ಅಕ್ಷಯ ಪಾತ್ರೆ ಫೌಂಡೇಷನ್ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ MLC ಲೆಹರ್ ಸಿಂಗ್ ಪತ್ರ
ಬಡ ಮಕ್ಕಳ ಹಸಿವು ನೀಗಿಸುವ ಅಕ್ಷಯ ಪಾತ್ರೆ ಫೌಂಡೇಷನ್ ಅವ್ಯವಹಾರ ನಡೆಸುತ್ತಿದೆ ಎಂದು ಆರೋಪಿಸಿ ನ್ಯಾಯಲಯದ ಮೊರೆ ಹೋದ ಬಿಜೆಪಿ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯಾ.
ಬೆಂಗಳೂರು: ಬಡ ಮಕ್ಕಳ ಹಸಿವು ನೀಗಿಸುವ ಸಂಸ್ಥೆ ಎಂದೇ ಗುರುತಿಸಿಕೊಂಡಿದ್ದ ಅಕ್ಷಯ ಪಾತ್ರೆ ಫೌಂಡೇಷನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡುವುದಷ್ಟೇ ಅಲ್ಲದೇ ಖಾಸಗಿ ಕಂಪನಿಗಳಿಂದ ಅನುದಾನ ಪಡೆದು ಕಡಿಮೆ ಖರ್ಚಿನಲ್ಲಿ ಊಟ ಹಂಚುವ ಕಾರ್ಯ ಮಾಡುತ್ತಿದ್ದ ಈ ಸಂಸ್ಥೆ ಒಂದು ಕಾಲದಲ್ಲಿ ಅನ್ನಪೂರ್ಣೆಶ್ವರಿ ಎಂದೇ ಗುರಿಸಿಕೊಂಡಿತ್ತು.
ಆದರೆ, ನಾಲ್ಕು ಜನರಿಗೆ ಮಾದರಿಯಾಗಿದ್ದ ಅಕ್ಷಯ ಪಾತ್ರೆ ಫೌಂಡೇಷನ್ ವಿರುದ್ಧ ಅವ್ಯವಹಾರದ ಅರೋಪ ಕೇಳಿಬಂದಿದೆ. ಇದೀಗ, ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯಾ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ಈ ಅವ್ಯವಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದ್ದಾರೆ.
ಬಡ ಮಕ್ಕಳ ಹಸಿವು ನೀಗಿಸುತ್ತಿದ್ದ ಅಕ್ಷಯ ಪಾತ್ರೆಯಲ್ಲಿ ನಡೀತಾ ಅವ್ಯವಹಾರ? ಸ್ವತಂತ್ರ ಟ್ರಸ್ಟಿಗಳ ರಾಜೀನಾಮೆ..
Published On - 6:40 pm, Mon, 7 December 20