ಮುಂಬೈ: ಬಹುಭಾಷಾ ನಟಿ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಎಸ್ಕೇಪ್ ಲೈವ್ ಎಂಬ ವೆಬ್ ಸರಿಣಿಯಲ್ಲಿ ನಟಿಸಲಿದ್ದಾರೆ ಎಂದು ಸೀರೀಸ್ನ ತಂಡ ಸೋಮವಾರ ತಿಳಿಸಿದೆ. ಅರುಂಧತಿ ನಾಗ್ ಬಣ್ಣ ಹಚ್ಚಲಿರುವ ಎಸ್ಕೇಪ್ ಲೈವ್ ವೆಬ್ ಸರಣಿಯನ್ನು ಸಿದ್ದಾರ್ಥ್ ಕುಮಾರ್ ತಿವಾರಿಯ ಒನ್ ಲೈಫ್ ಸ್ಟೂಡಿಯೋ ನಿರ್ಮಾಣ ಮಾಡುತ್ತಿದೆ.
2013 ರಲ್ಲಿ ಮಹಾಭಾರತ್ ಮತ್ತು 2016ರಲ್ಲಿ ಕರ್ಮಫಲ್ ದಾತಾ ಶನಿದಂತಹ ಪೌರಾಣಿಕ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಪಡೆದಿರುವ ತಿವಾರಿ, ಎಸ್ಕೇಪ್ ಲೈವ್ ವೆಬ್ ಸರಣಿಯಲ್ಲಿ ಅಭೀಷೇಕ್ ಸೇನೆ ಗುಪ್ತಾರೊಂದಿಗೆ ಸಹ ನಿರ್ದೇಶನ ಮಾಡಲಿದ್ದಾರೆ.
ಪೋಷಕ ಪಾತ್ರದಲ್ಲಿ ಅರುಂಧತಿ
ಜನಪ್ರಿಯ ಲೈವ್-ಸ್ಟ್ರೀಮಿಂಗ್ ಌಪ್ ಒಂದರ ಮುಖಾಂತರ ಐವರು ಜನಸಾಮಾನ್ಯರು ರಾತ್ರೋರಾತ್ರಿ ಖ್ಯಾತಿ ಪಡೆಯಲು ನಡೆಸುವ ಪ್ರಯತ್ನವೇ ಈ ವೆಬ್ ಸೀರೀಸ್ನ ಕಥಾ ಹಂದರ. ಅರುಂಧತಿ ನಾಗ್ ರಂಗ್ ದೇ ಬಸಂತಿ ಮತ್ತು ಚಶ್ಮೇ ಬದ್ದೂರ್ ಸಿನಿಮಾಗಳ ಮೂಲಕ ಹಿಂದಿ ಪ್ರೇಕ್ಷಕರಿಗೆ ಚಿರಪರಿಚಿತರಾದ ತಮಿಳು ನಟ ಸಿದ್ದಾರ್ಥ್ ಸೂರ್ಯನಾರಾಯಣ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ತನ್ನ ಪಾತ್ರದ ಬಗ್ಗೆ ಮಾತನಾಡಿದ ನಟಿ ಈಕೆಗೆ ತನ್ನ ಮಗನೇ ಸರ್ವಸ್ವ. ಜೀವನದಲ್ಲಿ ಆತ ಸದಾ ಯಶಸ್ಸು ಕಾಣಲಿ ಎಂಬ ಹೆಬ್ಬಯಕೆಯಿಂದ ಈಕೆ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೇ ಈ ಕಥೆಯನ್ನು ರೋಚಕಗೊಳಿಸುತ್ತದೆ ಎಂದು ಹೇಳಿದರು.
ಶಂಕ್ರಣ್ಣ ಇಂದು ಬದುಕಿದ್ದರೆ.. 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ರು..
Published On - 6:28 pm, Mon, 7 December 20