ವೈದ್ಯರು ಕೊರೊನಾಗೆ ಹೆದರಿ ಕರ್ತವ್ಯಕ್ಕೆ ಗೈರಾದ್ರೆ ಏನಾಗುತ್ತೆ ಗೊತ್ತಾ ?
ಬೆಂಗಳೂರು: ಕೊರೊನಾದ ಸಂಕಷ್ಟ ಸಮಯದಲ್ಲಿ ಸೋಂಕಿಗೆ ಹೆದರಿ ಕರ್ತವ್ಯದಿಂದ ಹಿಂದೆ ಸರಿಯುತ್ತಿರುವ ಸರ್ಕಾರಿ ಮತ್ತು ಅರೆ ಸರ್ಕಾರಿ ವೈದ್ಯರಿಗೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಖಡಕ್ ಆಗಿ ವಾರ್ನ್ ಮಾಡಿದ್ದಾರೆ. ನೆಪ ಹೇಳಿ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿಧಾನ ಸೌಧದಲ್ಲಿ ಮಾತನಾಡುತ್ತಿದ್ದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ , ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಸರ್ಕಾರಿ ಮತ್ತು ಖಾಸಗಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ವೈರಾಣು ಭಯದಿಂದ ಕರ್ತವ್ಯದಿಂದ ಹಿಂದೆ […]

ಬೆಂಗಳೂರು: ಕೊರೊನಾದ ಸಂಕಷ್ಟ ಸಮಯದಲ್ಲಿ ಸೋಂಕಿಗೆ ಹೆದರಿ ಕರ್ತವ್ಯದಿಂದ ಹಿಂದೆ ಸರಿಯುತ್ತಿರುವ ಸರ್ಕಾರಿ ಮತ್ತು ಅರೆ ಸರ್ಕಾರಿ ವೈದ್ಯರಿಗೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಖಡಕ್ ಆಗಿ ವಾರ್ನ್ ಮಾಡಿದ್ದಾರೆ. ನೆಪ ಹೇಳಿ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಸೌಧದಲ್ಲಿ ಮಾತನಾಡುತ್ತಿದ್ದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ , ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಸರ್ಕಾರಿ ಮತ್ತು ಖಾಸಗಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ವೈರಾಣು ಭಯದಿಂದ ಕರ್ತವ್ಯದಿಂದ ಹಿಂದೆ ಸರಿಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯಾರೂ ಡ್ಯೂಟಿಯಿಂದ ತಪ್ಪಿಸಿಕೊಳ್ಳಬಾರದು. ಯಾರಾದ್ರೂ ಡ್ಯೂಟಿಯಿಂದ ತಪ್ಪಿಸಿಕೊಂಡ್ರೆ ಅವರ ಲೈಸೆನ್ಸ್ ರದ್ದು ಮಾಡಲಾಗುವುದು. ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳದವರ ರಿಜಿಸ್ಟ್ರೇಷನ್ ಮತ್ತು ಲೈಸೆನ್ಸ್ ಅನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಗರಮ್ ಆಗಿಯೇ ಎಚ್ಚರಿಸಿದ್ದಾರೆ.
ಇಷ್ಟೇ ಅಲ್ಲ ಈ ಸಂಬಂಧ ಮೆಡಿಕಲ್ ಕೌನ್ಸಿಲ್ ಹಾಗೂ ನರ್ಸಿಂಗ್ ಕೌನ್ಸಿಲ್‌ಗಳು ಕೂಡಾ ತಪ್ಪಿತಸ್ಥ ವೈದ್ಯರು ಮತ್ತು ನರ್ಸ್‌ಗಳ ವಿರುದ್ಧ ಕ್ರಮ ಜರುಗಿಸುವ ಕುರಿತು ಪ್ರಕಟಿಸಿವೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.



