ಸಿಸಿಬಿ ವಿಚಾರಣೆ ವೇಳೆ ಬಯಲಾಯ್ತು ಹ್ಯಾ”ಕಿಂಗ್” ಶ್ರೀಕಿಯ ಮತ್ತೊಂದು ಕೋಡ್..

|

Updated on: Dec 02, 2020 | 8:55 AM

ಸಾಲು ಸಾಲು ವೆಬ್ ಸೈಟ್ ಹ್ಯಾಕ್ ಮಾಡ್ತಿದ್ದ ಹಾಗೂ ಡ್ರಗ್ಸ್ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಶ್ರೀಕೃಷ್ಣನ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮತ್ತಷ್ಟು ಸ್ಫೋಟಕ ಮಾಹಿತಿ ಸಿಕ್ಕಿದೆ. ಸಿಸಿಬಿ ವಿಚಾರಣೆ ವೇಳೆ ಶ್ರೀಕಿಯ ಮತ್ತೊಂದು ಕೋಡ್ ಬಯಲಾಗಿದೆ.

ಸಿಸಿಬಿ ವಿಚಾರಣೆ ವೇಳೆ ಬಯಲಾಯ್ತು ಹ್ಯಾಕಿಂಗ್ ಶ್ರೀಕಿಯ ಮತ್ತೊಂದು ಕೋಡ್..
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಾಲು ಸಾಲು ವೆಬ್ ಸೈಟ್ ಹ್ಯಾಕ್ ಮಾಡ್ತಿದ್ದ ಹಾಗೂ ಡ್ರಗ್ಸ್ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಶ್ರೀಕೃಷ್ಣನ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮತ್ತಷ್ಟು ಸ್ಫೋಟಕ ಮಾಹಿತಿ ಸಿಕ್ಕಿದೆ. ಸಿಸಿಬಿ ವಿಚಾರಣೆ ವೇಳೆ ಶ್ರೀಕಿಯ ಮತ್ತೊಂದು ಕೋಡ್ ಬಯಲಾಗಿದೆ.

ಈತ ಅನುಮಾನ ಬರದ ಹಾಗೆ ಡ್ರಗ್ಸ್ ಪಾರ್ಟಿಗಾಗಿ ‘ಮೀಟ್ ಇನ್ ಫ್ಲ್ಯಾಟ್’ ಎಂಬ ಕೋಡ್ ಇಟ್ಟುಕೊಂಡಿದ್ದ. ಸಂಜಯ್ ನಗರದಲ್ಲಿರುವ ಶ್ರೀಕಿ ಫ್ಲ್ಯಾಟ್​ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು. ಹೇಮಂತ್, ಪ್ರಸಿದ್, ಸುನೀಷ್ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು. ಆರ್.ಟಿ ನಗರ ಸೇರಿದಂತೆ ಹಲವು ಕಡೆಯಿಂದ ಜನ ಬರ್ತಿದ್ರು.

ಹ್ಯಾ”ಕಿಂಗ್” ಶ್ರೀಕಿಯಿಂದ ಸಿಸಿಬಿ ಪೊಲೀಸರಿಗೆ ಕಿರಿಕ್‌:
ಸಿಸಿಬಿ ಅಧಿಕಾರಿಗಳು ಕೇಳಿದ್ದಕ್ಕೆಲ್ಲಾ ಹ್ಯಾಕಿಂಗ್ ಶ್ರೀಕಿ ಉತ್ತರ ಕೊಡುತ್ತಿದ್ದ. ಬಳಿಕ ವಿಚಾರಣೆ ವೇಳೆಯೂ ಡ್ರಗ್ಸ್ ಬೇಕು ಎಂದು ಪಟ್ಟು ಹಿಡಿಯುತಿದ್ದ. ಮಧ್ಯರಾತ್ರಿಯಲ್ಲೂ ಡ್ರಗ್ಸ್​ಗಾಗಿ ಅಧಿಕಾರಿಗಳನ್ನು ಪೀಡಿಸುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಷ್ಟರ ಮಟ್ಟಿಗೆ ಡ್ರಗ್ಸ್​ ವ್ಯಸನಿ ಆಗಿದ್ದಾನೆ. ಡ್ರಗ್ಸ್ ಚಟಕ್ಕೆ ಬಿದ್ದವನ ವಿಚಾರಣೆ ಸಿಸಿಬಿ ಅಧಿಕಾರಿಗಳಿಗೆ ಹರಸಾಹಸದಂತಾಗಿತ್ತು.

ಹ್ಯಾಕಿಂಗ್ ಶ್ರೀಕಿಯನ್ನು ಮತ್ತೆ ವಶಕ್ಕೆ ಪಡೆಯಲಿರುವ ಸಿಸಿಬಿ:
ಸಾಲು ಸಾಲು ವೆಬ್ ಸೈಟ್ ಹ್ಯಾಕ್ ಮಾಡ್ತಿದ್ದ ಶ್ರೀಕೃಷ್ಣಗೆ ಮತ್ತೆ ಗ್ರಿಲ್ ಶುರುವಾಗಲಿದೆ. ಡ್ರಗ್ ಕೇಸ್ ಸಂಬಂಧ ಶ್ರೀಕಿಯನ್ನು, ಸಿಸಿಬಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸದ್ಯ ಈಗ ಹ್ಯಾಕಿಂಗ್ ಕೇಸ್ ದಾಖಲಿಸಿ ಮತ್ತೆ ವಶಕ್ಕೆ ಪಡೆಯಲಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಕಿ ವಿರುದ್ಧ ಹ್ಯಾಕಿಂಗ್ ವಿಚಾರವಾಗಿ ಕೇಸ್ ದಾಖಲಾಗಿದೆ.
ಕೇಸ್ ಸಂಬಂಧ ಬಾಡಿ ವಾರೆಂಟ್ ಮುಖಾಂತರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತೆ.