ಜಮ್ಮು-ಕಾಶ್ಮೀರದ ಎಲ್ಲ ಪ್ರಮುಖ ಪಕ್ಷಗಳ ನಾಯಕರೊಂದಿಗೆ ಪ್ರಧಾನಿ ಮೋದಿ ಸಭೆ; ಕುತೂಹಲ ಮೂಡಿಸಿದ ಹೆಜ್ಜೆ

ಒಟ್ಟು 16 ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಇಲ್ಲಿಯವರೆಗೆ 9 ಪ್ರಮುಖ ಪಕ್ಷಗಳಿಗೆ ಅಧಿಕೃತವಾಗಿ ಆಮಂತ್ರಣ ಕಳಿಸಲಾಗಿದೆ. ಉಳಿದವರಿಗೆ ಮಾಹಿತಿಯಿದ್ದರೂ ಕೇಂದ್ರ ಸರ್ಕಾರದಿಂದ ಅಧಿಕೃತ ಆಹ್ವಾನ ಇನ್ನೂ ನೀಡಿಲ್ಲ.

ಜಮ್ಮು-ಕಾಶ್ಮೀರದ ಎಲ್ಲ ಪ್ರಮುಖ ಪಕ್ಷಗಳ ನಾಯಕರೊಂದಿಗೆ ಪ್ರಧಾನಿ ಮೋದಿ ಸಭೆ; ಕುತೂಹಲ ಮೂಡಿಸಿದ ಹೆಜ್ಜೆ
ಪ್ರಧಾನಿ ನರೇಂದ್ರ ಮೋದಿ
TV9kannada Web Team

| Edited By: Lakshmi Hegde

Jun 19, 2021 | 3:58 PM

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಮ್ಮು-ಕಾಶ್ಮೀರದಲ್ಲಿ ಜೂ.24ರಂದು ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಈ ಸಂಬಂಧ ಅಲ್ಲಿನ ಎಲ್ಲ ಪ್ರಮುಖ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್​ 370ನ್ನು ರದ್ದುಗೊಳಿಸಿದ ನಂತರ ಅಲ್ಲಿನ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊಂದಿವೆ. ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಆಗ್ರಹಿಸುತ್ತಿವೆ. ಹೀಗಿರುವಾಗ ಪ್ರಧಾನಿ ಮೋದಿಯವರು ಈಗ ಸರ್ವಪಕ್ಷಗಳ ಸಭೆ ಹಮ್ಮಿಕೊಂಡಿದ್ದು ಮಹತ್ವದ ಹೆಜ್ಜೆಯಾಗಿದೆ.

ಜಮ್ಮು-ಕಾಶ್ಮೀರದ ಎಲ್ಲ ಪ್ರಮುಖ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದ್ದರೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ತಮಗೆ ಇನ್ನೂ ಯಾವುದೇ ಅಧಿಕೃತವಾಗಿ ಆಹ್ವಾನ ಬಂದಿಲ್ಲ ಎಂದು ಹೇಳಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟ ಹಲವು ಪ್ರಮುಖ, ನಿರ್ಣಾಯಕ ವಿಷಯಗಳನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಈ ಸಭೆಯನ್ನು ಕರೆದಿದ್ದು, ಇದರಲ್ಲಿ ಪ್ರಮುಖ ಎಲ್ಲ ಪಕ್ಷಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ. ಬರುವ ವರ್ಷ ನವೆಂಬರ್​ನಲ್ಲಿ ಇಲ್ಲಿ ಚುನಾವಣೆ ನಡೆಯಲಿದ್ದು, ತತ್​ ಸಂಬಂಧ ಕ್ಷೇತ್ರಗಳ ಮರುರಚನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಸಭೆಗೆ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಒಟ್ಟು 16 ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಇಲ್ಲಿಯವರೆಗೆ 9 ಪ್ರಮುಖ ಪಕ್ಷಗಳಿಗೆ ಅಧಿಕೃತವಾಗಿ ಆಮಂತ್ರಣ ಕಳಿಸಲಾಗಿದೆ. ಉಳಿದವರಿಗೆ ಮಾಹಿತಿಯಿದ್ದರೂ ಕೇಂದ್ರ ಸರ್ಕಾರದಿಂದ ಅಧಿಕೃತ ಆಹ್ವಾನ ಇನ್ನೂ ನೀಡಿಲ್ಲ. ಈ ಮಧ್ಯೆ ಗೃಹ ಸಚಿವ ಅಮಿತ್​ ಶಾ ಅವರು ಶುಕ್ರವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​​, ಜಮ್ಮು-ಕಾಶ್ಮೀರ ಲೆಫ್ಟಿನಂಟ್​ ಗವರ್ನರ್​ ಮನೋಜ್​ ಸಿನ್ಹಾ, ಗೃಹ ಕಾರ್ಯದರ್ಶಿ ಅಜಯ್​ ಭಲ್ಲಾ, ಐಬಿ ಮುಖ್ಯಸ್ಥ ಅರವಿಂದ್​ ಕುಮಾರ್​ ಸೇರಿ ಕೇಂದ್ರ ಗೃಹ ಇಲಾಖೆ, ಗುಪ್ತಚರ ದಳ, ಸಿಆರ್​ಪಿಎಫ್​​ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಜಮ್ಮು-ಕಾಶ್ಮೀರದ ಸದ್ಯದ ಪರಿಸ್ಥಿತಿ ಬಗ್ಗೆ ವಿಸ್ತೃತ ಚರ್ಚೆ ಮಾಡಿದ್ದಾರೆ.

ಸಭೆ ನಡೆಸಲಿರುವ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಹೇಳಿರುವ ಮೆಹಬೂಬ ಮುಫ್ತಿ, ಹಾಗೊಮ್ಮೆ ಅಧಿಕೃತವಾಗಿ ಆಹ್ವಾನ ಬಂದರೂ, ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ನಮ್ಮದೇ ಪಕ್ಷದಲ್ಲಿ ಆಂತರಿಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ನ್ಯಾಶನಲ್​ ಕಾನ್ಫರೆನ್ಸ್​ ಪಕ್ಷದ ನಾಯಕರು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆಯನ್ನೂ ಇದುವರೆಗೆ ನೀಡಿಲ್ಲ.

ಇದನ್ನೂ ಓದಿ: Coronavirus in Punjab: ‘ಆರೋಗ್ಯವಂತ’ ಪಂಜಾಬ್​ನಲ್ಲಿ ಕೊರೊನಾ ರೋಗಿಗಳ ಸಾವು ಅಧಿಕ; ಆತಂಕದಲ್ಲಿ ವೈದ್ಯ ಲೋಕ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada