AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೀಡಂಪಾರ್ಕ್​ನಲ್ಲಿ ನಿಂತು ಪಾಕ್ ಪರ ಘೋಷಣೆ, ಅಮೂಲ್ಯಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ನಗರದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಮೂಲ್ಯ ಎಂಬಾಕೆ ರಾಜ್ಯದಲ್ಲೇ ಕಿಚ್ಚು ಹೊತ್ತಿಸಿದ್ದಾಳೆ. ಇದು ಕೇವಲ ರಾಜ್ಯದಲ್ಲಿ ಹೊತ್ತಿ ಉರಿಯುವಂತೆ ಕಾಣ್ತಿಲ್ಲ. ಬದಲಿಗೆ ಇಡೀ ರಾಷ್ಟ್ರಕ್ಕೆ ವ್ಯಾಪಿಸೋ ಸಾಧ್ಯತೆಗಳು ಕಂಡು ಬರ್ತಿವೆ. ಆಕೆ ನೀಡಿದ ಒಂದೇ ಒಂದು ಹೇಳಿಕೆಯಿಂದ ಪ್ರತಿಭಟನೆಯ ಮೂಲೋದ್ದೇಶ ಹಳ್ಳ ಹಿಡಿಯುವಂತೆ ಮಾಡಿದೆ. ಯಾವ ದೇಶದ ಹೆಸರನ್ನ ಕೇಳಿದ್ರೆ ಭಾರತೀಯರು ನಿಗಿ ನಿಗಿ ಕೆಂಡ ಕಾರುತ್ತಾರೋ. ಯಾವ ದೇಶದ ಹೆಸರನ್ನ ಕೇಳಿದ್ರೆ ಭಾರತೀಯರು ಕೆರಳುತ್ತಾರೋ. ಯಾವ ದೇಶದ ಹೆಸರು ಕೇಳಿದ್ರೆ ಭಾರತೀಯರು […]

ಫ್ರೀಡಂಪಾರ್ಕ್​ನಲ್ಲಿ ನಿಂತು ಪಾಕ್ ಪರ ಘೋಷಣೆ,  ಅಮೂಲ್ಯಗೆ 14 ದಿನ ನ್ಯಾಯಾಂಗ ಬಂಧನ
ಸಾಧು ಶ್ರೀನಾಥ್​
|

Updated on:Feb 21, 2020 | 7:09 AM

Share

ಬೆಂಗಳೂರು: ನಗರದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಮೂಲ್ಯ ಎಂಬಾಕೆ ರಾಜ್ಯದಲ್ಲೇ ಕಿಚ್ಚು ಹೊತ್ತಿಸಿದ್ದಾಳೆ. ಇದು ಕೇವಲ ರಾಜ್ಯದಲ್ಲಿ ಹೊತ್ತಿ ಉರಿಯುವಂತೆ ಕಾಣ್ತಿಲ್ಲ. ಬದಲಿಗೆ ಇಡೀ ರಾಷ್ಟ್ರಕ್ಕೆ ವ್ಯಾಪಿಸೋ ಸಾಧ್ಯತೆಗಳು ಕಂಡು ಬರ್ತಿವೆ. ಆಕೆ ನೀಡಿದ ಒಂದೇ ಒಂದು ಹೇಳಿಕೆಯಿಂದ ಪ್ರತಿಭಟನೆಯ ಮೂಲೋದ್ದೇಶ ಹಳ್ಳ ಹಿಡಿಯುವಂತೆ ಮಾಡಿದೆ.

ಯಾವ ದೇಶದ ಹೆಸರನ್ನ ಕೇಳಿದ್ರೆ ಭಾರತೀಯರು ನಿಗಿ ನಿಗಿ ಕೆಂಡ ಕಾರುತ್ತಾರೋ. ಯಾವ ದೇಶದ ಹೆಸರನ್ನ ಕೇಳಿದ್ರೆ ಭಾರತೀಯರು ಕೆರಳುತ್ತಾರೋ. ಯಾವ ದೇಶದ ಹೆಸರು ಕೇಳಿದ್ರೆ ಭಾರತೀಯರು ಹಿಡಿ ಶಾಪ ಹಾಕ್ತಾರೋ. ಅಂತಾ ದೇಶಕ್ಕೆ ಜೈ ಅನ್ನೋ ಮೂಲಕ ಭಾರತೀಯರು ಕೆರಳುವಂತೆ ಮಾಡಿದ್ದಾಳೆ. ಈ ರೀತಿ ಹೇಳಿದ್ದು. ಕಾಶ್ಮೀರದ ಗಲ್ಲಿಯಲ್ಲೋ.. ಶ್ರೀನಗರದ ಹಾದಿಬೀದಿಯಲ್ಲೋ ಆಗಿದ್ದಿದ್ರೆ. ಭಾರತೀಯರಿಗೆ ಈ ಮಟ್ಟಿಗಿನ ಕೋಪ ಬರ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಈಕೆ ಘೋಷಣೆ ಕೂಗಿದ್ದು ಭಾರತದ ಗಾರ್ಡನ್​ ಸಿಟಿ, ಸಿಲಿಕಾನ್ ಸಿಟಿ.. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೃದಯದಂತಿರೋ ಫ್ರೀಡಂಪಾರ್ಕ್​ನಲ್ಲಿ. ಇದೇ ಕಾರಣಕ್ಕೆ ಅಮೂಲ್ಯ ಅನ್ನೋ ಅರೆಬೆಂದ ಚಿಂತಕಿಯ ವಿರುದ್ಧ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ಇದು ರಾಷ್ಟ್ರಮಟ್ಟದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.

