ಸುಲಿಗೆ, ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನ ಸೆರೆ

| Updated By: ಸಾಧು ಶ್ರೀನಾಥ್​

Updated on: Jan 05, 2021 | 5:55 PM

ಬಂಧಿತನಿಂದ 70 ಸಾವಿರ ಬೆಲೆ ಬಾಳುವ 4 ಮೊಬೈಲ್, 60 ಸಾವಿರ ಬೆಲೆ ಬಾಳುವ 2 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಲಿಗೆ, ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನ ಸೆರೆ
ಪೊಲೀಸ್ ಸಿಬ್ಬಂದಿ ಮತ್ತು ಬಂಧಿತಕ್ಕೊಳಗಾದ ಸೈಯದ್ ವಾಸೀಮ್
Follow us on

ಮೈಸೂರು: ಬೈಕ್ ಕಳ್ಳತನ ಮತ್ತು ಸುಲಿಗೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗೌಸಿಯಾ ನಗರದ ಉಸ್ಮಾನಿ ಬ್ಲಾಕ್​ನ ನಿವಾಸಿ ಸೈಯದ್ ವಾಸೀಮ್ ಎಂಬುವವನನ್ನು ದೇವರಾಜ ಠಾಣೆಯ  ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 70 ಸಾವಿರ ಬೆಲೆ ಬಾಳುವ 4 ಮೊಬೈಲ್ , 60 ಸಾವಿರ ಬೆಲೆ ಬಾಳುವ 2 ಬೈಕ್​ಗಳನ್ನು ವಶಕ್ಕೆ ಪಡೆದಿದ್ದು, ಸಾರ್ವಜನಿಕರ ದೂರಿನನ್ವಯ ಡಿಸಿಪಿ ಗೀತಾ ಪ್ರಸನ್ನರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಎಸಿಪಿ ಮರಿಯಪ್ಪ, ಇನ್ಸ್​ಪೆಕ್ಟರ್ ದಿವಾಕರ್, ಪಿಎಸ್ಐ ಲೀಲಾವತಿ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

ಬೆಂಗಳೂರಲ್ಲಿ IMA ಅಕ್ರಮದ ಮಾದರಿಯಲ್ಲೇ ಮತ್ತೊಂದು ಬಹುಕೋಟಿ ವಂಚನೆ ಬಯಲಿಗೆ!