ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಬಾರೀ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ಗೆಳತಿ ರಿಹಾ ಚಕ್ರಬೋರ್ತಿ ವಿರುದ್ಧ ಬಿಹಾರ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಹೌದು ಮುಂಬೈ ಪೊಲೀಸರು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷಪಾತದ ಆರೋಪದ ಮೇಲೆ ಬಾಲಿವುಡ್‌ನ ಅತಿರಥ ಮಹಾರಥಿಗಳನ್ನ ವಿಚಾರಣೆ ಮಾಡುತ್ತಿರುವಾಗಲೇ , ಬೀಹಾರ ಪೊಲೀಸರು ಪ್ರಕರಣಕ್ಕೆ ಭಾರೀ ತಿರುವು ನೀಡಿದ್ದಾರೆ. ಸುಶಾಂತ್ ಸಿಂಗ್ ತಂದೆ ಪಾಟ್ನಾದ ರಾಜೀವ್ ನಗರ ಪೊಲೀಸ್ ಸ್ಟೇಷನ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಹಾ ಚಕ್ರಬೊರ್ತಿ ವಿರುದ್ಧ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಕಾರಣ ಎಂದು ದೂರು ದಾಖಲಿಸಿದ್ದಾರೆ.
ಸ್ವತಃ ಸುಶಾಂತ್ ಸಿಂಗ್ ತಂದೆಯೇ ಮಂಗಳವಾರ ರಿಹಾ ಚಕ್ರಬೋರ್ತಿ ಮತ್ತು ಇತರ ಐವರ ವಿರುದ್ಧ ದೂರು ದಾಖಲಿಸಿದ ನಂತರ ಪಾಟ್ನಾ ಪೊಲೀಸರು ರಿಹಾ ವಿರುದ್ಧ ಮೋಸ, ಷ್ಯಂಡ್ಯಂತ್ರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಐಪಿಸಿ ಸೆಕ್ಸನ್ 340, 342, 380, 406, 420 ಮತ್ತು 306 ಅಡಿ ಎಫ್ಐಆರ್ ದಾಖಲಿಸಿದ್ದಾರೆ. ನಂತರ ಈ ಸಂಬಂಧ ಹೆಚ್ಚಿನ ಮಾಹಿತಿ ಮತ್ತು ಸಂಬಂಧಿಸಿದವರ ವಿಚಾರಣೆಗಾಗಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಮುಂಬೈಗೆ ಕಳಿಸಿದ್ದಾರೆ.
FIR registered against actor Rhea Chakraborty under various sections, including abetment of suicide, on the complaint of #SushantSinghRajput's father: Sanjay Singh, Inspector General, Patna Central Zone
— ANI (@ANI) July 28, 2020
Published On - 11:27 pm, Tue, 28 July 20