ವರ್ತೂರು ಪ್ರಕಾಶ್​ ಅಪಹರಣದ ಹಿಂದೆ ಮಹಿಳೆ? ಮಾಜಿ ಸಚಿವರು ಹೇಳಿದ ಕಿಡ್ನಾಪ್​ ಪ್ರಸಂಗದ ಸುತ್ತ ಅನುಮಾನದ ಹುತ್ತ!

ನನ್ನ ಮತ್ತು ಡ್ರೈವರ್​ನನ್ನು ಬೇರೆಬೇರೆ ಸ್ಥಳದಲ್ಲಿ ಇಟ್ಟು ಹೊಡೆದಿದ್ದರು. ಅವನಿಗೆ ಎಚ್ಚರವಾದ ಬಳಿಕ ಯಾವುದೋ ಪೊದೆಯಲ್ಲಿ ತಪ್ಪಿಸಿಕೊಂಡ. ಇವರು ಹುಡುಕಿದರೂ ಸಿಗಲಿಲ್ಲ. ನನ್ನ ಮೊಬೈಲ್​ ಆನ್​ನಲ್ಲಿಯೇ ಇಟ್ಟಿದ್ದರು ಎಂದು ಮಾಜಿ ಸಚಿವರು ಘಟನೆಯ ಬಗ್ಗೆ ತಿಳಿಸಿದ್ದಾರೆ.

ವರ್ತೂರು ಪ್ರಕಾಶ್​ ಅಪಹರಣದ ಹಿಂದೆ ಮಹಿಳೆ? ಮಾಜಿ ಸಚಿವರು ಹೇಳಿದ ಕಿಡ್ನಾಪ್​ ಪ್ರಸಂಗದ ಸುತ್ತ ಅನುಮಾನದ ಹುತ್ತ!
ವರ್ತೂರು ಪ್ರಕಾಶ್​
Follow us
Lakshmi Hegde
|

Updated on:Dec 02, 2020 | 10:35 AM

ಬೆಂಗಳೂರು: ನನ್ನನ್ನು ನವೆಂಬರ್​ 25ರಂದು ಅಪಹರಣ ಮಾಡಲಾಗಿತ್ತು. 4 ತಾಸುಗಳ ಕಾಲ ಚಿತ್ರಹಿಂಸೆ ನೀಡಿದರು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್​ ಶಾಕಿಂಗ್​ ವಿಚಾರ ಹೇಳಿದ್ದರು. ಹಾಗೇ ಘಟನೆ ನಡೆದು ಐದಾರು ದಿನಗಳ ದೂರು ನೀಡಲು ಕಾರಣ ಭಯ ಎಂಬುದನ್ನು ತಿಳಿಸಿದ್ದಾರೆ.

ಆದರೆ ಈ ಅಪಹರಣ ಘಟನೆಗೊಂದು ಬೇರೆಯದ್ದೇ ಆಯಾಮ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಾಜಿ ಸಚಿವರಾಗಿದ್ದರೂ ಇಷ್ಟು ಗಂಭೀರ ವಿಷಯದ ಬಗ್ಗೆ ದೂರು ನೀಡಲು ವಿಳಂಬ ಮಾಡಿದ್ದೇಕೆ? ಎಂಬ ಪ್ರಶ್ನೆ ಎದ್ದಿದೆ. ಎರಡು ದಿನ ನನ್ನನ್ನು ಅಲ್ಲಿಯೇ ಇಟ್ಟುಕೊಂಡಿದ್ದರು, ಹಲ್ಲೆ ನಡೆಸಿದ್ದರು ಎಂದು ವರ್ತೂರು ಪ್ರಕಾಶ್​ ಹೇಳುತ್ತಿದ್ದಾರೆ. ಅಂದ ಮೇಲೆ ಯಾರೋ ಗೊತ್ತಿದ್ದವರೇ, ವೈಯಕ್ತಿಕ ಕಾರಣಕ್ಕೆ ಈ ಹಲ್ಲೆ ಮಾಡಿರಬೇಕು ಎಂಬ ಅನುಮಾನವೂ ಕಾಡುತ್ತಿದೆ. ಅಷ್ಟೇ ಅಲ್ಲ, ವರ್ತೂರು ಪ್ರಕಾಶ್​ ಕಿಡ್ನ್ಯಾಪ್​ ಹಿಂದೆ ಮಹಿಳೆಯೋರ್ವರು ಇದ್ದಾರೆ ಎಂಬ ಸುಳಿವು ಸಿಕ್ಕಿದೆ.

