ಕೊರೊನಾ ಸೋಂಕಿತ ವ್ಯಕ್ತಿ MVJ ಆಸ್ಪತ್ರೆಯಿಂದ ನಿನ್ನೆ ರಾತ್ರಿ ಪರಾರಿ!
ದೇವನಹಳ್ಳಿ: ಕೊವಿಡ್ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ವ್ಯಕ್ತಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯಿರುವ ಎಂವಿಜೆ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಭಾನುವಾರ ಬಿಬಿಎಂಪಿ ಸಿಬ್ಬಂದಿ ಸೋಂಕಿತನನ್ನು ಎಂವಿಜೆ ಕೊವಿಡ್ ಸೆಂಟರ್ಗೆ ದಾಖಲಿಸಿದ್ರು. ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಏಕಾಏಕಿ ನಿನ್ನೆ ಸಂಜೆ ಆಸ್ಪತ್ರೆ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಎಂವಿಜೆ ಆಸ್ಪತ್ರೆ ಸಿಬ್ಬಂದಿ, ಎಸ್ಕೇಪ್ ಆದ ಸೋಂಕಿತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆ ಮತ್ತು ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಪರಾರಿಯಾದವನಿಗಾಗಿ ಹುಡುಕಾಟ ಶುರುವಾಗಿದೆ. ಸೋಂಕಿತ ಎಸ್ಕೇಪ್ […]
ದೇವನಹಳ್ಳಿ: ಕೊವಿಡ್ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ವ್ಯಕ್ತಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯಿರುವ ಎಂವಿಜೆ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ಭಾನುವಾರ ಬಿಬಿಎಂಪಿ ಸಿಬ್ಬಂದಿ ಸೋಂಕಿತನನ್ನು ಎಂವಿಜೆ ಕೊವಿಡ್ ಸೆಂಟರ್ಗೆ ದಾಖಲಿಸಿದ್ರು. ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಏಕಾಏಕಿ ನಿನ್ನೆ ಸಂಜೆ ಆಸ್ಪತ್ರೆ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ಎಂವಿಜೆ ಆಸ್ಪತ್ರೆ ಸಿಬ್ಬಂದಿ, ಎಸ್ಕೇಪ್ ಆದ ಸೋಂಕಿತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆ ಮತ್ತು ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಪರಾರಿಯಾದವನಿಗಾಗಿ ಹುಡುಕಾಟ ಶುರುವಾಗಿದೆ. ಸೋಂಕಿತ ಎಸ್ಕೇಪ್ ಆಗಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
Published On - 1:36 pm, Fri, 10 July 20