ಬೆಂಗಳೂರು: ಐಟಿ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ನಿವಾಸಿ ನಾಗೇಂದ್ರ(40) ಬಂಧಿತ ಆರೋಪಿ. ಎಲ್‌ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಗೇಂದ್ರ, ಎಲ್‌ಐಸಿ ಹಣ ಪಡೆಯುವ ವೇಳೆ ಸರ್ಕಾರಿ ಅಧಿಕಾರಿಗಳ ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಅದೇ ಅಧಿಕಾರಿಗಳಿಗೆ ಮಂಜುನಾಥ್ ನಾಯಕ್ ಎಂಬ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.
ನಿವೃತ್ತಿಯ ಸನಿಹದಲ್ಲಿರುವವರನ್ನು ಟಾರ್ಗೆಟ್ ಮಾಡಿ ನಿಮ್ಮ ಆಸ್ತಿವಿವರ ನನ್ನ ಬಳಿ ಇದೆ, ಲೆಕ್ಕ ನೀಡಿ ಎಂದು ಧಮ್ಕಿ ಹಾಕಿ, ನಾಳೆಯೇ ಕಚೇರಿಗೆ ಬರುವಂತೆ ಕೇಳುತ್ತಿದ್ದ. ಆಗ ನಾವು ನಿವೃತ್ತಿ ಹಂತದಲ್ಲಿದ್ದೇವೆ ಎಂದು ಮನವಿ ಮಾಡಿಕೊಳ್ತಿದ್ರು. ಬಳಿಕ ಹಣ ನೀಡಿ ಸುಮ್ಮನಾಗಿ ಎಂದು ನಾಗೇಂದ್ರ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. ಆರೋಪಿ ಮಾತು ನಂಬಿ ಅಧಿಕಾರಿಗಳು ಹಣವನ್ನು ನೀಡಿದ್ದರು. ಹೀಗೆ ಓರ್ವ ಅಧಿಕಾರಿಗೆ ಅನುಮಾನ ಬಂದು ಪರಿಶೀಲನೆ ಮಾಡಿದ್ದಾರೆ ಈ ವೇಳೆ ಆರೋಪಿ ಮಾಡಿರುವ ವಂಚನೆ ಬಯಲಾಗಿದೆ.
ಅಧಿಕಾರಿ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರ್ಟಿ ಓನ ಡಿಆರ್ಡಿಓ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬರೋಬ್ಬರಿ ನೂರು ಮಂದಿ ಸರ್ಕಾರಿ ನೌಕರರಿಂದ ಕೋಟ್ಯಾಂತರ ಹಣ ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ವಿಚಾರಣೆ ವೇಳೆ ಮತ್ತಷ್ಟು ವಂಚನೆ ಪ್ರಕರಣ ಬೆಳಕಿಗೆ ಬರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.