ಆನೇಕಲ್: ತನ್ನ ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿ ಆನೇಕಲ್‌ನ 3ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಮೌಲಾ(45) ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ಜೀವಾವಧಿ ಶಿಕ್ಷೆಗೊಳಗಾದ ಆರೋಪಿ. 2014ರಲ್ಲಿ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. ಸದ್ಯ ಈಗ 8 ವರ್ಷಗಳ ಬಳಿಕ ಇದಕ್ಕೆ ತೀರ್ಪು ಸಿಕ್ಕಿದೆ.
2014ರಲ್ಲಿ ಹೆಂಡತಿ ಜಬೀನಾಳನ್ನು ಮೌಲಾ ಕೊಲೆ ಮಾಡಿದ್ದ. ತನಗೆ ಕುಡಿಯಲು ಹಣ ನೀಡದ ಕಾರಣ ಹೆಂಡತಿಗೆ ಸೀಮೆಎಣ್ಣೆ ಸುರಿದು ಅಮಾನವೀಯವಾಗಿ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದ. ಈಗ ಈತನಿಗೆ ನ್ಯಾಯಾಧೀಶರಾದ ಸೈಯದ್ ಬಲಿಗೂರ್ ರೆಹಮಾನ್ ರವರು ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಗಣೇಶ್ ನಾಯಕ್ ವಾದ ಮಂಡನೆ ಮಾಡಿದ್ದಾರೆ.
ಇದನ್ನೂ ಓದಿ: Husband Kills Wife: ಬಾಯಿಗೆ ಬಟ್ಟೆ ಇಟ್ಟು ಪತ್ನಿ ಕೊಲೆ ಮಾಡಿದ ಪತಿರಾಯ ಅರೆಸ್ಟ್
Published On - 12:45 pm, Wed, 17 March 21