ಎರಡು ಬಾರಿ ಜಾತ್ರಾ ಮಹೋತ್ಸವ ನಡೆಯುವ ಉಳವಿ ಚೆನ್ನಬಸವೇಶ್ವರ ದೇವಸ್ಥಾನ ಅಸ್ತಿತ್ವಕ್ಕೆ ಬಂದ ಹಿನ್ನೆಲೆ ನಿಮಗೆ ಗೊತ್ತಾ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 15, 2021 | 5:59 PM

ನೆಲದಿಂದ ಉದ್ಭವಗೊಂಡ ಲಿಂಗ ಈ ದೇವಸ್ಥಾನದಲ್ಲಿದ್ದು ಭಕ್ತರು ಅದರ ದರ್ಶನ ಮಾಡಿ ಹರಕೆಗಳನ್ನು ಸಲ್ಲಿಸುತ್ತಾರೆ. ಹಾಗೆ ಮಾಡಿದರೆ, ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಹನ್ನೆರಡನೇ ಶತಮಾನದಲ್ಲಿ ಬದುಕಿ ಬಾಳಿದ ಬಸವಣ್ಣನವರು ನಮ್ಮ ನಾಡಿನ ಮಹಾನ್ ಚೇತನ ಮತ್ತು ದಾರ್ಶನಿಕ. ಬದುಕು ಮತ್ತು ಆಧ್ಯಾತ್ಮವನ್ನು ಅವರಷ್ಟು ಚೆನ್ನಾಗಿ ಅರ್ಥಮಾಡಿಕೊಂಡವರು ಬೇರೆ ಯಾರೂ ಇರಲಿಕ್ಕಿಲ್ಲ. ತಾವು ತಿಳಿದುಕೊಂಡದ್ದನ್ನು ಅವರು ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೂ ಅರ್ಥವಾಗುವಂತೆ ಮಾಡಿದರು. ಅವರು ಬಳಸುತ್ತಿದ್ದ ಭಾಷೆ ಸರಳ ಮತ್ತು ಕೂಡಲೇ ಅರ್ಥವಾಗುವಂಥದ್ದು. ಬಿಜ್ಜಳ ಆಸ್ಥಾನದಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಾಜ ಸುಧಾರಕ ಬಸವಣ್ಣನವರ ಅಳಿಯ ಚೆನ್ನಬಸವೇಶ್ವರ ಅವರು ವಚನ ಸಾಹಿತ್ಯವನ್ನು ಪ್ರಚಾರ ಮಾಡುತ್ತಾ ಉತ್ತರ ಕನ್ನಡ ಜಿಲ್ಲೆಯ ಉಳವಿ ಕಡೆ ತೆರಳುವಾಗ ಸ್ವಲ್ಪ ಸಮಯದವರೆಗೆ ಧಾರವಾಡದಲ್ಲಿ ಉಳಿದುಕೊಂಡಿದ್ದರಂತೆ. ಆ ಹಿನ್ನೆಲೆಯಲ್ಲೇ ಇಲ್ಲಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನ ಅಸ್ತಿತ್ವಕ್ಕೆ ಬಂದು ನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದೆನಿಸಿಕೊಂಡಿದೆ.

ಉಳವಿ ಚೆನ್ನಬಸವೇಶ್ವರ ದೇವಸ್ಥಾನ ಪ್ರತಿ ಸೋಮವಾರದಂದು ವಿಶೇಷ ಪೂಜೆ ನಡೆಯುತ್ತದೆ ಮತ್ತು ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಪೂಜೆ ಪುನಸ್ಕಾರಗಳು ನಡೆಯುತ್ತವೆ ಮತ್ತು ಮಾಸದ ಕೊನೆಯ ದಿನದಂದು ಭಾರಿ ಪ್ರಮಾಣದ ಜಾತ್ರೆ ನಡೆಯುತ್ತದೆ. ಮಹಾ ಶಿವರಾತ್ರಿಯ ಸಂದರ್ಭದಲ್ಲೂ ಇಲ್ಲಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ.

ನೆಲದಿಂದ ಉದ್ಭವಗೊಂಡ ಲಿಂಗ ಈ ದೇವಸ್ಥಾನದಲ್ಲಿದ್ದು ಭಕ್ತರು ಅದರ ದರ್ಶನ ಮಾಡಿ ಹರಕೆಗಳನ್ನು ಸಲ್ಲಿಸುತ್ತಾರೆ. ಹಾಗೆ ಮಾಡಿದರೆ, ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ದೇವಸ್ಥಾನ ವಿಶಾಲವಾದ ಅವರಣದಲ್ಲಿ 63 ಶರಣರ ಮಂಟಪಗಳನ್ನು ನಿರ್ಮಿಸಲಾಗಿದೆ.

ಉಳವಿ ಚೆನ್ನಬಸವೇಶ್ವರ ದೇವಸ್ಥಾನ ಆವರಣ ಅದೆಷ್ಟು ದೊಡ್ಡದಾಗಿದೆತಯೆಂದರೆ, ಇಲ್ಲಿನ ಕಲ್ಲುಬೆಂಚು ಮತ್ತು ಮರಗಿಡಗಳ ಕೆಳಗೆ ಕೂತು ಸ್ಟಡಿ ಮಾಡಲು ಬರುತ್ತಾರೆ. ಅವರಣದ ವಾತಾವರಣ ಪ್ರಶಾಂತ ಮತ್ತು ಅಧ್ಯಯನ ನಡೆಸಲು ಪೂರಕವಾಗಿದೆ.

ಇದನ್ನೂ ಓದಿ:  Viral Video: ಆನೆ ತನ್ನ ಸ್ನೇಹಿತನೊಂದಿಗೆ ಬ್ಯಾಸ್ಕೆಟ್​ಬಾಲ್ ಆಡುತ್ತಿದೆ! ವಿಡಿಯೋ ಮಜವಾಗಿದೆ ನೋಡಿ