ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ, ಪ್ರಯಾಣಿಕರಲ್ಲಿ ಹೆಚ್ಚಾಯ್ತು ಆತಂಕ

ಅದು ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಪ್ರಯಾಣಿಕರು ಪ್ರಯಾಣಿಸೋ ಏರ್ಪೋರ್ಟ್. ಇಷ್ಟು ದಿನ ಉತ್ತಮ ಸೌಲಭ್ಯಗಳಿಂದ ಹೆಸರು ವಾಸಿಯಾಗಿದ್ದ ಆ ಏರ್ಪೋರ್ಟ್​ನಲ್ಲಿ ಈಗ ಹೊಸ ಆತಂಕ ಸೃಷ್ಟಿಯಾಗಿದೆ. ಜನ ಏರ್ಪೋಟ್ ಆವರಣದಲ್ಲಿ ಭಯ ಇಲ್ಲದೆ ಓಡಾಡೋಕು ಆಗ್ತಿಲ್ಲ.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ, ಪ್ರಯಾಣಿಕರಲ್ಲಿ ಹೆಚ್ಚಾಯ್ತು ಆತಂಕ
ಬೆಂಗಳೂರು ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಾವಳಿ
Follow us
ಆಯೇಷಾ ಬಾನು
|

Updated on:Dec 09, 2020 | 10:19 AM

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣ ಅಂದ್ರೆ ಮೊದ್ಲು ನೆನಪಾಗೋದೆ ಹಚ್ಚ ಹಸಿರಿನ ವಾತವಾರಣ. ಇದ್ರ ಜೊತೆಗೇ ಸ್ವಚ್ಛಂದ ಟರ್ಮಿನಲ್. ಆದ್ರೆ ಇದೇ ಏರ್ ಪೋರ್ಟ್ ಮಾನ ಅಂತರಾಷ್ಟ್ರಿಯಾ ಮಟ್ಟದಲ್ಲಿ ಹರಾಜಾಗುತ್ತಾ ಅನ್ನೋ ಅನುಮಾನ ಪ್ರಯಾಣಿಕರಲ್ಲಿ ಕಾಡುತ್ತಿದೆ.

ಏರ್ ಪೋರ್ಟ್ ಟರ್ಮಿನಲ್​ನಲ್ಲಿ ನಾಯಿಗಳ ಹಿಂಡು: ಇದಕ್ಕೆ ಕಾರಣ ಬೀದಿನಾಯಿಗಳ ಹಾವಳಿ. ಅಂದಹಾಗೆ ಲಾಕ್​ಡೌನ್ ನಂತರದಲ್ಲಿ, ದಿನದಿಂದ ದಿನಕ್ಕೆ ಏರ್ ಪೋರ್ಟ್​ನಿಂದ ಸಂಚರಿಸೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಈ ಮಧ್ಯೆ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿ ಹಾವಳಿ ಸಹ ಹೆಚ್ಚಾಗಿದ್ದು, ಏರ್ ಪೋರ್ಟ್ ಟರ್ಮಿನಲ್ ಸೇರಿದಂತೆ ಪಾರ್ಕಿಂಗ್ ಏರಿಯಾಗಳಲೆಲ್ಲಾ ಹಿಂಡಾಗಿ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಜತೆಯಲ್ಲೇ ಏರ್ ಪೋರ್ಟ್​ಗೆ ಬರೋ ಪ್ರಯಾಣಿಕರ ಮಧ್ಯೆ ರಾಜಾರೋಷವಾಗಿ ನಾಯಿಗಳು ಹಿಂಡು ಹಿಂಡಾಗಿ ಒಡಾಡ್ತಿದ್ದು, ಯಾವಾಗ ಯಾವ ಪ್ರಯಾಣೀಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡ್ತಾವೋ ಅನ್ನೋ ಆತಂಕ ಪ್ರಯಾಣಿಕರಲ್ಲಿ ಮೂಡಿದೆ.

ಟರ್ಮಿನಲ್​ನ ಹೋಟೆಲ್ ಸೇರಿದಂತೆ ಅಂಗಡಿಗಳ ಮುಂದೆ ಆಹಾರ ಸೇವಿಸೋ ಪ್ರಯಾಣಿಕರ ಮುಂದೆಯೇ ನಿಲ್ಲೋ ನಾಯಿಗಳು ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡ್ತಿವೆ. ದೇಶ ವಿದೇಶದಿಂದ್ಲೂ ಪ್ರಯಾಣೀಕರು ಬಂದು ಹೋಗೊ ಏರ್ಪೋಟ್ ಅತಿಸೂಕ್ಷ್ಮ ಪ್ರದೇಶವಾಗಿದೆ. ಟರ್ಮಿನಲ್ ಒಳಭಾಗದಲ್ಲಿ ಸಾಕಷ್ಟು ಭದ್ರತೆ ನೀಡಿರೋ ಏರ್ಪೋಟ್ ಆಡಳಿತ ಮಂಡಳಿ, ಟರ್ಮಿನಲ್ ಆವರಣದಲ್ಲೂ ಬೀದಿ ನಾಯಿಗಳ ಹಾವಾಳಿಗೆ ಬ್ರೇಕ್ ಹಾಕಬೇಕಿದೆ. ಈ ಮೂಲಕ ಪ್ರಯಾಣಿಕರ ಆತಂಕ ದೂರ ಮಾಡಬೇಕಿದೆ ಎಂಬುದು ಸ್ಥಳೀಯರ ಆಗ್ರಹ.

ಒಟ್ಟಾರೆ ಹೈ-ಫೈ ಸೌಲಭ್ಯಗಳ ಮೂಲಕ ಹೆಸರುವಾಸಿಯಾಗಿರೋ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಈಗ ಬೀದಿ ನಾಯಿ ಹಾವಳಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಾಯಿಗಳು ಏರ್ಪೋರ್ಟ್​ಗೆ ಬರೋ ಪ್ರಯಾಣಿಕರ ಮೇಲೆ ದಾಳಿ ಮಾಡಿ ಬೆಂಗಳೂರಿನ ಮಾನ ಜಾಗತಿಕವಾಗಿ ಹರಾಜು ಹಾಕುವ ಮುನ್ನ ಏರ್ಪೋರ್ಟ್ ಆಡಳಿತ ಮಂಡಳಿ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದೆ.

Published On - 7:59 am, Wed, 2 December 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್