ಮನೆಯಲ್ಲಿ ಕಷ್ಟ ಇದ್ರೂ ಕೈ ಹಿಡಿದ ಜಗ್ಲಿಂಗ್ ಪ್ರತಿಭೆ, ಗಿನ್ನಿಸ್ ದಾಖಲೆ ನಿರ್ಮಿಸಲು ಬೇಕಾಗಿದೆ ನೆರವಿನ ಹಸ್ತ..
ಆಕೆ ಅಪ್ಪಟ ಹಳ್ಳಿಗಾಡಿನ ಪ್ರತಿಭೆ. ತನ್ನ ಕಷ್ಟಗಳ ನಡುವೆಯೂ ಆಕೆಗೆ ಆ ಒಂದು ಕಲೆ ಕೈಹಿಡಿದಿದೆ. ಈ ಕಲೆಯ ಮೂಲಕವೇ ಆ ಹುಡುಗಿ ಸದ್ದು ಮಾಡಲು ಸಜ್ಜಾಗಿದ್ದಾಳೆ. ಅರೆ ಯಾರು ಆಕೆ? ಆಕೆಯ ಕಲೆ ಎಂತಹದ್ದು? ಈ ಸ್ಟೋರಿ ಓದಿ.
ಧಾರವಾಡ: ಜಿಲ್ಲೆಯ ಕುಂದಗೋಳದ ಬೆಟದೂರು ಗ್ರಾಮದ ಕವಿತಾ ಎಂಬ ಹುಡುಗಿ ತನ್ನ ಕಲೆ ಮೂಲಕ ಜನರ ಗಮನ ಸೆಳೆಯುತ್ತಿದ್ದಾಳೆ. ಪಬ್ ಅಥವಾ ಹೈಫೈ ಬಾರ್ಗಳಿಗೆ ಭೇಟಿ ಕೊಟ್ಟವರಿಗೆ ಈ ಕಲೆ ಚೆನ್ನಾಗೇ ತಿಳಿದಿರುತ್ತೆ. ಅಂದಹಾಗೆ ಆ ಕಲೆಯೇ ಗಿರಗಿರನೆ ಬಾಟಲ್ ತಿರುಗಿಸುವುದು. ಅದನ್ನು ಜಗ್ಲಿಂಗ್ ಅಂತಾರೆ.
‘ಪೇಜ್ ಥ್ರೀ’ ಸಂಸ್ಕೃತಿ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಜಗ್ಲಿಂಗ್ ಕಲೆಗೆ ತುಂಬಾನೆ ಬೆಲೆ ಇದೆ. ಹೈಫೈ ಪಾರ್ಟಿಗಳಲ್ಲಿ ಗಿರಗಿರನೆ ಬಾಟಲ್ ತಿರುಗಿಸುವ ಈ ಕಲೆಗಾರರು ಎಲ್ಲರ ಗಮನಸೆಳೆಯುತ್ತಾರೆ. ಹೀಗೆ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಈ ಯುವತಿ ಕವಿತಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಬೆಟದೂರು ಗ್ರಾಮದ ಕವಿತಾ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಜಗ್ಲಿಂಗ್ ಕಲಿತ ಯುವತಿಗೆ ಹಣಕಾಸಿನ ಕೊರತೆ: ಕೊರೊನಾ ಸಮಯವನ್ನೇ ಸದುಪಯೋಗ ಪಡಿಸಿಕೊಂಡ ಕವಿತಾ, ಲೈಫ್‌ನಲ್ಲಿ ಏನಾದ್ರೂ ಡಿಫರೇಂಟ್ ಆಗಿ ಸಾಧನೆ ಮಾಡಬೇಕು ಅನ್ನೋ ಛಲಕ್ಕೆ ಬೆಂಬಲ ಸಿಕ್ಕಿದೆ. ಬೆಟದೂರಿನ ಹೆತ್ತವರು ಕೃಷಿಕರಾಗಿದ್ರೂ, ಮಗಳ ಇಚ್ಛೆಗೆ ಅಡ್ಡಿ ಪಡಿಸಲಿಲ್ಲಾ. ಜಗ್ಲಿಂಗ್‌ನಲ್ಲಿ ಆಸಕ್ತಿ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ಪೂನಾದಲ್ಲಿ ತರಬೇತಿ ಕೊಡಿಸಲಾಗಿದೆ. ಪಕ್ಕಾ ಟ್ರೈನಿಂಗ್ ಪಡೆದಿರುವ ಕವಿತಾ, ಗಿನ್ನಿಸ್ ಬುಕ್ ಆಫ್ ರೆಕಾರ್ಡನಲ್ಲಿ ತಮ್ಮ ಸಾಧನೆಯ ಚಾಪು ಒತ್ತಲು ಅಣಿಯಾಗಿದ್ದಾಳೆ.
ಇನ್ನು ಕವಿತಾ ಗಿನ್ನೀಸ್ ರೆಕಾರ್ಡ್ಗೆ ಅಣಿಯಾಗಿದ್ದರೂ ಅದಕ್ಕೆ ಲಕ್ಷಾಂತರ ರೂಪಾಯಿ ಅಗತ್ಯವಾಗಿದೆ. ಆದರೆ ಬಡ ಕೂಲಿ ಕಾರ್ಮಿಕರಾದ ಕವಿತಾ ಅವರ ತಂದೆ-ತಾಯಿ ಇದನ್ನ ಭರಿಸುವ ಶಕ್ತಿ ಹೊಂದಿಲ್ಲ. ಹೀಗಾಗಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ. -ರಹಮತ್ ಕಂಚಗಾರ್
Published On - 7:48 am, Wed, 2 December 20