ಫಿಶ್ ಬಾಕ್ಸ್‌ನಲ್ಲಿ ಖದೀಮರು ಸ್ಮಗಲ್ ಮಾಡಿದ್ದು ಏನನ್ನು ಗೊತ್ತಾ!?
ಬೆಂಗಳೂರು: ದೇಶಕ್ಕೆ ದೇಶವೇ ಕೊರೊನಾ ಮಾರಿಯ ವಿರುದ್ಧ ಹೋರಾಡುತ್ತಿರುವಾಗ ಕೆಲ ಖದೀಮರು ಇದನ್ನೇ ಬಂಡವಾಳ ಮಾಡಿಕೊಂಡು ಕಾನೂನುಬಾಹಿರ ಕೆಲಸದಲ್ಲಿ ತೊಡಗಿದ್ದಾರೆ. ಹೀಗೆ ಕಾನೂನುಬಾಹಿರವಾಗಿ ಹೊರ ರಾಜ್ಯದಿಂದ ಬೆಂಗಳೂರಿಗೆ ಬರುತ್ತಿದ್ದ ಮೇಕೆಯ ತಲೆ ಮತ್ತು ಕಾಲು ಮಾಂಸ ಬೋಟಿಯನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ರೈಲ್ವೆ ಇಲಾಖೆಗೆ ಬಾಕ್ಸ್‌ಗಳನ್ನು ಪಾರ್ಸಲ್ ಮಾಡುವಾಗ ಕಂಟೇನರ್ ಬಾಕ್ಸ್ ಒಳಗೆ ಮೀನು ಇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಬಾಕ್ಸ್ ಮೇಲೆ ಮೀನುಗಳಿವೆ ಎಂದು ಲೆಬಲ್ ಕೂಡಾ ಹಾಕಿದ್ದಾರೆ. ಆದ್ರೆ […]
ಬೆಂಗಳೂರು: ದೇಶಕ್ಕೆ ದೇಶವೇ ಕೊರೊನಾ ಮಾರಿಯ ವಿರುದ್ಧ ಹೋರಾಡುತ್ತಿರುವಾಗ ಕೆಲ ಖದೀಮರು ಇದನ್ನೇ ಬಂಡವಾಳ ಮಾಡಿಕೊಂಡು ಕಾನೂನುಬಾಹಿರ ಕೆಲಸದಲ್ಲಿ ತೊಡಗಿದ್ದಾರೆ. ಹೀಗೆ ಕಾನೂನುಬಾಹಿರವಾಗಿ ಹೊರ ರಾಜ್ಯದಿಂದ ಬೆಂಗಳೂರಿಗೆ ಬರುತ್ತಿದ್ದ ಮೇಕೆಯ ತಲೆ ಮತ್ತು ಕಾಲು ಮಾಂಸ ಬೋಟಿಯನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ರೈಲ್ವೆ ಇಲಾಖೆಗೆ ಬಾಕ್ಸ್‌ಗಳನ್ನು ಪಾರ್ಸಲ್ ಮಾಡುವಾಗ ಕಂಟೇನರ್ ಬಾಕ್ಸ್ ಒಳಗೆ ಮೀನು ಇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಬಾಕ್ಸ್ ಮೇಲೆ ಮೀನುಗಳಿವೆ ಎಂದು ಲೆಬಲ್ ಕೂಡಾ ಹಾಕಿದ್ದಾರೆ. ಆದ್ರೆ ಅಸಲಿಗೆ ಒಳಗೆ ಇದ್ದಿದ್ದು ಮೇಕೆ ತಲೆ, ಕಾಲು ಮಾಂಸ ಮತ್ತು ಬೋಟಿ. ಹೀಗೆ ಬಂದ ಮಾಂಸ ಬೆಂಗಳೂರಿನ ಹೋಟೆಲ್‌ಗಳಿಗೆ ಸಪ್ಲೈ ಆಗುತ್ತೆ.
ಕಾನೂನು ಪ್ರಕಾರ ಹೋಟೆಲ್ ನವರು ಗ್ರಾಹಕರಿಗೆ ಫ್ರೆಶ್ ಮಾಂಸದ ಭೋಜನವನ್ನೇ ನೀಡಬೇಕು. ಆದ್ರೆ ಹೀಗೆ ದೂರದೂರಿಂದ ಬಂದಿರುವ ಮಾಂಸ ಎಷ್ಟು ದಿನದ್ದು ಮತ್ತು ಎಷ್ಟು ಸುರಕ್ಷಿತ ಎನ್ನೋ ಅನುಮಾನ ಮೂಡಿದೆ.
ಇವತ್ತು ಬೆಂಗಳೂರು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಕಾನೂನುಬಾಹಿರವಾಗಿ ಮಾಂಸ ಸಾಗಿಸುವವರು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Published On - 2:21 pm, Wed, 22 July 20