ಕೋಲಾರದಲ್ಲಿ ಅಪಹರಣ ಆಗಿದ್ದರಿಂದ ಅಲ್ಲಿಯೇ ದೂರು ನೀಡಬೇಕಿತ್ತು. ಆದರೆ ಐದು ದಿನಗಳ ನಂತರ ಬೆಳ್ಳಂದೂರು ಠಾಣೆಯಲ್ಲಿ ಕಂಪ್ಲೇಂಟ್ ನೀಡಿದ್ದಾರೆ. 80 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎನ್ನುತ್ತಿದ್ದಾರೆ. ವರ್ತೂರು ಪ್ರಕಾಶ್​ ಚಾಲಕನಾದರೂ ದೂರು ನೀಡಬೇಕಿತ್ತು. ಅವರೂ ಸುಮ್ಮನಿರುವುದು ಯಾಕೆ? ಎಂಬಿತ್ಯಾದಿ ಪ್ರಶ್ನೆಗಳು ಪ್ರಕರಣದ ಬಗ್ಗೆ ಇನ್ನಷ್ಟು ಅನುಮಾನ ಹುಟ್ಟಿಸಿವೆ.

ಕಿಡ್ನ್ಯಾಪ್​ ಕತೆ ಬಿಚ್ಚಿಟ್ಟಿದ್ದ ವರ್ತೂರು…

ನನ್ನನ್ನು ನವೆಂಬರ್​ 25ರಂದು ಅಪಹರಣ ಮಾಡಲಾಗಿತ್ತು. ದುಷ್ಕರ್ಮಿಗಳು 80 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು, 4 ತಾಸುಗಳ ಕಾಲ ಚಿತ್ರಹಿಂಸೆ ನೀಡಿದರು ಎಂದು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್​ ಶಾಕಿಂಗ್​ ವಿಚಾರ ಹೇಳಿದ್ದಾರೆ.

