ಕೌಟುಂಬಿಕ ಕಲಹ: ಗಂಡನನ್ನೆ ಕೊಲೆ ಮಾಡಿಸಿದಳಾ ಈ ಐನಾತಿ ಪತ್ನಿ?
ಗಂಡ ಹೆಂಡತಿ ಜಗಳ ಉಂಡು ಮಲಗೊತನಕ ಅನ್ನೋ ಮಾತಿದೆ. ಆದ್ರೆ ಪತಿ ಪತ್ನಿ ನಡುವಿನ ಕಲಹವೊಂದು ಪತಿಯ ಸಾವಿನಲ್ಲಿ ಅಂತ್ಯ ಕಂಡ ಘಟನೆ ನಡೆದಿದೆ. ನಗರದ ಮಹಿಳಾ ಸಮಾಜ ಸಭಾಂಗಣದ ಆವರಣದಲ್ಲಿ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ.
ರಾಯಚೂರು: ಗಂಡ ಹೆಂಡತಿ ಜಗಳ ಉಂಡು ಮಲಗೊತನಕ ಅನ್ನೋ ಮಾತಿದೆ. ಆದ್ರೆ ಪತಿ ಪತ್ನಿ ನಡುವಿನ ಕಲಹವೊಂದು ಪತಿಯ ಸಾವಿನಲ್ಲಿ ಅಂತ್ಯ ಕಂಡ ಘಟನೆ ನಡೆದಿದೆ. ನಗರದ ಮಹಿಳಾ ಸಮಾಜ ಸಭಾಂಗಣದ ಆವರಣದಲ್ಲಿ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ.
ಘಟನೆ ಹಿನ್ನೆಲೆ: ರಾಯಚೂರು ತಾಲೂಕಿನ ದೇವನಪಲ್ಲಿ ಗ್ರಾಮದ ಇಮ್ರಾನ್ (30) ಕೊಲೆಯಾದ ವ್ಯಕ್ತಿ. ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದ ಈ ಕೇಸ್ಗೆ ಸದ್ಯ ಈಗ ಕೌಟುಂಬಿಕ ಕಲಹವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಯಚೂರು ನಗರದ ಶಹಜಹಾನ್ ಎಂಬ ಯುವತಿಯನ್ನು ಇಮ್ರಾನ್ ಪ್ರೀತಿಸಿ ಮದುವೆಯಾಗಿದ್ದ. ಆದ್ರೆ ಮದುವೆಯಾದ ಬಳಿಕ ಇವರಿಬ್ಬರ ನಡುವೆ ನಿರಂತರ ಜಗಳ ನಡೀತಿತ್ತು. ಕಲಹದ ಹಿನ್ನೆಲೆ ಬೇಸತ್ತು ಕಳೆದ 4 ವರ್ಷದಿಂದ ಪತಿ-ಪತ್ನಿ ದೂರಾಗಿದ್ದರು.
ಪತಿ ಇಮ್ರಾನ್ ರಾಯಚೂರಿನಲ್ಲೇ ಬೇರೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಶಹಜಹಾನ್ ಸಂಬಂಧಿಕರು ಇಮ್ರಾನ್ ಮೇಲೆ ಪದೇ ಪದೇ ಹಲ್ಲೆ ನಡೆಸ್ತಿದ್ರು. ಹೀಗಾಗಿ ಇ್ರಮಾನ್ ಈ ಹಿಂದೆ ಪತ್ನಿಯ ಸಂಬಂಧಿಕರ ವಿರುದ್ಧ ಕೇಸ್ ದಾಖಲಿಸಿದ್ದ. ಇದಕ್ಕೆ ಪ್ರತಿಯಾಗಿ ಪತ್ನಿ ಕೂಡ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಳು.
ಈ ಎರಡೂ ಕೇಸ್ಗಳನ್ನ ರಾಜಿ ಸಂಧಾನದ ಮೂಲಕ ಬಗೆ ಹರಿಸಿಕೊಳ್ಳಲು ಇಮ್ರಾನ್ ಮುಂದಾಗಿದ್ದ. ಆದ್ರೆ ಈ ಕೇಸ್ ಬಗೆಹರಿಯುವ ಮುನ್ನವೇ ಇಮ್ರಾನ್ ಭೀಕರವಾಗಿ ಕೊಲೆಯಾಗಿದ್ದಾನೆ. ಪತ್ನಿಯ ಸಂಬಂಧಿಕರಿಂದಲೇ ಈ ಕೃತ್ಯ ನಡೆದಿದೆ ಎಂದು ಮೃತನ ಸಹೋದರಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಕಬಾಬ್ ಮೇ ಹಡ್ಡಿ ಆಗ್ತಾನೆ ಅಂತಾ.. ಭಾವಿ ಪತಿಯನ್ನೇ ಕೊಲೆಗೈದ ಖತರ್ನಾಕ್ ಯುವತಿ ಅಂದರ್!
Published On - 9:53 am, Wed, 2 December 20