ನಾಡಿದ್ದಲ್ಲ.. ನಾಳೆಯೇ ಬೆಂಗಳೂರು ಬಂದ್!
ಬೆಂಗಳೂರು ನಾಳೆಯೇ ಬಂದ್ ಆಗಲಿದೆ. ನಾಡಿದ್ದಿನ ಬದಲಿಗೆ ನಾಳೆಯೇ ಬೆಂಗಳೂರು ಬಂದ್ ಮಾಡಲು ಸಂಘಟನೆಗಳು ನಿರ್ಧರಿಸಿವೆ.
ಬೆಂಗಳೂರು: ನಾಳೆ ವಿವಿಧ ಸಂಘಟನೆಗಳು ಭಾರತ್ ಬಂದ್ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಹ ನಾಳೆಯೇ ಬಂದ್ ಆಗಲಿದೆ. ನಾಡಿದ್ದಿನ ಬದಲಿಗೆ ನಾಳೆಯೇ ಬೆಂಗಳೂರು ಬಂದ್ ಮಾಡಲು ಸಂಘಟನೆಗಳು ನಿರ್ಧರಿಸಿವೆ. ನಾಳೆ ಅಥವಾ ನಾಡಿದ್ದು ಎಂಬ ಗೊಂದಲದಲ್ಲಿದ್ದ ಸಂಘಟನೆಗಳು ನಾಳೆಯೇ ಬೆಂಗಳೂರು ಬಂದ್ ಮಾಡುವುದಾಗಿ ಘೋಷಿಸಿವೆ.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಕುಮಾರ್, ರೈತ ಸಂಘದ ಬಡಗಲಪುರ ನಾಗೇಂದ್ರ ಮುಂತಾದವರು ನಾಳೆಯೇ ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದಾರೆ. ಅನ್ನದಾತರ ಋಣ ತೀರಿಸುವ ಉದ್ದೇಶ ಹೊಂದಿರುವ ನಾಳೆಯ ಬಂದ್ಗೆ ಬೆಂಬಲ ನೀಡಲು ಸಂಘಟನೆಗಳು ಕರೆ ನೀಡಿವೆ. ಈ ಮೂಲಕ ಕರ್ನಾಟಕದ ರೈತ ಸಂಘಟನೆಗಳು ದೆಹಲಿ ಚಲೋಗೆ ಬೆಂಬಲ ನೀಡಲಿವೆ. ಅಲ್ಲದೇ, ಹಲವು ಜಿಲ್ಲೆಗಳಲ್ಲೂ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ.
ಏನಿರುತ್ತೆ? ಪ್ರತಿಭಟನೆಯ ಕಾವನ್ನು ನಿರ್ಧರಿಸಿ ಆಟೋ, ಓಲಾ, ಊಬರ್ಗಳು ರಸ್ತೆಗಿಳಿಯುವುದು ನಿರ್ಧಾರವಾಗಲಿದೆ. ಆಟೋ ಅಸೋಸಿಯೇಶನ್ ನೈತಿಕ ಬೆಂಬಲ ನೀಡಿದೆ. ಆದರೆ ಆಟೋ, ಓಲಾ, ಊಬರ್ಗಳನ್ನು ಓಡಿಸುವುದು ಚಾಲಕರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಆಯಾ ಅಸೋಸಿಯೇಷನ್ಗಳು ತಿಳಿಸಿವೆ. ನೈತಿಕ ಬೆಂಬಲ ನೀಡಿರುವ ಹೊಟೇಲ್ಗಳು ಎಂದಿನಂತೆ ತೆರೆದಿರಲಿವೆ. ಬಸ್ ಸಂಚಾರವೂ ಸಹಜವಾಗಿ ನಡೆಯುವ ಸಾಧ್ಯತೆಯಿದೆ. ಮೆಟ್ರೋ ಎಂದಿನಂತೆ ಸಂಚರಿಸಲಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ತಟಸ್ಥ ನಿಲುವು ಚಿತ್ರ ಪ್ರದರ್ಶನ ಮತ್ತು ಚಿತ್ರೋದ್ಯಮದ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ತುರ್ತು ಸಭೆ ನಾಳೆಯೇ ಬಂದ್ ಘೊಷಣೆಯಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸಭೆ ನಡೆಯಿತು. ಬಂದ್ ನಡೆಯಲಿ, ನಡೆಯದಿರಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಭದ್ರತೆ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ನಾಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಆಯಾ ವಿಭಾಗದ ಡಿಸಿಪಿಗಳಿಗೆ ಭದ್ರತೆಯ ಉಸ್ತುವಾರಿ ವಹಿಸಲಾಗಿದೆ. ಇದುವರೆಗೂ ಬಂದ್ ಮಾಡುವುದಾಗಿ ಯಾವ ಸಂಘಟನೆಯೂ ಪೊಲೀಸರಿಗೆ ಮನವಿ ಮಾಡಿಲ್ಲ ಎಂದು ತಿಳಿದುಬಂದಿದೆ.
ಭಾರತ್ ಬಂದ್ಗೆ ಹರಿದುಬರುತ್ತಿದೆ ಬೆಂಬಲ: ನಾಳೆ ಕಾಣಸಿಗುತ್ತದೆ ರಾಜ್ಯ ರೈತರ, ಕಾರ್ಮಿಕರ ಬಲಾಬಲ
Published On - 5:56 pm, Mon, 7 December 20