ಇಂದು ವಿಶ್ವ ಏಡ್ಸ್ ದಿನ: ಮಿಥ್ಯೆಗಳಿಂದ ದೂರವಿರಿ, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ

ಎಚ್‌ಐವಿ ಸೋಂಕು ತಗುಲಿರುವ ಎಲ್ಲ ವ್ಯಕ್ತಿಗಳೂ ಸೋಂಕಿನ ಮೂರನೇ ಹಂತ ಕ್ಕೆ ತಲುಪುವುದಿಲ್ಲ. ಸಮಾಜದಲ್ಲಿ ಇನ್ನೂ ಏಡ್ಸ್ ಬಗ್ಗೆ ಅಪನಂಬಿಕೆಗಳು ಉಳಿದುಕೊಳ್ಳಲು ತಪ್ಪಾದ ಮಾಹಿತಿಗಳೇ ಕಾರಣ.

ಇಂದು ವಿಶ್ವ ಏಡ್ಸ್ ದಿನ: ಮಿಥ್ಯೆಗಳಿಂದ ದೂರವಿರಿ, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 01, 2020 | 5:25 PM

ಇಂದು (ಡಿ.1) ವಿಶ್ವ ಏಡ್ಸ್ ದಿನ . ಎಚ್‌ಐವಿ/ಏಡ್ಸ್ (ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ ) ರೋಗ ಲಕ್ಷಣ, ರೋಗ ಹರಡುವಿಕೆ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ನಡೆಯುತ್ತಲೇ ಇದ್ದರೂ ಈ ರೋಗದ ಬಗ್ಗೆ ಅಪನಂಬಿಕೆಗಳಿನ್ನೂ ಕಡಿಮೆಯಾಗಿಲ್ಲ.

ಸಮಾಜದಲ್ಲಿ ಇನ್ನೂ ಏಡ್ಸ್ ಬಗ್ಗೆ ಅಪನಂಬಿಕೆಗಳು ಉಳಿದುಕೊಳ್ಳಲು ತಪ್ಪಾದ ಮಾಹಿತಿಗಳೇ ಕಾರಣ. ಎಚ್‌ಐವಿ ವೈರಸ್‌ನಿಂದ ಏಡ್ಸ್ ರೋಗ ಬರಬಹುದು. ಆದರೆ ಎಚ್‌ಐವಿ ಸೋಂಕು ತಗುಲಿರುವ ಎಲ್ಲ ವ್ಯಕ್ತಿಗಳೂ ಸೋಂಕಿನ ಮೂರನೇ ಹಂತ ಕ್ಕೆ ತಲುಪುವುದಿಲ್ಲ. ಆರಂಭಿಕ ಹಂತದಲ್ಲಿಯೇ ಸೋಂಕು ತಗುಲಿರುವುದನ್ನು ಪತ್ತೆ ಹಚ್ಚಿ, ವೈದ್ಯರ ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ಏಡ್ಸ್ ರೋಗ ಬರುವುದಿಲ್ಲ.

ಆದರೆ ಸೋಂಕು ತಗುಲಿದೆ ಎಂದು ಗೊತ್ತಾದ ಕೂಡಲೇ ಸಮಾಜ ಆತನನ್ನು ಏಡ್ಸ್ ರೋಗಿಯೆಂದೇ ಪರಿಗಣಿಸುತ್ತದೆ ಅಂತಾರೆ ಮುಂಬೈಯ ಫೋರ್ಟಿಸ್ ಆಸ್ಪತ್ರೆಯ ವೈದ್ಯೆ ಡಾ . ಕೃತಿ ಸಬ್ನಿಸ್. ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಮಿಥ್ಯೆ/ಅಪನಂಬಿಕೆಗಳ ಬಗ್ಗೆ ಡಾ.ಕೃತಿ ಅವರು ಬೆಳಕು ಚೆಲ್ಲಿದ್ದಾರೆ.

ಏಡ್ಸ್ ರೋಗದ ಬಗ್ಗೆ ಸಮಾಜದಲ್ಲಿರುವ ಅಪನಂಬಿಕೆಗಳು ಇಂತಿವೆ

1. ಸೋಂಕಿತರು ಬಳಸಿದ ವಸ್ತುಗಳಿಂದ ರೋಗ ಹರಡುತ್ತದೆ: ಕುಟುಂಬದಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ ಅವರು ಬಳಸಿದ ಪಾತ್ರೆ , ಅವರು ಕುಳಿತುಕೊಂಡ ಆಸನ, ಹಾಸಿಗೆ ಅದನ್ನು ಇನ್ನೊಬ್ಬರು ಬಳಸಬಾರದು. ಈ ರೀತಿ ಬಳಸಿದರೆ ಸೋಂಕು ತಗಲುತ್ತದೆ ಎಂಬ ಅಪನಂಬಿಕೆ ವ್ಯಾಪಕವಾಗಿದೆ. ಆದರೆ ಈ ರೀತಿ ವಸ್ತು ಗಳನ್ನು ಹಂಚಿ ಬಳಸಿಕೊಳ್ಳುವುದರಿಂದ ಸೋಂಕು ಹರಡುವುದಿಲ್ಲ . ಸೋಂಕಿತರ ವೀರ್ಯಾಣು, ಯೋನಿ ದ್ರವ , ರಕ್ತ ಅಥವಾ ಮೊಲೆ ಹಾಲಿನಿಂದ ಮಾತ್ರ ಎಚ್ಐವಿ/ ಏಡ್ಸ್ ಹರಡುತ್ತದೆ.

