ಕಾರ್ಪೊರೇಟರ್ ಪಾಷಾ ವಿಕ್ಟೋರಿಯಾ ಪಾಲು, ಜೆ.ಜೆ.ನಗರ ಪೊಲೀಸರಿಗೂ ಶುರುವಾಯ್ತು ಭೀತಿ!

|

Updated on: May 30, 2020 | 2:39 PM

ಬೆಂಗಳೂರು: ಅತ್ತ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್​​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಇತ್ತ ಜೆ.ಜೆ.ನಗರ ಪೊಲೀಸರಿಗೂ ಕೊರೊನಾ ಭೀತಿ ಶುರುವಾಗಿದೆ. ಸ್ಥಳೀಯ ಕಾರ್ಪೊರೇಟರ್ ಪಾಷಾ ಮೇ 27ರಂದು ಪೊಲೀಸರಿಗೆ ಆಹಾರ ವಿತರಿಸಿದ್ದ. ಸ್ವತಃ ಇಮ್ರಾನ್,​​ ಠಾಣೆಯ 30ಕ್ಕೂ ಹೆಚ್ಚು ಸಿಬ್ಬಂದಿಗೆ ಊಟ ಬಡಿಸಿದ್ದ ಎಂಬುದು ಇನ್ನೂ ಆತಂಕ ತಂದೊಡ್ಡಿದೆ. ಇದರಿಂದ ಜೆ.ಜೆ ನಗರ ಪೊಲೀಸರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ. ಜೆಜೆ ನಗರ ಪೊಲೀಸರಿಗೆ ಹಾಗಾಗದಿರಲಿ.. ಗಮನಾರ್ಹ ಸಂಗತಿಯೆಂದ್ರೆ ಈ […]

ಕಾರ್ಪೊರೇಟರ್ ಪಾಷಾ ವಿಕ್ಟೋರಿಯಾ ಪಾಲು, ಜೆ.ಜೆ.ನಗರ ಪೊಲೀಸರಿಗೂ  ಶುರುವಾಯ್ತು ಭೀತಿ!
Follow us on

ಬೆಂಗಳೂರು: ಅತ್ತ ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್​​ ಪಾಷಾ‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಇತ್ತ ಜೆ.ಜೆ.ನಗರ ಪೊಲೀಸರಿಗೂ ಕೊರೊನಾ ಭೀತಿ ಶುರುವಾಗಿದೆ. ಸ್ಥಳೀಯ ಕಾರ್ಪೊರೇಟರ್ ಪಾಷಾ ಮೇ 27ರಂದು ಪೊಲೀಸರಿಗೆ ಆಹಾರ ವಿತರಿಸಿದ್ದ.

ಸ್ವತಃ ಇಮ್ರಾನ್,​​ ಠಾಣೆಯ 30ಕ್ಕೂ ಹೆಚ್ಚು ಸಿಬ್ಬಂದಿಗೆ ಊಟ ಬಡಿಸಿದ್ದ ಎಂಬುದು ಇನ್ನೂ ಆತಂಕ ತಂದೊಡ್ಡಿದೆ. ಇದರಿಂದ ಜೆ.ಜೆ ನಗರ ಪೊಲೀಸರಿಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಜೆಜೆ ನಗರ ಪೊಲೀಸರಿಗೆ ಹಾಗಾಗದಿರಲಿ..
ಗಮನಾರ್ಹ ಸಂಗತಿಯೆಂದ್ರೆ ಈ ಹಿಂದೆ ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್​ ಮೇಲೆ ಸ್ಥಳೀಯ ಪುಂಡರು ಭಾರೀ ಹಲ್ಲೆ ನಡೆಸಿ, ಪುಂಡಾಟ ಮೆರೆದಿದ್ದರು. ಅಲ್ಲಿಂದೀಚೆಗೆ ಪೊಲೀಸರು ಪಾದರಾಯನಪುರದ ಮೇಲೆ ಹದ್ದಿನಕಣ್ಣಿಟ್ಟಿದ್ದು, ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದರು.

ಜೊತೆಗೆ ಅದೇ ಪುಂಡರನ್ನು ರಾಮನಗರದವರೆಗೂ ಕರೆದುಕೊಂಡು ಹೋಗಿ ಬಂದಿದ್ದರು. ಈ ಪ್ರಕ್ರಿಯೆಗಳ ವೇಳೆ ಯಾವುದೇ ಪೊಲೀಸ್​ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರಲಿಲ್ಲ. ಆದ್ರೆ ಈಗ ಏನೋ ಎಂತೋ ಎಂಬಂತಾಗಿದೆ ಸ್ಥಳೀಯ ಪೊಲೀಸರ ಪರಿಸ್ಥಿತಿ.

ಪ್ರೈಮರಿ ಕಾಂಟ್ಯಾಕ್ಟ್ ಪಾಷಾ, ಜೊತೆಗೆ 3 ಸಂಬಂಧಿಗಳೂ ಆಸ್ಪತ್ರೆಗೆ!
ಇಮ್ರಾನ್ ಪಾಷ ನನ್ನು ಪ್ರೈಮರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿರುವ ಬಿಬಿಎಂಪಿ ವೈದ್ಯಾಧಿಕಾರಿಗಳು ಪಾಷಾ ಜೊತೆಯಲ್ಲಿದ್ದ ಇತರೆ ಮೂವರನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ. ಇಮ್ರಾನ್ ಪಾಷಾ ಸಂಬಂಧಿಕರಾದ ಆ ಮೂವರನ್ನೂ ಬಿಬಿಎಂಪಿ ಸಿಬ್ಬಂದಿ ವಿಕ್ಟೋರಿಯಾ ಕೊವಿಡ್ ವಾರ್ಡ್​ಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

Published On - 1:12 pm, Sat, 30 May 20