ಹಿಂಡಲಗಾ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಗೊತ್ತಾ?

ಬೆಳಗಾವಿ: ಬೆಳಗಾವಿಯಲ್ಲಿ ಕೊರೊನಾ ಮಾರಿ ದಿನೇ ದಿನೇ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದೆ. ಇದುವರೆಗೆ ಅಲ್ಲಿ ಇಲ್ಲಿ, ಗಲ್ಲಿ ಗಲ್ಲಿಯಲ್ಲಿ ಹಬ್ಬುತ್ತಿದ್ದ ಕೊರೊನಾ ಈಗ ಹಿಂಡಲಗಾ ಜೈಲಿಗೂ ನುಸುಳಿದೆ. ಹೌದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ 11 ಕೈದಿಗಳಿಗೆ ಕೊರೊನಾ ತಗುಲಿರೋದು ಈಗ ದೃಢವಾಗಿದೆ. ಹೀಗಾಗಿ ಈಗ 830 ಕೈದಿಗಳಿರುವ ಬೆಳಗಾವಿಯ ಈ ಜೈಲಿನಲ್ಲಿ ಆತಂಕ ಶುರುವಾಗಿದೆ. ಕಳೆದ ಹತ್ತು ದಿನಗಳ ಹಿಂದೆ ಒಬ್ಬ ದರೋಡೆಕೋರ ಹಾಗೂ ಒಂದು ವಾರದ ಹಿಂದೆ ಕೊಲೆಗೆ ಯತ್ನಿಸಿದ್ದ ಆರೋಪಿಗೆ ಸೋಂಕು […]

ಹಿಂಡಲಗಾ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಗೊತ್ತಾ?

Updated on: Jul 15, 2020 | 7:47 PM

ಬೆಳಗಾವಿ: ಬೆಳಗಾವಿಯಲ್ಲಿ ಕೊರೊನಾ ಮಾರಿ ದಿನೇ ದಿನೇ ತನ್ನ ಕಬಂಧ ಬಾಹುಗಳನ್ನ ಚಾಚುತ್ತಲೇ ಇದೆ. ಇದುವರೆಗೆ ಅಲ್ಲಿ ಇಲ್ಲಿ, ಗಲ್ಲಿ ಗಲ್ಲಿಯಲ್ಲಿ ಹಬ್ಬುತ್ತಿದ್ದ ಕೊರೊನಾ ಈಗ ಹಿಂಡಲಗಾ ಜೈಲಿಗೂ ನುಸುಳಿದೆ.

ಹೌದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ 11 ಕೈದಿಗಳಿಗೆ ಕೊರೊನಾ ತಗುಲಿರೋದು ಈಗ ದೃಢವಾಗಿದೆ. ಹೀಗಾಗಿ ಈಗ 830 ಕೈದಿಗಳಿರುವ ಬೆಳಗಾವಿಯ ಈ ಜೈಲಿನಲ್ಲಿ ಆತಂಕ ಶುರುವಾಗಿದೆ. ಕಳೆದ ಹತ್ತು ದಿನಗಳ ಹಿಂದೆ ಒಬ್ಬ ದರೋಡೆಕೋರ ಹಾಗೂ ಒಂದು ವಾರದ ಹಿಂದೆ ಕೊಲೆಗೆ ಯತ್ನಿಸಿದ್ದ ಆರೋಪಿಗೆ ಸೋಂಕು ತಗುಲಿತ್ತು.

ಆದ್ರೆ ಕೊರೊನಾ ವರದಿ ಬರುವ ಮುನ್ನವೇ ಈ ಇಬ್ಬರು ಕೈದಿಗಳನ್ನ ಹಿಂಡಲಗಾ ಜೈಲಿಗೆ ಶಿಪ್ಟ್ ಮಾಡಲಾಗಿತ್ತು. ಇದೀಗ ಹೊರಗಿನಿಂದ ಬಂದ ಈ ಆರೋಪಿಗಳಿಂದಲೇ ಜೈಲಿನಲ್ಲಿದ್ದ 11ಜನ ಕೈದಿಗಳಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಸೋಂಕಿತ ಕೈದಿಗಳನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.