2. ಡ್ರಗ್ಸ್ ಸೇವನೆ ಮಾಡುವವರಿಗೆ ಮಾತ್ರ ಏಡ್ಸ್ ಬರುತ್ತದೆ: ಇದು ಸತ್ಯಕ್ಕೆ ದೂರವಾದ ಮಾತು. ಸೂಜಿ ಮತ್ತು ಸಿರಿಂಜ್‌ನ ಮರುಬಳಕೆ ಮಾಡುವ ಮಾದಕ ವಸ್ತು ವ್ಯಸನಿಗಳಿಗೆ ಮಾತ್ರ ಸೋಂಕು ತಗಲುತ್ತದೆ ಎಂಬುದು ತಪ್ಪು. ಆರೋಗ್ಯ ಕೇಂದ್ರಗಳಲ್ಲಿಯೂ ಈ ರೀತಿ ಸೂಜಿ ಮರುಬಳಕೆ ಮಾಡಿದರೆ ರಕ್ತದ ಕಣಗಳ ಮೂಲಕ ಹರಡುವ ಯಾವುದೇ ರೋಗಕ್ಕೆ ಇದು ರಹದಾರಿಯಾಗುತ್ತದೆ. 3. ಸಲಿಂಗಿಗಳು ಸೆಕ್ಸ್ ಮಾಡಿದರೆ ಮಾತ್ರ ಸೋಂಕು ತಗಲುತ್ತದೆ: ಸಲಿಂಗಿಗಳಿಗೆ ಮಾತ್ರ ಅಲ್ಲ ಪುರುಷ- ಸ್ತ್ರೀ ಯಾರೇ ಆದರೂ ಸೆಕ್ಸ್ ವೇಳೆ ಕಾಂಡೋಮ್ ಬಳಸದೇ ಇದ್ದರೆ ಸೋಂಕು ತಗಲುವ ಸಾಧ್ಯತೆ ಜಾಸ್ತಿ ಇರುತ್ತದೆ. ಯಾವುದೇ ಮುಂಜಾಗ್ರತೆ ಇಲ್ಲದೆ, ಕಾಂಡೋಮ್ ಬಳಸದೆ ಒಂದಕ್ಕಿಂತ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕವಿರಿಸಿಕೊಂಡರೆ ಸೋಂಕು ಹರಡುವಿಕೆಯ ಅಪಾಯ ಹೆಚ್ಚು. 4. ಎಚ್​ಐವಿ ಸೋಂಕಿನ ಔಷಧಿ ಬಳಸುತ್ತಿದ್ದರೆ ಸೋಂಕು ಹರಡಲಾರದು: ಎಚ್‌ಐವಿ ಸೋಂಕಿತರು ಔಷಧಿ ಸೇವನೆ ಮಾಡುತ್ತಿದ್ದರೂ ಇವರಿಂದ ಸೋಂಕು ಹರಡುವ ಸಾಧ್ಯತೆಗಳು ಇದ್ದೇ ಇರುತ್ತವೆ. ಔಷಧಿ ಸೇವನೆಯಿಂದ ಸೋಂಕು ಉಂಟುಮಾಡುವ ವೈರಸ್‌ ಪ್ರಮಾಣ ಕಡಿಮೆಯಾಗುತ್ತದೆಯೇ ಹೊರತು ಹರಡುವಿಕೆಯ ಪ್ರಮಾಣ ಅಲ್ಲ. ಸೋಂಕಿತರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಾಗ ಕಡ್ಡಾಯವಾಗಿ ಕಾಂಡೋಮ್ ಬಳಸಬೇಕು. ಮೂಲಕ ಸೋಂಕು ಹರಡದಂತೆ ಎಚ್ಚರವಹಿಸಬೇಕು. 5. ಎಚ್‌ಐವಿ ಸೋಂಕಿತ ಮಹಿಳೆ ಗರ್ಭ ಧರಿಸಬಾರದು: ಮಹಿಳೆಗೆ ಎಚ್‌ಐವಿ ಸೋಂಕು ಇದ್ದರೆ ಗರ್ಭದಲ್ಲಿರುವ ಮಗುವಿಗೂ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ನಿಯಂತ್ರಿಸಬಹುದು. ಗರ್ಭಿಣಿಯಾಗಿರುವ ಹೊತ್ತಲ್ಲಿ ಸರಿಯಾದ ಶುಶ್ರೂಶೆ ಲಭಿಸಿದರೆ ಮಗುವಿಗೆ ಸೋಂಕು ತಗಲದಂತೆ ಮಾಡಬಹುದಾಗಿದೆ.

Published On - 5:22 pm, Tue, 1 December 20

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್