ಬೆಂಗಳೂರು: ಚಿಕಿತ್ಸೆ ಸಿಗದೇ ಕೊರೊನಾ ಸೋಂಕಿತರೊಬ್ಬರು ನರಳಿ ನರಳಿ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ಯಶವಂತಪುರದ ಒರಾಯನ್ ಮಾಲ್ ಹಿಂಭಾಗದಲ್ಲಿರುವ ಬೆಂಗಳೂರಿನ ಬ್ರಿಗೇಡ್ ಗೇಟ್ವೇ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಈ ಉದ್ಯಮಿಗೆ ಕೊರೊನಾ ಲಕ್ಷಣಗಳಿಲ್ಲದ ಹಿನ್ನೆಲೆಯಲ್ಲಿ ತಮ್ಮ ಫ್ಲಾಟ್ನಲ್ಲಿ ಕ್ವಾರಂಟೈನ್ ಆಗಿದ್ದರು. ಈ ಸಮಯದಲ್ಲಿ ಕುಟುಂಬಸ್ಥರನ್ನು ಸೋಂಕಿತ ಉದ್ಯಮಿ, ಬೇರೆಡೆಗೆ ಕಳುಹಿಸಿದ್ದರು. ಹೀಗಾಗಿ ಒಂದು ವಾರದಿಂದ ಫ್ಲಾಟ್ನಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ.
ಕಳೆದ ರಾತ್ರಿ ಇವರ ಅಣ್ಣ ಊಟ ನೀಡಿ ಹೋಗಿದ್ದಾರೆ. ಆದ್ರೆ ತಡರಾತ್ರಿ ಉಸಿರಾಟದ ಸಮಸ್ಯೆಯಾಗಿದ್ದರಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ತೆರಳಿದ್ದರು. ಆದ್ರೆ ಬೆಡ್ ಖಾಲಿಯಿಲ್ಲವೆಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿತ್ತು. ಅಷ್ಟೇ ಅಲ್ಲ ನಿಮಗೇನು ಆಗಲ್ಲವೆಂದು ವೈದ್ಯರು ಸೋಂಕಿತನಿಗೆ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.
ಆದ್ರೆ ಸೋಂಕಿತ ಫ್ಲಾಟ್ಗೆ ಹಿಂದಿರುಗಿದ ನಂತರ ಮತ್ತಷ್ಟು ಸಮಸ್ಯೆಯಾಗಿದೆ. ನಂತರ ತೀವ್ರ ಉಸಿರಾಟದ ಸಮಸ್ಯೆಯಿಂದ ರಾತ್ರಿ ಸೋಂಕಿತ ಉದ್ಯಮಿ ಮೃತಪಟ್ಟಿದ್ದಾರೆ. ಮಲಗಿದ ಕಾಟ್ನಿಂದ ಕೆಳಗೆ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು ಎಂದೂ ತಿಳಿದು ಬಂದಿದೆ.
Published On - 1:57 pm, Fri, 10 July 20