ಫ್ರೀಡಂಪಾರ್ಕ್​ನಲ್ಲಿ ನಿಂತು ಪಾಕ್ ಪರ ಘೋಷಣೆ ಕೂಗಿದ್ಲು..! ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಸಿಎಎ ವಿರುದ್ಧ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಎಐಎಂಐಎಂ ನಾಯಕ ಅಸಾದುದ್ದಿನ್ ಒವೈಸಿ ಕೂಡ ಭಾಗವಹಿಸಿದ್ರು. ಆಗ ಅಮೂಲ್ಯ ಅನ್ನೋ ಅರೆಬೆಂದ ಚಿಂತಕಿ. ತನ್ನ ಮಾತಿನ ಮೇಲೆ ನಿಗಾ ಇಡಲು ಆಗದ ಎಳಸು ಹೋರಾಟಗಾರ್ತಿಯನ್ನ ಆಯೋಜಕರು ಬಾರಮ್ಮಾ ಮಾತಾಡು ಅಂತಾ ಕರೆದ್ರು.

ಯಾವಾಗ ತನ್ನ ಕೈಗೆ ಮೈಕ್ ಸಿಕ್ತೋ. ನಾನು ಎಲ್ಲಿದ್ದೇನೆ.. ಯಾವ ಕಾರಣಕ್ಕೆ ನನ್ನನ್ನ ಮಾತನಾಡಲು ಕರೆದಿದ್ದಾರೆ. ನಾನು ಏನು ಮಾತನಾಡಬೇಕು ಅನ್ನೋದನ್ನೇ ಮರೆತೇ ಹೋಗಿ. ನಾನು ಹೇಳಿದ್ದನ್ನ ಪ್ರಪಂಚವೇ ಕೇಳುತ್ತೆ ಅನ್ನೋ ಹುಂಬತನದಲ್ಲಿ ಪಾಪಿ ಪಾಕಿಸ್ತಾನದ ಪರ ಘೋಷಣೆಯನ್ನ ಕೂಗೇ ಬಿಟ್ಲು.

ಅಮೂಲ್ಯ ಯಾವಾಗ ಈ ಘೋಷಣೆ ಕೂಗಿದ್ಲೋ.. ಪ್ರತಿಭಟನಾ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ವೇದಿಕೆ ಮೇಲೆ ಕಾಣಿಸಿಕೊಂಡ್ರು. ಈ ಚಿಲ್ಟು ಹೋರಾಟಗಾರ್ತಿಯ ಮಾತು ಕೇಳಿ ದಂಗು ಬಡಿದು ಹೋಗಿದ್ದ ಆಯೋಜಕರು ತಕ್ಷಣವೇ ಮೈಕ್ ಕಿತ್ತುಕೊಂಡ್ರು. ವೇದಿಕೆಯಲ್ಲಿದ್ದ ಅಸಾದುದ್ದಿನ್ ಒವೈಸಿ ಕೂಡ ಎಂತಾ ಅಪಚಾರವಾಯ್ತು ಅಂತಾ ಎದ್ನೋ ಬಿದ್ನೋ ಅಂತಾ ಓಡಿ ಬಂದು ನೀವು ಮಾಡಿದ್ದು ಸರಿಯಲ್ಲ ಅಂತಾ ಹೇಳಿದ್ರು. ಆಗ.. ವೇದಿಕೆಯ ಮೇಲೆ ದೊಡ್ಡ ಹೈಡ್ರಾಮಾವೇ ನಡೀತು.

ಇಷ್ಟೆಲ್ಲಾ ಹೈಡ್ರಾಮಾ ನಡೆದ ಬಳಿಕ ಪೊಲೀಸರು ಅಮೂಲ್ಯಳನ್ನ ವಶಕ್ಕೆ ಪಡೆದ್ರು. ಬಳಿಕ ಆಕೆಯನ್ನ ಅಜ್ಞಾತಸ್ಥಳಕ್ಕೆ ಕರೆದೊಯ್ದು. ಆಕೆಯ ಜಾತಕವನ್ನೇ ಜಾಲಾಡಿದ್ದಾರೆ. ಆಗ ಆಕೆ ಪೂರ್ವಪರ ಎಲ್ಲ ಗೊತ್ತಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದವಳಾಗಿರೋ ಅಮೂಲ್ಯ. ಬೆಂಗಳೂರಿನ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಓದುತ್ತಿದ್ದಾಳೆ.

ಅಲ್ದೆ, ಸಿಎಎ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸ್ತಿದ್ಲು ಅಂತಾ ಗೊತ್ತಾಗಿದೆ. ಅಮೂಲ್ಯ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 124 ಎ, 153 ಎ ಮತ್ತು ಬಿ, 504 ಸಬ್​ಕ್ಲಾಸ್ 2 ಅಡಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

ರಾತ್ರಿ ಸುಮಾರು 11 ಗಂಟೆ ವೇಳೆಗೆ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್​ನಲ್ಲಿರೋ 5ನೇ ಎಸಿಎಂಎಂ ನ್ಯಾಯಾಧೀಶರಾದ ಶಿರನ್ ಜೆ ಅನ್ಸಾರಿ ಮುಂದೆ ಹಾಜರು ಪಡಿಸಿದ್ರು. ಈ ವೇಳೆ ನ್ಯಾಯಾಧೀಶರು ಅಮೂಲ್ಯಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ರು. ಇದಾದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಮಾಡಿದ್ದು, ಈ ಮೂಲಕ ಪಾಕ್ ಪರ ಘೋಷಣೆ ಕೂಗಿದೋಳು ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.

Published On - 7:08 am, Fri, 21 February 20

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