸಿಜನ್ ಸ್ಯಾಚ್ಯುರೇಷನ್ ಮಟ್ಟ ಪರೀಕ್ಷಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಮಕ್ಕಳಿಗೆ ಕೊರೊನಾ ಸೋಂಕು ಚಿಕಿತ್ಸೆಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ
ಕೊರೊನಾದ 3ನೇ ಅಲೆ ಖಚಿತ… ಯಾವಾಗ ಬರಬಹುದು ಅನ್ನುವ ಬಗ್ಗೆಯಷ್ಟೇ ಭಿನ್ನಾಭಿಪ್ರಾಯ: ಏನದರ ಲೆಕ್ಕಾಚಾರ?
(Union Health Ministry released corona third wsve Guidelines for kids)