‘ಅಂಬುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯತನದಿಂದ ನಮ್ಮ ತಾಯಿ ಕಾಣೆಯಾಗಿದ್ದಾರೆ, ಹುಡ್ಕಿಕೊಡಿ’

|

Updated on: Jul 30, 2020 | 12:01 PM

ದಾವಣಗೆರೆ:ಕೊರೊನಾ ಸೋಂಕಿನಿಂದ ಗುಣಮುಖರಾದ ವೃದ್ಧೆಯನ್ನು ಮನೆಗೆ ತಲುಪಿಸದೆ, ಆಸ್ಪತ್ರೆಯ ಸಿಬ್ಬಂದಿ ರಸ್ತೆಯಲ್ಲಿಯೇ ಬಿಟ್ಟುಹೋಗಿರುವ ಘಟನೆ ಇಂದು ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ ನಗರದ ಶ್ರೀಕಾಂತ್ ಟಾಕೀಸ್ ಬಳಿಯ ಬಾಂಗ್ಲಾ ಬಡಾವಣೆಯ 65 ವರ್ಷದ ವೃದ್ಧೆಯೊಬ್ಬರಿಗೆ ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತು, ಹೀಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ವೃದ್ಧೆಯನ್ನು ಅಂಬುಲೆನ್ಸ್ ಮುಖಾಂತರ ಮನೆಗೆ ವಾಪಸ್ ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ಆದ್ರೆ ವೃದ್ಧೆಯನ್ನು ಅಂಬುಲೆನ್ಸ್ ನಲ್ಲಿ […]

‘ಅಂಬುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯತನದಿಂದ ನಮ್ಮ ತಾಯಿ ಕಾಣೆಯಾಗಿದ್ದಾರೆ, ಹುಡ್ಕಿಕೊಡಿ’
Follow us on

ದಾವಣಗೆರೆ:ಕೊರೊನಾ ಸೋಂಕಿನಿಂದ ಗುಣಮುಖರಾದ ವೃದ್ಧೆಯನ್ನು ಮನೆಗೆ ತಲುಪಿಸದೆ, ಆಸ್ಪತ್ರೆಯ ಸಿಬ್ಬಂದಿ ರಸ್ತೆಯಲ್ಲಿಯೇ ಬಿಟ್ಟುಹೋಗಿರುವ ಘಟನೆ ಇಂದು ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಹರಿಹರ ನಗರದ ಶ್ರೀಕಾಂತ್ ಟಾಕೀಸ್ ಬಳಿಯ ಬಾಂಗ್ಲಾ ಬಡಾವಣೆಯ 65 ವರ್ಷದ ವೃದ್ಧೆಯೊಬ್ಬರಿಗೆ ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತು, ಹೀಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ವೃದ್ಧೆಯನ್ನು ಅಂಬುಲೆನ್ಸ್ ಮುಖಾಂತರ ಮನೆಗೆ ವಾಪಸ್ ಕಳಿಸುವ ವ್ಯವಸ್ಥೆ ಮಾಡಿದ್ದಾರೆ.

ಆದ್ರೆ ವೃದ್ಧೆಯನ್ನು ಅಂಬುಲೆನ್ಸ್ ನಲ್ಲಿ ಕರೆತಂದ ಆಸ್ಪತ್ರೆಯ ಸಿಬ್ಬಂದಿ, ಅವರನ್ನು ಮನೆಯ ಹತ್ತಿರ ಬಿಟ್ಟುಹೋಗದೆ ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಹೀಗಾಗಿ ವೃದ್ಧೆಗೆ ಮನೆಗೆ ಹೋಗುವ ದಾರಿ ತಿಳಿದಿಲ್ಲ.

ಅದುವರೆಗೂ ಮನೆಗೆ ಬಾರದ ವೃದ್ಧೆಯನ್ನು ಆಕೆಯ ಮಗ ನಾಗರಾಜ್ ಅವರು ಹುಡುಕುತ್ತಿದ್ದು, ಎಷ್ಟೇ ಹುಡುಕಿದರು ವೃದ್ಧೆ ಕಾಣಿಸದ ಕಾರಣ ಇಂದು ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಸ್ಪತ್ರೆಯ ಅಂಬುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ನಮ್ಮ ತಾಯಿ ಕಾಣೆಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

Published On - 11:33 am, Thu, 30 July 20