AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಲಸಿಕೆ ನೀಡುವ ವೇಗ ಹೆಚ್ಚಿಸಿ ಎಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದ ಅಜಯ್​ಕುಮಾರ್​ ಭಲ್ಲಾ

ಯಾವುದೇ ರಾಜ್ಯದಲ್ಲಿ ಲಾಕ್​ಡೌನ್​ ತೆರವುಗೊಳಿಸುವಾಗ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ, ಕಾರ್ಯತಂತ್ರ ರೂಪಿಸದೆ ತೆಗೆಯುವಂತಿಲ್ಲ. ಟೆಸ್ಟ್​-ಟ್ರ್ಯಾಕ್​-ಟ್ರೀಟ್​ ಮತ್ತು ವ್ಯಾಕ್ಸಿನೇಶನ್​ ಎಂಬ ನಾಲ್ಕು ಕ್ರಮಗಳನ್ನು ಒಳಗೊಂಡೇ ಲಾಕ್​ಡೌನ್ ತೆರವು ಮಾಡಬೇಕು ಎಂದು ಅಜಯ್​ ಭಲ್ಲಾ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಲಸಿಕೆ ನೀಡುವ ವೇಗ ಹೆಚ್ಚಿಸಿ ಎಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದ ಅಜಯ್​ಕುಮಾರ್​ ಭಲ್ಲಾ
ಅಜಯ್​ ಕುಮಾರ್ ಭಲ್ಲಾ
TV9 Web
| Updated By: Lakshmi Hegde|

Updated on: Jun 19, 2021 | 2:51 PM

Share

ಕೊರೊನಾ ಮೊದಲ ಅಲೆ ತುಸು ತಗ್ಗುತ್ತಿದ್ದಂತೆ ದೇಶ ಸಹಜ ಸ್ಥಿತಿಗೆ ಮರಳಿತ್ತು. ಆದರೆ ಆಗಲೇ ಮುಂಬೈ-ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಎದ್ದಾಗಿತ್ತು. ಆದರೂ ಉಳಿದ ರಾಜ್ಯಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಎಲ್ಲ ರೀತಿಯ ಗುಂಪುಗೂಡುವಿಕೆ, ಕಾರ್ಯಚಟುವಟಿಕೆಗಳು ಮುಂದುವರಿದೇ ಇದ್ದವು. ಅದರ ಪರಿಣಾಮ ಕೊವಿಡ್​ 19 ಎರಡನೇ ಅಲೆ ಅದೆಷ್ಟು ಭೀಕರವಾಯಿತೆಂದರೆ ಸೋಂಕಿನ ಪ್ರಸರಣ, ಸಾವಿನ ಸಂಖ್ಯೆಗಳೆಲ್ಲ ಮೊದಲ ಅಲೆಗಿಂತಲೂ ದ್ವಿಗುಣಗೊಂಡವು. ಹಾಗೇ, ಈಗ ಕೊರೊನಾ 2ನೇ ಅಲೆ ತಗ್ಗುತ್ತಿದೆ..ಮತ್ತೆ ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಎದ್ದ ಬಗ್ಗೆ ವರದಿಯೂ ಆಗುತ್ತಿದೆ. ಇದೇ ಹೊತ್ತಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್​ ಭಲ್ಲಾ, ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.

ಇಷ್ಟು ದಿನ ಕೊರೊನಾ ಸೋಂಕಿನ ಪ್ರಸರಣ ಉಲ್ಬಣಗೊಂಡಿದ್ದ ಪರಿಣಾಮ ಬಹುತೇಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಾಕ್​ಡೌನ್​, ಕರ್ಫ್ಯೂದಂಥ ನಿಯಮಗಳನ್ನು ಹೇರಲಾಗಿತ್ತು. ಆದರೆ ಈಗ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ. ನಿರ್ಬಂಧಗಳನ್ನು ತೆರವುಗೊಳಿಸುವಾಗ ಅಥವಾ ಹೇರುವಾಗ ಆಯಾ ಪ್ರದೇಶಗಳಲ್ಲಿನ ಸಂದರ್ಭವನ್ನು ತಳಮಟ್ಟದಲ್ಲಿ ಪರಿಶೀಲಿಸಬೇಕು ಎಂದು ಪತ್ರದಲ್ಲಿ ಅಜಯ್​ ಭಲ್ಲಾ ತಿಳಿಸಿದ್ದಾರೆ.

ಯಾವುದೇ ರಾಜ್ಯದಲ್ಲಿ ಲಾಕ್​ಡೌನ್​ ತೆರವುಗೊಳಿಸುವಾಗ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ, ಕಾರ್ಯತಂತ್ರ ರೂಪಿಸದೆ ತೆಗೆಯುವಂತಿಲ್ಲ. ಟೆಸ್ಟ್​-ಟ್ರ್ಯಾಕ್​-ಟ್ರೀಟ್​ ಮತ್ತು ವ್ಯಾಕ್ಸಿನೇಶನ್​ ಎಂಬ ನಾಲ್ಕು ಕ್ರಮಗಳನ್ನು ಒಳಗೊಂಡೇ ಲಾಕ್​ಡೌನ್ ತೆರವು ಮಾಡಬೇಕು ಎಂದು ಅಜಯ್​ ಭಲ್ಲಾ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಕೊರೊನಾ ಸರಪಳಿ ಮುರಿಯಲು ಲಸಿಕೆಯೇ ನಿರ್ಣಾಯಕವಾಗಿದೆ. ಹಾಗಾಗಿ ಎಲ್ಲ ಸರ್ಕಾರಗಳೂ ತಮ್ಮ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕು. ಹಾಗೇ, ಎಲ್ಲ ರಾಜ್ಯಗಳೂ ಆಯಾ ಜಿಲ್ಲಾಡಳಿತಗಳು, ಸ್ಥಳೀಯ ಆಡಳಿತಗಳಿಗೆ ಕೊರೊನಾ ನಿಯಂತ್ರಣ ಸಂಬಂಧ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅಜಯ್​ ಭಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ವಿಳಂಬ: ಇನ್ಸೆಪೆಕ್ಟರ್ ಗುರುಪ್ರಸಾದ್ ವಿರುದ್ಧ ಕುಣಿಗಲ್ ಶಾಸಕ ರಂಗನಾಥ್ ಪ್ರತಿಭಟನೆ

ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