ಅಂದು ಸಂಜೆ 7ಗಂಟೆ ಹೊತ್ತಿಗೆ ಒಂದು ಕಿರಿದಾದ ರಸ್ತೆಯಲ್ಲಿ ಬರುತ್ತಿದ್ದೆ. ಒಂದಷ್ಟು ಜನ ಕಾರು ಫಾಲೋ ಮಾಡಿಕೊಂಡು ಬಂದರು. ನಂತರ ಕಾರು ಅಡ್ಡಗಟ್ಟಿ ನನಗೆ ಮಂಕಿ ಕ್ಯಾಪ್ ಹಾಕಿದರು. ಕಾರಿನಲ್ಲಿಯೇ ನಾಲ್ಕು ತಾಸು ಇಟ್ಟುಕೊಂಡು, ನಂತರ ಕಾಡಿಗೆ ಕರೆದುಕೊಂಡು ಹೋದರು. ಅಲ್ಲಿಯೂ ಕೈಕಾಲು ಕಟ್ಟಿ ಹೊಡೆದರು. ನನ್ನ ಕಾರು ಚಾಲಕನಿಗೂ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಹಣಕ್ಕೆ ಬೇಡಿಕೆ ಅಪಹರಣಕಾರರು 30 ಕೋಟಿ ರೂಪಾಯಿಗಾಗಿ ಬೇಡಿಕೆ ಇಟ್ಟಿದ್ದರು. ನನ್ನ ಬಳಿ ಹಣ ಇಲ್ಲ. ಮೊನ್ನೆ ತಾನೇ ಚುನಾವಣೆ ನಡೆದಿದೆ. ನಾನು ಮಾಜಿ ಸಚಿವ ಎಂದು ಹೇಳಿದರೂ ಅವರು ನಂಬಲಿಲ್ಲ. ಒಂದೇ ಸಮ ಚಿತ್ರಹಿಂಸೆ ನೀಡುತ್ತಿದ್ದರು. ನಂತರ ನನ್ನ ಗೆಳೆಯನೊಬ್ಬನಿಗೆ ಕರೆ ಮಾಡಿ 50 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ನಾನು ಹೇಳಿದ್ದೆ. ಅವರೇ ಕರೆ ಮಾಡುವಂತೆ ಫೋನ್ ಕೊಟ್ಟಿದ್ದರು. ನನ್ನ ಡ್ರೈವರ್​​ಗೆ ಸಿಕ್ಕಾಪಟೆ ಹೊಡೆದಿದ್ದರಿಂದ ಅವನು ಪ್ರಜ್ಞೆ ತಪ್ಪಿದೆ. ಆತ ಸತ್ತೇ ಹೋಗಿದ್ದಾನೆ ಎಂದು ಭಾವಿಸಿದ ಗೂಂಡಾಗಳು ಕುಡಿಯಲು ಕುಳಿತರು. ಆಗ ರಾತ್ರಿ ಸುಮಾರು 11.30 ಆಗಿತ್ತು ಎಂದು ವರ್ತೂರು ಪ್ರಕಾಶ ಘಟನೆಯ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನನ್ನ ಮತ್ತು ಡ್ರೈವರ್​ನನ್ನು ಬೇರೆಬೇರೆ ಸ್ಥಳದಲ್ಲಿ ಇಟ್ಟು ಹೊಡೆದಿದ್ದರು. ಅವನಿಗೆ ಎಚ್ಚರವಾದ ಬಳಿಕ ಯಾವುದೋ ಪೊದೆಯಲ್ಲಿ ತಪ್ಪಿಸಿಕೊಂಡ. ಇವರು ಹುಡುಕಿದರೂ ಸಿಗಲಿಲ್ಲ. ನನ್ನ ಮೊಬೈಲ್​ ಆನ್​ನಲ್ಲಿಯೇ ಇಟ್ಟಿದ್ದರು. ಯಾರದ್ದೇ ಕರೆ ಬಂದರೂ ನಾನು ಸಹಜವಾಗಿಯೇ ಮಾತನಾಡುವಂತೆ ಹೆದರಿಸಿದ್ದರು. ನಾನೂ ಹಾಗೇ ಮಾತನಾಡುತ್ತಿದ್ದೆ. ಸ್ನೇಹಿತ ಹಣ ತಂದು ಕೊಟ್ಟ. ನಂತರ ಗೂಂಡಾಗಳು ನನ್ನನ್ನು ಹೊಸಕೋಟೆ ಬಳಿ ಬಿಟ್ಟು ಹೋದರು. ನನ್ನ ಮುಖದ ಮೇಲೆ ಮಂಕಿ ಕ್ಯಾಪ್ ಹಾಗೇ ಇತ್ತು. ಬಳಿಕ ಅಲ್ಲಿ ನನ್ನ ಮಗನನ್ನು ಕರೆಸಿಕೊಂಡು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದೆ ಎಂದಿದ್ದಾರೆ.

ಹೆದರಿಸಿದ್ದರು ಆದರೆ ಘಟನೆ ನಡೆದು ಇಷ್ಟುದಿನದ ಬಳಿಕ ದೂರು ಕೊಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿಸಚಿವ, ನನ್ನನ್ನು ಗೂಂಡಾಗಳು ಹೆದರಿಸಿದ್ದರು. ನೀನು ಹೋಗಿ ದೂರು ಕೊಟ್ಟರೆ ನಾವು ಒಂದು ದಿನ ಜೈಲಿನಲ್ಲಿ ಇರುತ್ತೇವೆ. ನಂತರ ಬರುತ್ತೇವೆ ಎಂದು ನನ್ನನ್ನು ತುಂಬ ಹೆದರಿಸಿದ್ದರು. ಈಗ ನನ್ನ ಕಾರು ಪತ್ತೆಯಾಯ್ತು. ಹಾಗಾಗಿ ದೂರು ಕೊಟ್ಟೆ ಎಂದಿದ್ದಾರೆ.

Published On - 10:26 am, Wed, 2 December 20