AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ಆರನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

ಮೌಲ್ಯವರ್ಧಿತ ತೆರಿಗೆಯ ಪ್ರಮಾಣವನ್ನು ಅವಲಂಬಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಸತತ ಆರನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ
ಸಾಂದರ್ಭಿಕ ಚಿತ್ರ
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 07, 2020 | 7:02 PM

Share

ಬೆಂಗಳೂರು: ತೈಲ ಮಾರಾಟ ಕಂಪನಿಗಳು ಸತತ 6ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿವೆ. ಪ್ರತಿ ಲೀಟರ್​ಗೆ ಸರಾಸರಿ 26 ರಿಂದ 30 ಪೈಸೆಯಷ್ಟು ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಡೀಸೆಲ್ ದರವು ಪ್ರತಿ ಲೀಟರ್​ಗೆ ಪೆಟ್ರೋಲ್ ದರವು 31 ಪೈಸೆ ಹೆಚ್ಚಾಗಿದ್ದು, ₹ 86.51ಕ್ಕೆ ಮಾರಾಟವಾಗುತ್ತಿದೆ. ಡೀಸೆಲ್ 28 ಪೈಸೆ ಹೆಚ್ಚಾಗಿದ್ದು, ₹ 78.31ಕ್ಕೆ ಮಾರಾಟವಾಗುತ್ತಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್​ಗೆ ₹ 83.71 ಹಾಗೂ ಡೀಸೆಲ್ ₹ 73.87ಕ್ಕೆ ಮಾರಾಟವಾಗಿದೆ. ಸುಮಾರು 2 ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ನವೆಂಬರ್​ 20ರಿಂದ ತೈಲಬೆಲೆಯ ಪರಿಷ್ಕರಣೆ ಆರಂಭಿಸಿದವು. ಕಳೆದ 18 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ ₹ 2.65 ಮತ್ತು ಡೀಸೆಲ್ ₹ 3.41 ಹೆಚ್ಚಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹ 90.34ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ₹ 80.51ಕ್ಕೆ ಏರಿದೆ. ಮೌಲ್ಯವರ್ಧಿತ ತೆರಿಗೆಯ ಪ್ರಮಾಣವನ್ನು ಅವಲಂಬಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

Published On - 6:09 pm, Mon, 7 December 20