
ಮಂಗಳೂರು: ಡ್ರಗ್ಸ್ ಕೇಸ್ನಲ್ಲಿ ಸಿಸಿಬಿಯಿಂದ ನೋಟಿಸ್ ಬಂದಿರುವ ಹಿನ್ನೆಲೆಯಲ್ಲಿ ನಟಿ, ನಿರೂಪಕಿ ಅನುಶ್ರೀ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ನಿನ್ನೆಯೇ ಅನುಶ್ರೀ ವಿಚಾರಣೆಗೆ ಹಾಜರಾಗಬೇಕಿತ್ತು.ಅದಕ್ಕೆಂದೇ ನಿನ್ನೆ ಬೆಳಗಿನ ಜಾವಲ್ಲಿ ಬೆಂಗಳೂರಿನಿಂದ ಹೊರಟಿದ್ದರು. ಆದ್ರೆ ಮಂಗಳೂರು ತಲುಪಿದ ಮೇಲೆ ನಿನ್ನೆ ವಿಚಾರಣೆಗೆ ಹಾಜರಾಗದೆ ಇಂದು ಬೆಳಗ್ಗೆಯೇ ತನಿಖಾಧಿಕಾರಿಗಳ ಎದುರು ಉಪಸ್ಥಿತರಾಗಿದ್ದಾರೆ. ಡಿಸಿಪಿ ವಿನಯ್ ಗಾಂವ್ಕರ್ ಕೂಡ ಕಚೇರಿಗೆ ಆಗಮಿಸಿದ್ದಾರೆ.
ಪಣಂಬೂರಿನಲ್ಲಿರುವ ಉತ್ತರ ಎಸಿಪಿ ಕಚೇರಿಯಲ್ಲಿ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡದಿಂದ ನಿರೂಪಕಿ ಅನುಶ್ರೀ ವಿಚಾರಣೆ ನಡೆಯುತ್ತಿದೆ. ಇನ್ನು, ತನಿಖಾ ಕೊಠಡಿಗೆ ಕರೆದುಕೊಂಡು ಹೋಗುವ ಮುನ್ನ.. ಎಂಟ್ರೆನ್ಸ್ ನಲ್ಲಿ ಟಿವಿ9 ವೀಕ್ಷಣೆ ಮಾಡಿದ ಅನುಶ್ರೀ. ಪೊಲೀಸ್ ಠಾಣೆಯಲ್ಲಿ ಹಾಕಿದ್ದ ಟಿವಿ ನೋಡಿ ಅನುಶ್ರೀ ಒಳ ಹೋದರು.
Published On - 9:36 am, Sat, 26 September 20