
[lazy-load-videos-and-sticky-control id=”YOl1WmdpuyM”]
ಬೆಂಗಳೂರು: ನಮ್ಮಲ್ಲಿ ಕೋವಿಡ್ ರೋಗಿಗಳಿಗೆ ಕೇವಲ 5 ಐಸಿಯು ಬೆಡ್ ಗಳಿದ್ದು ಈಗಾಗಲೇ ಎಲ್ಲಾ ಬೆಡ್ ಗಳು ಭರ್ತಿಯಾಗಿವೆ. ಹಾಗಾಗಿ ನಿಮ್ಮ ಸಂಬಂಧಿಯನ್ನು ಐಸಿಯು ಇರುವ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ವಿಷಯ ತಿಳಿದ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಮತ್ತು ಮಲ್ಲೇಶ್ವರಂ ಇನ್ಸ್ಪೆಕ್ಟರ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಘಟನೆ ನಿನ್ನೆಯೇ ಸಂಭವಿಸಿದ್ದು ವೈದ್ಯರು ಇದುವರೆಗೆ ಯಾಕೆ ದೂರು ನೀಡಿಲ್ಲ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ವಿಡಿಯೋ ಹೊರಬಂದ ಕಾರಣ ವಿಚಾರ ಬೆಳಕಿಗೆ ಬಂದಿದೆ.
Published On - 12:59 pm, Wed, 22 July 20