
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,78,087ಕ್ಕೇರಿಕೆಯಾಗಿದ್ದು, ಇಂದು ಹೊಸದಾಗಿ 5,985 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ.
ಜಿಲ್ಲಾವಾರು ಪ್ರಮಾಣದಲ್ಲಿ ಬೆಂಗಳೂರು ನಗರದಲ್ಲಿ 1,948, ಮೈಸೂರಲ್ಲಿ 455, ಬಳ್ಳಾರಿಯಲ್ಲಿ 380, ಉಡುಪಿಯಲ್ಲಿ 282, ಬೆಳಗಾವಿಯಲ್ಲಿ 235 ಹಾಗೂ ರಾಯಚೂರು ಜಿಲ್ಲೆಯಲ್ಲಿ 202 ಕೇಸ್ ದಾಖಲಾಗಿವೆ.
ಕೊರೊನಾ ಸೋಂಕಿನಿಂದಾಗಿ ಇವತ್ತು ರಾಜ್ಯದಲ್ಲಿ107 ಜನರ ಸಾವನ್ನುಪ್ಪಿದ್ದು, ಇದುವರೆಗೆ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 3,198ರಷ್ಟಾಗಿದೆ. ಇದರಲ್ಲಿ ರಾಜಧಾನಿ ಬೆಂಗಳೂರಿನಲ್ಲಿಯೇ ಕೊರೊನಾ ಸೋಂಕಿಗೆ 22 ಜನರ ಬಲಿಯಾಗಿದ್ದಾರೆ.
ಇನ್ನು ಕೊರೊನಾ ಸೋಂಕಿತರ ಪೈಕಿ 93,908 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 80,973 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.