Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿ ಸೆರೆ

ಬೆಂಗಳೂರು: ಐಟಿ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ನಿವಾಸಿ ನಾಗೇಂದ್ರ(40) ಬಂಧಿತ ಆರೋಪಿ. ಎಲ್‌ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಗೇಂದ್ರ, ಎಲ್‌ಐಸಿ ಹಣ ಪಡೆಯುವ ವೇಳೆ ಸರ್ಕಾರಿ ಅಧಿಕಾರಿಗಳ ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಅದೇ ಅಧಿಕಾರಿಗಳಿಗೆ ಮಂಜುನಾಥ್ ನಾಯಕ್ ಎಂಬ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ನಿವೃತ್ತಿಯ ಸನಿಹದಲ್ಲಿರುವವರನ್ನು ಟಾರ್ಗೆಟ್ ಮಾಡಿ ನಿಮ್ಮ ಆಸ್ತಿವಿವರ ನನ್ನ ಬಳಿ ಇದೆ, ಲೆಕ್ಕ ನೀಡಿ ಎಂದು ಧಮ್ಕಿ ಹಾಕಿ, ನಾಳೆಯೇ […]

ಐಟಿ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿ ಸೆರೆ
Follow us
ಸಾಧು ಶ್ರೀನಾಥ್​
|

Updated on: Feb 21, 2020 | 9:08 AM

ಬೆಂಗಳೂರು: ಐಟಿ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ನಿವಾಸಿ ನಾಗೇಂದ್ರ(40) ಬಂಧಿತ ಆರೋಪಿ. ಎಲ್‌ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಗೇಂದ್ರ, ಎಲ್‌ಐಸಿ ಹಣ ಪಡೆಯುವ ವೇಳೆ ಸರ್ಕಾರಿ ಅಧಿಕಾರಿಗಳ ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಅದೇ ಅಧಿಕಾರಿಗಳಿಗೆ ಮಂಜುನಾಥ್ ನಾಯಕ್ ಎಂಬ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.

ನಿವೃತ್ತಿಯ ಸನಿಹದಲ್ಲಿರುವವರನ್ನು ಟಾರ್ಗೆಟ್ ಮಾಡಿ ನಿಮ್ಮ ಆಸ್ತಿವಿವರ ನನ್ನ ಬಳಿ ಇದೆ, ಲೆಕ್ಕ ನೀಡಿ ಎಂದು ಧಮ್ಕಿ ಹಾಕಿ, ನಾಳೆಯೇ ಕಚೇರಿಗೆ ಬರುವಂತೆ ಕೇಳುತ್ತಿದ್ದ. ಆಗ ನಾವು ನಿವೃತ್ತಿ ಹಂತದಲ್ಲಿದ್ದೇವೆ ಎಂದು ಮನವಿ ಮಾಡಿಕೊಳ್ತಿದ್ರು. ಬಳಿಕ ಹಣ ನೀಡಿ ಸುಮ್ಮನಾಗಿ ಎಂದು ನಾಗೇಂದ್ರ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. ಆರೋಪಿ ಮಾತು ನಂಬಿ ಅಧಿಕಾರಿಗಳು ಹಣವನ್ನು ನೀಡಿದ್ದರು. ಹೀಗೆ ಓರ್ವ ಅಧಿಕಾರಿಗೆ ಅನುಮಾನ ಬಂದು ಪರಿಶೀಲನೆ ಮಾಡಿದ್ದಾರೆ ಈ ವೇಳೆ ಆರೋಪಿ ಮಾಡಿರುವ ವಂಚನೆ ಬಯಲಾಗಿದೆ.

ಅಧಿಕಾರಿ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರ್​ಟಿ ಓನ ಡಿಆರ್​ಡಿಓ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬರೋಬ್ಬರಿ ನೂರು ಮಂದಿ ಸರ್ಕಾರಿ ನೌಕರರಿಂದ ಕೋಟ್ಯಾಂತರ ಹಣ ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ವಿಚಾರಣೆ ವೇಳೆ ಮತ್ತಷ್ಟು ವಂಚನೆ ಪ್ರಕರಣ ಬೆಳಕಿಗೆ ಬರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